ಕಲಿಯುಗದ ಕೊನೆಯ ಭಯಾನಕ ರಾತ್ರಿ ಹೇಗಿರುತ್ತೆ?
ಕಲಿಯುಗದಲ್ಲಿ ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ, ನೈತಿಕತೆ ಕುಸಿತ, ಅಪರಾಧಗಳ ಹೆಚ್ಚಳ, ಜನರಲ್ಲಿ ಭಯ, ಅಸುರಕ್ಷತೆ. ಕೊನೆಯ ರಾತ್ರಿಯಲ್ಲಿ ಜನರು ದುರ್ಬಲರಾಗಿ, ಆಹಾರದ ಕೊರತೆ, ಅರಾಜಕತೆ. ಕಲ್ಕಿ ಅವತಾರದಲ್ಲಿ ವಿಷ್ಣುವಿನ ಆಗಮನ.

ಕಲಿಯುಗದಲ್ಲಿ ಸಂಬಂಧಗಳಿಗಿಂತ ಹಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಕಲಿಯುಗವನ್ನು ಭಯಾನಕ, ಪಾಪದ ಯುಗ ಎಂದು ಕರೆಯಲಾಗುತ್ತದೆ. ಈ ಯುಗ ಯಾವಾಗ ಅಂತ್ಯವಾಗುತ್ತೆ ಪ್ರಶ್ನೆಗೆ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಕಲಿಯುಗದ ಅಂತ್ಯ ಮತ್ತು ಕೊನೆಯ ಭಯಾನಕ ರಾತ್ರಿ ಹೇಗಿರಲಿದೆ ವಿಷ್ಣು ಪುರಾಣದಲ್ಲಿ ವಿವರವಾಗಿ ತಿಳಿಸಲಾಗಿದೆ.
ಕಲಿಯುಗದ ಕೊನೆ ದಿನಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ. ಚಿಕ್ಕ ವಿಷಯಗಳಿಗೂ ಜನರು ಹೊಡೆದಾಟ ಮಾಡಿಕೊಳ್ಳುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ. ಕಳ್ಳತನ, ದರೋಡೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಸಾಮಾನ್ಯವಾಗುತ್ತವೆ. ಕಾನೂನುಗಳಿಗೆ ಹೆದರದೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ಅಪರಾಧ ಮತ್ತು ಹಿಂಸೆಯಿಂದಾಗಿ ಜನರಲ್ಲಿ ಅಸುರಕ್ಷತೆಯ ಭಾವನೆಯುಂಟಾಗುತ್ತದೆ. ಸಮಾಜದಲ್ಲಿ ಭಯ ಮತ್ತು ಅರಾಜಕತೆ ಉಂಟಾಗಿ ಜನರು ರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗಲು ಹೆದರುತ್ತಾರೆ. ಈ ರಾತ್ರಿ ವಿನಾಶ ಮತ್ತು ಕತ್ತಲೆಯ ಸಂಕೇತವಾಗಿರುತ್ತದೆ. ಕಲಿಯುಗ ಅಂತ್ಯದ ಸಮಯದಲ್ಲಿ ಜನರು ಭಯದ ನೆರಳಿನಲ್ಲಿಯೇ ಬದುಕುತ್ತಿರುತ್ತಾರೆ.
ಕಲಿಯುಗದ ಕೊನೆ ರಾತ್ರಿ?
ಮನುಷ್ಯರು ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗಿ ಕೆಲಸ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳದಷ್ಟು ದುರ್ಬಲ ಸ್ಥಿತಿಯನ್ನು ತಲುಪಿರುತ್ತಾರೆ. ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಸಂಪೂರ್ಣವಾಗಿ ಅಸಹಾಯಕರಾಗುತ್ತಾರೆ.
ಭೂಮಿಯ ಮೇಲಿನ ಆಹಾರ ಧಾನ್ಯಗಳು ಖಾಲಿಯಾಗಿ ಭೂಕಂಪ, ಮಳೆಗಾಳಿಯುಂಟಾಗುತ್ತದೆ. ಹಸಿವು ಮತ್ತು ಬಾಯಾರಿಕೆಯಿಂದ ಬಳಲುವ ಜನರು ಪರಸ್ಪರ ಲೂಟಿ ಮಾಡಿಕೊಳ್ಳಲಾರಂಭಿಸುತ್ತಾರೆ. ಭೂಮಿಯ ಮೇಲೆ ಅಧರ್ಮ ಮತ್ತು ಅರಾಜಕತೆ ಸೃಷ್ಟಿಯಾಗಿ ಭಗವಾನ್ ವಿಷ್ಣು ತನ್ನ ಕಲ್ಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ.
ಕಲಿಯುಗದ ಬಳಿಕ ಸತ್ಯಯುಗ ಆರಂಭ
ಶ್ರೀಮದ್ ಭಾಗವತ ಪುರಾಣದ ಪ್ರಕಾರ, ಅವರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ವಿಷ್ಣುಯಾಶ್ ಎಂಬ ಬ್ರಾಹ್ಮಣನ ಮನೆಯಲ್ಲಿ ಜನಿಸುತ್ತಾರೆ. ಅವರು ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾರೆ, ಕತ್ತಿ ಮತ್ತು ಬಿಲ್ಲಿನಿಂದ ದುಷ್ಟತನವನ್ನು ನಾಶಮಾಡುತ್ತಾರೆ ಮತ್ತು ನಂತರ ಸತ್ಯಯುಗ ಪ್ರಾರಂಭವಾಗುತ್ತ