ವಾಸ್ತು ದೋಷ, ಒತ್ತಡ ನಿವಾರಿಸೋ ಮಾಂತ್ರಿಕ ಹೂವು! ಇರಲಿ ನಿಮ್ಮನೆ ಹತ್ತಿರ
ಹೂವುಗಳು ಜಗತ್ತಿನ ಸುಂದರ ಸೃಷ್ಟಿ. ಇದನ್ನು ನೋಡಿದರೆ ಸಾಕು, ಮನಸ್ಸು ಉಲ್ಲಾಸಿತವಾಗುತ್ತೆ. ಹೂವುಗಳು ((flowers) ನಮ್ಮ ಜೀವನವನ್ನು ಪರಿಮಳಯುಕ್ತವಾಗಿಸುವುದು ಮಾತ್ರವಲ್ಲದೇ ವಾಸ್ತು ದೋಷಗಳನ್ನೂ ನಿವಾರಿಸುವ ಶಕ್ತಿಯನ್ನು ಹೊಂದಿವೆ ಅನ್ನೋದು ನಿಮಗೆ ಗೊತ್ತಾ?. ಹೌದು, ಹೂವುಗಳು ಶಕ್ತಿಯನ್ನು ರವಾನಿಸುತ್ತವೆ, ಅವು ಪರಿಸರವನ್ನು ಶುದ್ಧೀಕರಿಸುವುದಲ್ಲದೆ, ಸಂಬಂಧಗಳಲ್ಲಿ ಸಾಮರಸ್ಯವನ್ನು ತುಂಬಿಸುತ್ತೆ.
ಭಾರತೀಯ ಆಯುರ್ವೇದದಲ್ಲಿ ಬಹಳ ಹಿಂದೆಯೇ ವಿವಿಧ ಹೂವುಗಳನ್ನು ಬಳಸಲಾಗಿದೆ. ಕೆಲವು ಬಗೆಯ ಹೂವುಗಳು ರೋಗಗಳನ್ನು ಗುಣಪಡಿಸಲು ಸಮರ್ಥವಾಗಿವೆ ಎಂದು ಹೇಳಲಾಗುತ್ತದೆ. ಹೂವುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪೌಷ್ಟಿಕಾಂಶ ಮತ್ತು ಔಷಧೀಯ ಬಳಕೆಗೂ ಇವುಗಳನ್ನು ಉಪಯೋಗಿಸಲಾಗುತ್ತದೆ.
ಮರ, ಸಸ್ಯ ಮತ್ತು ಹೂವು ನಮ್ಮ ಜೀವನವನ್ನು ಪರಿಮಳಯುಕ್ತವಾಗಿಸುವುದು ಮಾತ್ರವಲ್ಲದೆ, ವಾಸ್ತು ದೋಷಗಳನ್ನು (vastu dosha) ನಿವಾರಿಸುವ ಶಕ್ತಿ ಹೊಂದಿವೆ. ಮನೆಯಲ್ಲಿ ಹೂವುಗಳು ಇದ್ದರೆ, ಅದನ್ನು ನೋಡುತ್ತಿದ್ದರೆ ಒತ್ತಡ ನಿವಾರಣೆಯಾಗುತ್ತೆ ಮತ್ತು ಮಾನಸಿಕ ಶಾಂತಿ ನೀಡುತ್ತದೆ. ಹೂವುಗಳು ಶಕ್ತಿಯ ಸಂವಹನ, ಅವು ವಾತಾವರಣವನ್ನು ಶುದ್ಧೀಕರಿಸುವುದಲ್ಲದೇ, ಜೀವನದಲ್ಲಿ ಸಂತೋಷ ತರುತ್ತೆ, ಅಂತಹ ಸಂತೋಷ, ನೆಮ್ಮದಿ ತರುವ ಹೂವುಗಳು ಯಾವುವೆಂದು ತಿಳಿಯೋಣ.
ದುಂಡು ಮಲ್ಲಿಗೆ
ಸಾಮಾನ್ಯವಾಗಿ ದುಂಡು ಮಲ್ಲಿಗೆ ಎಲ್ಲೆಡೆ ಕಂಡುಬರುತ್ತದೆ, ಆದರೆ ಮನೆಯ ಅಂಗಳದಲ್ಲಿ ದುಂಡು ಮಲ್ಲಿಗೆ ಹೂವು ಇದ್ದರೆ, ಅದರಿಂದ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತೆ. ಮನೆಯ ಅಂಗಳದಲ್ಲಿ ಅದರ ಉಪಸ್ಥಿತಿಯು ನಿಮ್ಮ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತೆ.
ಪಾರಿಜಾತ
ಪಾರಿಜಾತದ ಹೂವುಗಳನ್ನು ಹೊಂದಿರುವ ಮನೆ ಯಾವಾಗಲೂ ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರುತ್ತೆ ಎನ್ನಲಾಗುತ್ತದೆ. ಪಾರಿಜಾತದ ಹೂವುಗಳನ್ನು ಹರ್ಸಿಂಗರ್ ಎಂದೂ ಕರೆಯುತ್ತಾರೆ. ಈ ಹೊಳೆಯುವ ಹೂವುಗಳು ರಾತ್ರಿಯಲ್ಲಿ ಮಾತ್ರ ಅರಳುತ್ತವೆ ಮತ್ತು ಬೆಳಿಗ್ಗೆ ತಮ್ಮಷ್ಟಕ್ಕೆ ತಾವೇ ಮರದಿಂದ ಬೀಳುತ್ತವೆ. ಆಯುರ್ವೇದದ ಪ್ರಕಾರ, ಇದರ ಹೂವುಗಳು ಒತ್ತಡ ನಿವಾರಿಸುವ (Stress Control) ಸಾಮರ್ಥ್ಯ ಮತ್ತು ಅನೇಕ ದೈವಿಕ ಔಷಧೀಯ ಗುಣ ಹೊಂದಿವೆ.
ಸಂಪಿಗೆ ಹೂವು
ಚಂಪಾ ಅಥವಾ ಸಂಪಿಗೆ ಹೂವುಗಳು ಪೂಜೆಗೆ ಸಹ ಉಪಯುಕ್ತ. ವಾತಾವರಣವನ್ನು ಶುದ್ಧೀಕರಿಸಲು ಸಂಪಿಗೆ ಸಸ್ಯವನ್ನು ನೆಡಲಾಗುತ್ತದೆ. ಚಂಪಾ ಹೂವುಗಳನ್ನು ಅನೇಕ ರೋಗಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ. ಇದು ಮನೆಯಲ್ಲಿದ್ದರೆ ಶುದ್ಧ ವಾತಾವರಣ ಇರುತ್ತೆ.
ಮಲ್ಲಿಗೆ
ಬೇಸಿಗೆಯಲ್ಲಿ ಮಲ್ಲಿಗೆ ಹೂವುಗಳು ಅರಳುತ್ತವೆ. ಇದರ ಮನ ಸೆಳೆಯುವ ಪರಿಮಳ (fragrance) ನಮ್ಮ ದೇಹ ಮತ್ತು ಮನಸ್ಸಿಗೆ ತಂಪಿನ ಭಾವನೆಯನ್ನು ನೀಡುತ್ತದೆ. ಮಲ್ಲಿಗೆ ಹೂವುಗಳ ಪರಿಮಳವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ಕೋಪವನ್ನು ಶಾಂತಗೊಳಿಸುತ್ತದೆ. ಒಟ್ಟಲ್ಲಿ ಇದು ಮನಸ್ಸನ್ನು ಶಾಂತಗೊಳಿಸುತ್ತೆ.
ಗುಲಾಬಿ
ಗುಲಾಬಿಗಳನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹೂವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಗುಲಾಬಿಗಳ ಪರಿಮಳ ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲದೇ, ಒತ್ತಡ ನಿವಾರಿಸುತ್ತದೆ ಮತ್ತು ಸಂಬಂಧದಲ್ಲಿ ಮಾಧುರ್ಯವನ್ನು ಕಾಪಾಡುತ್ತೆ.