ಜುಗ್ಗರಲ್ಲ, ಧಾರಾಳಿಯಂತೂ ಅಲ್ಲವೇ ಅಲ್ಲ ಇದು ಕುಂಭ ರಾಶಿಯವರ ಗುಣ ವಿಶೇಷ...
ನಮ್ಮ ನಮ್ಮ ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಮನುಷ್ಯನ ವ್ಯಕ್ತಿತ್ವ, ಗುಣಗಳು ಅವಲಂಬಿತವಾಗಿರುತ್ತವೆ ಎಂಬುವುದು ಎಲ್ಲರಿಗೂ ಗೊತ್ತು. ಒಂದೊಂದು ಕಡೆ ಈ ವಿಷಯ ಒಂದೊಂದು ರೀತಿಯಲ್ಲಿ ಆಗಾಗ ಚರ್ಚಿತವಾಗುತ್ತಲೇ ಇರುತ್ತದೆ. ನಮ್ಮ ಜನ್ಮ ರಾಶಿಯವರ ಗುಣ ಯಾವ ರೀತಿ ಇರುತ್ತೆ ಅಂತ ತಿಳಿದುಕೊಳ್ಳಲು ಮನುಷ್ಯನಿಗೆ ವಿಪರೀತ ಕುತೂಹಲ. ಅಷ್ಟಕ್ಕೂ ಕುಂಭ ರಾಶಿಯವರ ಗುಣವೇನು ?

ಸಿಕ್ಕಾಪಟ್ಟೆ ಪರ್ಫೆಕ್ಷನಿಸ್ಟ್ ನಾನು. ಸತ್ಯ ಹರಿಶ್ಚಂದ್ರನ ಮಗ ಅಥವಾ ಮಗಳು. ಎಲ್ಲರನ್ನೂ ಪ್ರೀತಿಸಬಲ್ಲೆ.....ಹಾಗೇ ಹೀಗೆ ಹೇಳಿ ಕೊಳ್ತಾ ಇರೋರನ್ನು ಗಮನಿಸಿದ್ದೀರಾ? ಬೇಕಾದರೆ ಕೇಳಿ ನೋಡಿ ಅವರ ರಾಶಿ ಕುಂಭವಾಗಿರುತ್ತದೆ.

ಸಿಕ್ಕಾಪಟ್ಟೆ ಮೂಡಿಗಳು ಕುಂಭ ರಾಶಿಯವರು. ಯಾವಾಗ ಖುಷಿಯಾಗಿರುತ್ತಾರೋ, ಯಾವಾಗ ಇವರಿಗೆ ಬೇಜಾರಾಗುತ್ತೋ ಗೊತ್ತೇ ಆಗೋಲ್ಲ. ಇವರನ್ನು ನಂಬಿ ಕೊಂಡು ಏನಾದ್ರೂ ಮಾಡಲು ಹೊರಟರೆ ಕೆಲವೊಮ್ಮೆ ಚೊಂಬೇ ಗತಿ. ಸದಾ ಒಂಟಿಯಾಗಿರಲು ಇಷ್ಟ ಪಡೋ ಈ ಗಿರಾಕಿಗಳು ತಮ್ಮದೇ ಲೋಕದಲ್ಲಿ ಯಾವಾಗಲೂ ವಿಹರಿಸುತ್ತಿರುತ್ತಾರೆ. ಎಲ್ಲರೊಳಗೊಂದಾಗಿ, ಎಲ್ಲರನ್ನೂ ನಗಿಸುತ್ತಾ ಖುಷ್ ಖುಷಿಯಾಗಿಯೇ ಇರ್ತಾರೆ. ಸಡನ್ ಆಗಿ ಏನಾಗುತ್ತೋ ಗೊತ್ತಿಲ್ಲ. ಸಿಡಿಮಿಡಿಗೊಳ್ಳಲು ಸ್ಟಾರ್ಟ್ ಮಾಡುತ್ತಾರೆ. ಏಕೆ, ಎಂಥ ಕೇಳಿದರೆ ಕಥೆ ಮುಗೀತು. ಇವರ ಸಿಟ್ಟು ಮತ್ತೆ ನೆತ್ತಿಗೇರುತ್ತೆ.

ಮನುಷ್ಯನಿಗೆ ಇನ್ನೊಬ್ಬನ ಮೇಲೆ ಕುತೂಹಲ ಸಹಜ. ಬೇಕಾಗಿರಲಿ, ಬೇಡವಿರಲಿ, ಸುಖಾ ಸುಮ್ಮನೆ ತಿಳಿದುಕೊಳ್ಳುವ ಹಂಬಲ ಮನುಷ್ಯನ ಸಹಜ ಗುಣ. ಆದರೆ, ಕುಂಭ ರಾಶಿಯವರಿಗೆ ಅದು ಸ್ವಲ್ಪ ಹೆಚ್ಚು. ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳಲು ವಿಪರೀತ ಕುತೂಹಲ. ಕೆಲವೊಮ್ಮೆ ಇನ್ನೊಬ್ಬರನ್ನು ಕೇಳಬಾರದ ತೀರಾ ವೈಯಕ್ತಿಕ ಪ್ರಶ್ನೆಗಳನ್ನೂ ಇವರು ಕೇಳಿ ಬಿಡುತ್ತಾರೆ.

ಮನುಷ್ಯ ಎಂದ ಮೇಲೆ ತಪ್ಪು ಮಾಡೋದು ಸಹಜ ಬಿಡಿ. ಅದಕ್ಕೆ ಕುಂಭ ರಾಶಿಯವರು ಹೊರತಲ್ಲ. ಅಪ್ಪಿತಪ್ಪಿ ಅವರ ತಪ್ಪನ್ನು ಯಾರಾದ್ರೂ ಇದ್ದಿದ್ದನ್ನು ಇದ್ದ ಹಾಗೆ ಅವರ ಮಾಡಿರುವ ತಪ್ಪನ್ನು ಹೇಳಿದರೆ ಎದ್ದು ಬಂದು ಎದೆಗೆ ಒದ್ನಂತೆ ಅನ್ನೋ ರೀತಿ ಆಡುವುದರಲ್ಲಿ ಇವರು ನಿಸ್ಸೀಮರು. ಕೆಲವರು ಟ್ಯೂಬ್ ಲೈಟ್. ಅವರಿಗೆ ಸೂಕ್ಷ್ಮತೆಗಳು ಅರ್ಥವಾಗುವುದೇ ಇಲ್ಲ. ಒಳ್ಳೆ ಜೋಕಿಗೂ ಇವರು ನಗುವುದು ಕಷ್ಟ. ಮತ್ತೆ ಕೆಲವರು ಬೆರಳು ಕೊಟ್ಟರೆ ಹಸ್ತ ನುಂಗುವಂಥ ಸ್ವಭಾವ.

ಮಾತಿಗೆ ತಪ್ಪೋ ಜನ ಕುಂಭ ರಾಶಿಯವರದ್ದು. ಮಾಡಿರುವ ಪ್ರಾಮೀಸ್ ಅವರಿಗೇ ಮರೆತು ಹೋಗುವುದರಿಂದ ಹೀಗಾಗುತ್ತೆ ಅವರಿಗೆ. ಹೋಗಲಿ ಮರೆತು ಹೋಗಿದೆ ಅಂತ ಸುಮ್ಮನಿರಬಹುದಲ್ಲ. ಪ್ರಾಮೀಸ್ ಮಾಡಿಯೇ ಎಲ್ಲವೆಂದು ವಾದ ಮಾಡುವ ಹಠ ಬೇರೆ ಈ ರಾಶಿಯವರಿಗೆ. ಏನು ಹೇಳುವುದು ಇಂಥ ಸ್ವಭಾವಕ್ಕೆ?

ಒಂದು ರೀತಿ ಒಬ್ಬರಿಗೊಬ್ಬರಿಗೆ ಹಚ್ಚಿ ಹಾಕಿ ಮಜಾ ತೆಗೆದುಕೊಳ್ಳುವ ಸ್ವಭಾವ ಈ ರಾಶಿಯವರದ್ದು. ಇನ್ನೇನು ತಮ್ಮ ಬುಡಕ್ಕೆ ಬೆಂಕಿ ಬೀಳುತ್ತೆ ಎಂದಾಗ ಅಲ್ಲಿಂದ ಕಾಲ್ಕೀಳುತ್ತಾರೆ. ಅಥವಾ ತಪ್ಪಿಸಿಕೊಳ್ಳಲು ಆಗದಿದ್ದರೆ ಬೇಗ ರಾಜಿ ಮಾಡಿಕೊಂಡು ಬಿಡುವ ವಿಚಿತ್ರ ಸ್ವಭಾವದವರು.

- ಈ ಕುಂಭ ರಾಶಿಯವರ Sixth Sense ಸಿಕಪಟ್ಟೆ ವರ್ಕ್ ಆಗುತ್ತಿರುತ್ತೆ. ಮುಂದೇನಾಗಬಹುದೆಂಬುದರ ಭವಿಷ್ಯ ನುಡಿಯುತ್ತಾರೆ. ಅನೇಕ ಸಾರಿ ಅದು ಸತ್ಯವೂ ಆಗಿ ಬಿಡುವುದು ಈ ರಾಶಿಯವರು ವಿಶೇಷ. ತನ್ನ ಸಾವು ಹೇಗೆ ಬರುತ್ತದೆ ಎಂದು ಮೊದಲೇ ಹೇಳಿ ಕೊಂಡಿದ್ದ ಅಮೆರಿಕ ಅದ್ಯಕ್ಷ ಅಬ್ರಹಂ ಲಿಂಕನ್ ಅವರದ್ದು ಕುಂಭ ರಾಶಿ. ಇಂಥ ಅನೇಕ ರಾಜಕೀಯ ಗಣ್ಯರು ಹಾಗೂ ಸಾಹಿತಿಗಳೂ ಈ ರಾಶಿಗೆ ಸೇರಿದವರಾಗಿದ್ದಾರೆ.

ಕುಂಭ ರಾಶಿಯವರನ್ನು ಬೇಕಾದರೆ ಗಮನಿಸಿ, ಶೀತ ಶರೀರ ಅವರದ್ದು. ಸದಾ ಸುರ್ ಪರ್ ಎನ್ನುತ್ತಾರೆ. ಸೀನು ಅವರನ್ನು ನೆರಳಿನಂತೆ ಕಾಡುತ್ತದೆ. ಶೀತದ ಸಮಸ್ಯೆಯ ಕಾರಣಕ್ಕೋ ಏನೋ ಸ್ವಲ್ಪ ಬೇಗಲೇ ಶ್ರವಣ ದೋಷವೂ ಇವರಿಗಿರುತ್ತದೆ. ಪಿಸು ಮಾತನಾಡಿದ್ದು ಇವರಿಗೆ ಕೇಳುವುದೇ ಇಲ್ಲ.

ತುಂಬಾ ಸ್ವಾಭಿಮಾನಿಗಳಿವರು. ಗಂಜಿ ಉಣ್ಣೋದಾದರೂ ಸರಿ, ಸಾಲ ಮಾಡಲು ಒಪ್ಪುವುದಿಲ್ಲ. ಪಡೆದ ದುಡ್ಡನ್ನು ಮರಳಿ ಕೊಡುವವರೆಗೆ ತಿಂದಿದ್ದು ಜೀರ್ಣವಾಗೋಲ್ಲ ಇವರಿಗೆ.

ಮನಿ ಮ್ಯಾನೇಜ್‌ಮೆಂಟ್ ಈ ರಾಶಿಯವರಿಗೆ ಚೆನ್ನಾಗಿ ಗೊತ್ತಿರುತ್ತೆ. ಸಿಕ್ಕಾಪಟ್ಟೆ ಜುಗ್ಗರಲ್ಲ. ಎಲ್ಲಿ ಖಾಲಿ ಮಾಡಬೇಕೋ ಅಲ್ಲಿ ಖಾಲಿ ಮಾಡುತ್ತಾರೆ. ಹಾಗಂಥ ಸಾಲ ಕೇಳಲು ಬಂದರೆ ಸರಿಯಾಗಿ ಲೆಕ್ಕ ಕೊಡಬೇಕು ಇವರಿಗೆ. ದುಡ್ಡಿನ ವಿಷಯದಲ್ಲಿ ಶಿಸ್ತು ತಪ್ಪಿದರೋ ಅವರ ಸ್ನೇಹ ಕಳೆದಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.