ದೇವಿ ದುರ್ಗಾ ಕೈಯಲ್ಲಿರೋ ಒಂದೊಂದೂ ಆಯುಧಕ್ಕಿದೆ ಮಹತ್ವ, ಕಥೆ!
ನವರಾತ್ರಿ ಹಬ್ಬ ಈಗಾಗಲೇ ಆರಂಭವಾಗಿದೆ. ಈ ಸಂದರ್ಭದಲ್ಲಿ, ದುರ್ಗಾ ಮಾತೆಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಅವರ ಕೈಯಲ್ಲಿ ವಿವಿಧ ರೀತಿಯ ಆಯುಧಗಳಿವೆ. ಈ ಆಯುಧಗಳ ಹಿಂದೆ ಒಂದೊಂದು ರಹಸ್ಯ ಕೂಡ ಇದೆ. ದುರ್ಗಾ ಮಾತೆಯು ಈ ಆಯುಧಗಳನ್ನು ಹೇಗೆ ಪಡೆದಳು ಎಂದು ತಿಳಿಯೋಣ.
ತ್ರಿಶೂಲ
ದುರ್ಗಾ ಮಾತೆಯು (Goddess Durga) ತನ್ನ ಎಡಗೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದಾಳೆ. ದುಷ್ಟರನ್ನು ನಾಶಮಾಡಲು ಈ ಆಯುಧವನ್ನು ಶಿವನು ದುರ್ಗೆ ದೇವಿಗೆ ಉಡುಗೊರೆಯಾಗಿ ನೀಡಿದ.
ಸುದರ್ಶನ ಚಕ್ರ
ಸುದರ್ಶನ ಚಕ್ರವು ಶ್ರೀಕೃಷ್ಣನ ಅತ್ಯಂತ ಪ್ರಿಯ ಆಯುಧ. ಅವನು ಅದನ್ನು ದುರ್ಗಾ ಮಾತೆಗೆ ಅರ್ಪಿಸಿದ್ದನು. ಈ ಇಡೀ ಜಗತ್ತು ತಾಯಿಯ ಶಕ್ತಿಯಲ್ಲಿದೆ ಎಂದು ಸುದರ್ಶನ ಚಕ್ರ ತೋರಿಸುತ್ತದೆ.
ಧನಸ್ಸು
ಮಾಹಿತಿಯ ಪ್ರಕಾರ, ಸೂರ್ಯ ದೇವ (Surya Dev) ಮತ್ತು ಪವನ ದೇವ ಒಟ್ಟಾಗಿ ದುರ್ಗಾ ಮಾತೆಗೆ ಬಿಲ್ಲು ಬಾಣವನ್ನು ನೀಡಿದರು. ಈ ಆಯುಧಗಳನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ವಜ್ರ ಅಥವಾ ವಜ್ರಾಯುಧ
ಇಂದ್ರದೇವನು ದುರ್ಗಾ ಮಾತೆಗೆ ವಜ್ರಾಯುಧವನ್ನು ಕೊಟ್ಟಿದ್ದನು. ಈ ಆಯುಧವು ಪರಿಶ್ರಮ ಮತ್ತು ಬಲವಾದ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಇದು ದೇವಿಯ ಕೈಯಲ್ಲಿ ಸದಾ ಇರುತ್ತೆ.
ಖಡ್ಗ
ದುರ್ಗಾ ದೇವಿಯ ಕೈಯಲ್ಲಿ ಖಡ್ಗವನ್ನು ಸಹ ನಾವು ಕಾಣಬಹುದು. ಗಣೇಶನು ದುರ್ಗಾ ಮಾತೆಗೆ ಖಡ್ಗವನ್ನು ಉಡುಗೊರೆಯಾಗಿ ನೀಡಿದ್ದನು. ಇದನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕೊಡಲಿ
ವಿಶ್ವಕರ್ಮನು ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ದುಷ್ಟರನ್ನು ನಾಶಮಾಡಲು ದುರ್ಗಾ ಮಾತೆಗೆ ಕೊಡಲಿಯನ್ನು ಉಡುಗೊರೆಯಾಗಿ ನೀಡಿದ್ದನು. ಇದನ್ನು ಸಹ ದೇವಿಯ ಒಂದು ಅವತಾರದಲ್ಲಿ ಕೈಯಲ್ಲಿ ಕಾಣಬಹುದು.
ಈಟಿ
ಈಟಿಯನ್ನು ಅಗ್ನಿ ದೇವನು ದುರ್ಗಾ ಮಾತೆಗೆ ಅರ್ಪಿಸಿದನು. ಈ ಆಯುಧವನ್ನು ಶಕ್ತಿ ಮತ್ತು ಮಂಗಳಕರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಸಹ ದೇವಿಯ ಒಂದು ಅವತಾರದಲ್ಲಿ ಕೈಯಲ್ಲಿ ಕಾಣಬಹುದು.
ಶಂಖ
ವರುಣ ದೇವ ದುರ್ಗಾ ಮಾತೆಗೆ ಶಂಕವನ್ನು ಉಡುಗೊರೆಯಾಗಿ ನೀಡಿದ್ದರು. ಈ ಆಯುಧವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಇದನ್ನು ನೀವು ಸದಾ ದೇವಿಯ ಕೈಯಲ್ಲಿ ಕಾಣಬಹುದು.