ಗೋಕರ್ಣ ಮಹಾಗಣಪತಿ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು!

First Published 22, Aug 2020, 11:42 AM

ಗೋಕರ್ಣ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಆತ್ಮಲಿಂಗ, ಗಣಪತಿ ದೇವಾಲಯ ಸೇರಿದಂತೆ ಹತ್ತಾರು ದೇಗುಲಗಳು, ಕೋಟಿತೀರ್ಥ, ಕಡಲತೀರ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.

ಆತ್ಮಲಿಂಗ ಇರುವ ಮಹಾಬಲೇಶ್ವರ ದೇವಾಲಯದ ಸಮೀಪ ಮಹಾಗಣಪತಿ ದೇವಾಲಯ ಇದೆ. ಭಕ್ತರು ಮೊದಲು ಗಣಪನನ್ನು ಪೂಜಿಸಿ ತರುವಾಯ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯ.

ಪ್ರತಿದಿನ ಸಾಕಷ್ಟುಸಂಖ್ಯೆಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 3 ಅಥವಾ 4ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣಗೊಂಡಿರಬೇಕೆಂಬ ಅಭಿಪ್ರಾಯ ಇದೆ. ಈ ಮೂರ್ತಿಯೂ ಕದಂಬರ ಕಾಲದ್ದಾಗಿದೆ. ನಿಂತ ಭಂಗಿಯಲ್ಲಿರುವ ಈ ದ್ವಿಭುಜ ಗಣಪತಿ ಅರ್ಧವೃತ್ತಾಕಾರದ ನಡುಭಾಗವನ್ನು ಹೊಂದಿದೆ.

ಪೌರಾಣಿಕ ಹಿನ್ನೆಲೆ: ಗೋಕರ್ಣದಲ್ಲಿ ಶಿವನ ಆತ್ಮಲಿಂಗ ಇದೆ. ರಾವಣ ಪರಮೇಶ್ವರನಿಂದ ಆತ್ಮಲಿಂಗ ಪಡೆದು ಲಂಕೆಗೆ ಒಯ್ಯುತ್ತಿರುವಾಗ ಗೋಕರ್ಣಕ್ಕೆ ಬರುತ್ತಾನೆ.

ಆಗ ದೇವತೆಗಳ ಕೋರಿಕೆಯಂತೆ ಗಣಪತಿ ಗೋಕರ್ಣಕ್ಕೆ ಬಂದು ಆತ್ಮಲಿಂಗವನ್ನು ಭೂಮಿಯ ಮೇಲಿಟ್ಟು ಪ್ರತಿಷ್ಠಾಪಿಸುತ್ತಾನೆ. ರಾವಣ ಸಿಟ್ಟಿನಿಂದ ಗಣಪತಿ. ತಲೆಯ ಮೇಲೆ ಹೊಡೆಯುತ್ತಾನೆ. ಇದಕ್ಕಾಗಿ ಗಣಪತಿಯ ತಲೆಯ ಮೇಲೊಂದು ಕುಳಿಯನ್ನು ಕಾಣಬಹುದು.

ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ ಗೋಕರ್ಣ. ಕುಮಟಾದಿಂದ 33 ಕಿ.ಮೀ., ಅಂಕೋಲಾದಿಂದ 27 ಕಿ.ಮೀ.ದೂರ ಇದೆ.

ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರ ಇದೆ. ಸಮೀಪದಲ್ಲಿ ರೈಲು ನಿಲ್ದಾಣ ಇದೆ.

loader