ಪೂಜೆಯಲ್ಲಿ ಬಾಳೆ ಎಲೆಗೇಕೆ ಪ್ರಾಮುಖ್ಯತೆ ?
ಪೂಜೆಯಲ್ಲಿ ಬಾಳೆ ಎಲೆಗಳು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿವೆ. ವಿಶೇಷವಾಗಿ ಭಾರತದ ದಕ್ಷಿಣ ಪ್ರದೇಶದಲ್ಲಿ, ಬಾಳೆ ಎಲೆಗಳನ್ನು ವಿಶೇಷವಾಗಿ ಪೂಜೆಯ ಸಮಯದಲ್ಲಿ ಬಳಸಲಾಗುತ್ತೆ. ಹಾಗಾಗಿ, ಪೂಜೆಯಲ್ಲಿ ಬಾಳೆ ಎಲೆಗಳ ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ ಬಾಳೆಹಣ್ಣನ್ನು, ಬಾಳೆ ಎಲೆಯನ್ನು(Banana leaf) ತುಂಬಾ ಪವಿತ್ರವೆಂದು ಪರಿಗಣಿಸಲಾಗುತ್ತೆ. ಬಾಳೆ ಎಲೆಗಳನ್ನು ಯಾವುದೇ ಪೂಜೆ, ಪಠಣ, ಹವನ, ಆಚರಣೆ ಇತ್ಯಾದಿಗಳಲ್ಲಿ ಬಳಸಲಾಗುತ್ತೆ. ಬಾಳೆ ಎಲೆಗಳನ್ನು ಮಾತ್ರವಲ್ಲದೆ ಬಾಳೆ ಮರವನ್ನು ಮತ್ತು ಬಾಳೆ ಕಾಂಡವನ್ನು ಸಹ ಬಳಸಲಾಗುತ್ತೆ.
ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿ(Lord Vishnu and Goddess Lakshmi) ಬಾಳೆ ಗಿಡದಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗಿದೆ. ಹಾಗೆಯೇ, ಬಾಳೆ ಗಿಡವು ಗುರುಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ, ಪೂಜೆಯ ಸಮಯದಲ್ಲಿ ಬಾಳೆ ಎಲೆಗಳನ್ನು ಬಳಸೋದರಿಂದ, ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.
ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ, ಪೂಜಾ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತೆ ಎಂಬ ನಂಬಿಕೆ. ಹಾಗೆಯೇ, ಗುರು ಗ್ರಹವೂ ಆಶೀರ್ವದಿಸಲ್ಪಡುತ್ತೆ ಎಂದು ನಂಬಲಾಗಿದೆ. ಪೂಜೆಯಲ್ಲಿ(Pooja) ಬಾಳೆ ಎಲೆಗಳನ್ನು ಬಳಸೋದರಿಂದ, ಜಾತಕದಲ್ಲಿ ಗುರುವಿನ ಸ್ಥಾನ ಹೆಚ್ಚಾಗಿರುತ್ತೆ ಮತ್ತು ಶುಭ ಫಲಿತಾಂಶ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಎಂದು ನಂಬಲಾಗಿದೆ.
ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ಯಾಕೆ ಇದೆ ಅನ್ನೋದನ್ನು ನೀವು ಯೋಚಿಸಿರಬಹುದು. ಇದು ಯಾಕೆಂದರೆ ಬಾಳೆ ಎಲೆಗಳ ಮೇಲೆ ಮಾತಾ ಲಕ್ಷ್ಮಿ ಮತ್ತು ವಿಷ್ಣುವನ್ನು ನೆಲೆಸಿರುತ್ತಾರೆ ಹಾಗಾಗಿ ಅದರಲ್ಲಿ ಆಹಾರ(Food) ಸೇವಿಸುವುದರಿಂದ, ಮನೆಯಲ್ಲಿ ಆಹಾರ ಯಾವಾಗಲೂ ತುಂಬಿರಲಿದೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಬಾಳೆ ಎಲೆಯ ಮೇಲೆ ಬಾಳೆಹಣ್ಣನ್ನು ಸೇವಿಸಿದರೆ ಸುಮಧುರ ವೈವಾಹಿಕ ಜೀವನ(Marrie dlife) ನಿಮ್ಮದಾಗುತ್ತೆ ಎನ್ನಲಾಗುತ್ತದೆ., ಅದು ವೈವಾಹಿಕ ಜೀವನದ ಸಮಸ್ಯೆಗಳನ್ನು ತೆಗೆದುಹಾಕುತ್ತೆ ಮತ್ತು ವೈವಾಹಿಕ ಜೀವನದ ಸಂಪೂರ್ಣ ಸಂತೋಷವನ್ನು ನೀಡುತ್ತೆ ಎಂದು ಹೇಳಲಾಗುತ್ತೆ.
ಸತ್ಯನಾರಾಯಣನ ಪೂಜೆ (Sathyanarayana pooja) ಇದ್ದಾಗ, ಬಾಳೆ ಗಿಡದ ಮಂಟಪ ಸಹ ನಿರ್ಮಿಸಲಾಗುತ್ತೆ. ಏಕೆಂದರೆ ಬಾಳೆ ಗಿಡದ ಮಂಟಪ ಮಾತ್ರ ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತೆ ಎಂಬುದು ನಂಬಿಕೆ. ಹಾಗೆಯೇ, ಬಾಳೆ ಗಿಡದ ಮಂಟಪದಿಂದ ಗ್ರಹಗಳು ಸತ್ಯನಾರಾಯಣ ದೇವರ ಅನುಗ್ರಹದಿಂದ ಅನುಕೂಲಕರ ಪರಿಣಾಮಗಳನ್ನು ತೋರಿಸುತ್ತವೆ. ಅದಕ್ಕಾಗಿಯೇ ಯಾವುದೇ ಪೂಜೆ ಅಥವಾ ಆಚರಣೆಯ ಸಮಯದಲ್ಲಿ ಬಾಳೆ ಎಲೆಗಳನ್ನು ಬಳಸಲಾಗುತ್ತೆ.