Jyotirlinga Yatra: ಶ್ರಾವಣದಲ್ಲಿ ಶಿವನ 12 ಜ್ಯೋತಿರ್ಲಿಂಗ ದರ್ಶನದ ಮೂಲಕ ಪುಣ್ಯ ಪ್ರಾಪ್ತಿ!
ಎಲ್ಲಾ ಜ್ಯೋತಿರ್ಲಿಂಗಗಳ ದರ್ಶನ ಮಾಡೋದ್ರಿಂದ, ಜನರು ಮೋಕ್ಷ ಪಡೆಯುತ್ತಾರೆ, ಜೊತೆಗೆ ಪುತ್ರ ಭಾಗ್ಯ ಪಡೆಯುತ್ತಾರೆ ಎಂದು ನಂಬಲಾಗಿದೆ. ಅದರ ಪೌರಾಣಿಕ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ ...
ಸನಾತನ ಹಿಂದೂ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತೆ. ಶ್ರಾವಣ ಮಾಸ(Shravan) ಶಿವನಿಗೆ ಬಹಳ ಪ್ರಿಯವಾಗಿದೆ. ಈ ಸಮಯದಲ್ಲಿ, ಶಿವನನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸೋದ್ರಿಂದ ಶಿವನ ವಿಶೇಷ ಆಶೀರ್ವಾದ ಪಡೆಯುತ್ತೀರಿ. ಈ ಕಾರಣದಿಂದಾಗಿ, ಶಿವನ 12 ಜ್ಯೋತಿರ್ಲಿಂಗಗಳು ವಿಶೇಷ ಮಹತ್ವವನ್ನು ಹೊಂದಿವೆ.
ಭಾರತದಲ್ಲಿ ಒಟ್ಟು 12 ಜ್ಯೋತಿರ್ಲಿಂಗಗಳಿವೆ(Jyotirlinga). ಈ 12 ಜ್ಯೋತಿರ್ಲಿಂಗಗಳಲ್ಲಿ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ಕೇದಾರೇಶ್ವರ, ಭೀಮಾಶಂಕರ, ವಿಶ್ವನಾಥ, ತ್ರಯಂಬಕೇಶ್ವರ, ವೈದ್ಯನಾಥ, ನಾಗೇಶ್ವರ, ರಾಮೇಶ್ವರ ಮತ್ತು ಘೃಷ್ಣೇಶ್ವರ ಸೇರಿವೆ.
ಶಿವನ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ ಪೂಜಿಸೋದರಿಂದ ಭಕ್ತರ ಎಲ್ಲಾ ಪಾಪ ಮತ್ತು ಕಷ್ಟಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.ಆದ್ದರಿಂದ ನೀವು ಕೂಡ ಒಮ್ಮೆ ಎಲ್ಲಾ ಶಿವನ(Shiva) ಜ್ಯೋತಿರ್ಲಿಂಗಗಳನ್ನು ಭೇಟಿ ನೀಡಿ ಶಿವನ ಆಶೀರ್ವಾದಕ್ಕೆ ಪಾತ್ರರಾಗಿ.
ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ವೈದ್ಯನಾಥ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರ, ವಿಶ್ವನಾಥ, ತ್ರಯಂಬಕೇಶ್ವರ, ಕೇದಾರನಾಥ (Kedarnath)ಮತ್ತು ಘೃಷ್ಣೇಶ್ವ ರಜ್ಯೋತಿರ್ಲಿಂಗಗಳು ಕ್ರಮವಾಗಿ ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲಿವೆ.
ಶ್ರಾವಣ ಮಾಸದಲ್ಲಿ, ಜುಲೈ 15 ರಂದು ಶ್ರಾವಣ ಶಿವರಾತ್ರಿಯ ಉಪವಾಸವನ್ನು ಸಹ ಆಚರಿಸಲಾಗುತ್ತೆ. ಕಾವಡ ಯಾತ್ರೆಯು ಶ್ರಾವಣ ತಿಂಗಳ ಆರಂಭದಿಂದ ಪ್ರಾರಂಭವಾಗುತ್ತೆ, ಇದು ಶ್ರಾವಣ ಶಿವರಾತ್ರಿಯಂದು ಕೊನೆಗೊಳ್ಳುತ್ತೆ, ಕಾವಾಡಿಗಳು ಗಂಗಾ ನೀರನ್ನು ತುಂಬಿಸಲು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ ಮತ್ತು ಶ್ರಾವಣ ಶಿವರಾತ್ರಿಯ(Shivrathri) ದಿನದಂದು ಅವರು ಶಿವಲಿಂಗವನ್ನು ಅದೇ ನೀರಿನಿಂದ ಪೂಜಿಸುತ್ತಾರೆ. ಆದ್ದರಿಂದ, ಈ ಉಪವಾಸವು ಶಿವ ಭಕ್ತರಿಗೆ ಬಹಳ ವಿಶೇಷವಾಗಿದೆ.
ಪುರಾಣಗಳಲ್ಲಿ ಶಿವ ಮತ್ತು ವಿಷ್ಣುವಿನ ಜನನದ ಬಗ್ಗೆ ಅನೇಕ ಕಥೆಗಳಿವೆ. ಶಿವ ಪುರಾಣದ ಪ್ರಕಾರ, ಶಿವನನ್ನು ಸ್ವಯಂಭು ಎಂದು ಪರಿಗಣಿಸಲಾಗುತ್ತೆ ಮತ್ತು ವಿಷ್ಣು(Vishnu) ಪುರಾಣದ ಪ್ರಕಾರ, ವಿಷ್ಣುವನ್ನು ಸ್ವಯಂಭು ಎಂದು ಪರಿಗಣಿಸಲಾಗುತ್ತೆ.
ವಿಷ್ಣು ಪುರಾಣದ ಪ್ರಕಾರ, ಬ್ರಹ್ಮನು(Brahma) ವಿಷ್ಣುವಿನ ಹೊಕ್ಕುಳ ಕಮಲದಿಂದ ಜನಿಸಿದರೆ, ಶಿವನು ವಿಷ್ಣುವಿನ ಹಣೆಯ ಪ್ರಕಾಶದಿಂದ ಜನಿಸಿದನು ಎಂದು ಹೇಳಲಾಗುತ್ತೆ. ಹಣೆಯ ಹೊಳಪಿನಿಂದಾಗಿ, ಶಿವನು ಯಾವಾಗಲೂ ಯೋಗ ಭಂಗಿಯಲ್ಲಿರುತ್ತಾನೆ ಎಂಬ ನಂಬಿಕೆಯಿದೆ.
ಶ್ರಾವಣ ಮಾಸದಲ್ಲಿ ನೀವು ಈ 12 ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡುವ ಮೂಲಕ ಈ ಸದ್ಗುಣ ಮತ್ತು ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ ಶಿವನ ಅನುಗ್ರಹದಿಂದ ಪುಣ್ಯಪ್ರಾಪ್ತಿಯಾಗುತ್ತೆ. ಅಲ್ಲದೇ ಪುತ್ರ ಭಾಗ್ಯವಾಗುತ್ತೆ ಎಂದು ಹೇಳಲಾಗುವುದು.