MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಕುಂಭದಲ್ಲಿ ಶನಿ ನೇರ, ಯಾವ ರಾಶಿಗಿದೆ ಶನಿ ದೇವನ ಆಶೀರ್ವಾದ? ಯಾವ ರಾಶಿಗೆ ಕಷ್ಟ?

ಕುಂಭದಲ್ಲಿ ಶನಿ ನೇರ, ಯಾವ ರಾಶಿಗಿದೆ ಶನಿ ದೇವನ ಆಶೀರ್ವಾದ? ಯಾವ ರಾಶಿಗೆ ಕಷ್ಟ?

ಆಕಾಶ ಕಾಯಗಳಲ್ಲಿ ಭೂಮಿಗೆ ಅತಿ ದೂರಗಳಲ್ಲಿರುವ ಗ್ರಹಗಳಲ್ಲಿ ಒಂದಾದ ಶನೈಶ್ಚರ 2024 ಜೂನ್ 30 ರಂದು ತನ್ನ ಸಂಚಾರ ಕ್ರಮವನ್ನ ಬದಲಿಸಿದ್ದ. ವಕ್ರಗತಿಯಲ್ಲಿ ಸಂಚರಿಸುತ್ತಾ ಪೂರ್ವಾಭಾದ್ರ ಎರಡನೇ ಪಾದದಿಂದ ಪೂರ್ವಾಭಾದ್ರ 1 ಶತಭಿಷಾ 4 ನೇ ಪಾದದ ವರೆಗೆ ಹಿಮ್ಮುಖವಾಗಿ ಚಲಿಸುತ್ತಾ ಬಂದಿದ್ದ. 

3 Min read
Suvarna News
Published : Nov 13 2024, 05:16 PM IST
Share this Photo Gallery
  • FB
  • TW
  • Linkdin
  • Whatsapp
114

ಲೇಖಕರು: ಶ್ರೀಕಂಠಶಾಸ್ತ್ರಿ, ಜ್ಯೋತಿಷ್ಯರು

ಗ್ರಹಗಳ ಈ ವಕ್ರ ಸಂಚಾರಕ್ಕೆ  ವಿಶೇಷ ಫಲಗಳನ್ನು ಶಾಸ್ತ್ರ ನಿರೂಪಿಸಿದೆ. ವಕ್ರಿಣಸ್ತು ಮಹಾವೀರ್ಯಾ: ಎಂಬ ಆಧಾರದಂಎತ ಒಂದು ಗ್ರಹ ವಕ್ರ ಕ್ರಮದಲ್ಲಿ ಸಂಚರಿಸುವಾಗ ಮಹಾಬಲವನ್ನು ಹೊಂದಿ ಕೆಲವು ರಾಶಿಗಳವರಿಗೆ ವಿಶೇಷ ಫಲವನ್ನು ತಂದುಕೊಡುವುದುಂಟು. ವಕ್ರಗತ: ಸ್ವೋಚ್ಛಫಲಂ ವಿದದ್ಯಾತ್ ಎಂಬ ಮತ್ತೊಂದು ಶಾಸ್ತ್ರಾಧಾರದಂತೆ ಒಂದು ಗ್ರಹ ಉಚ್ಛಸ್ಥಾನದಲ್ಲಿರುವಾಗ ಯಾವ ಫಲವನ್ನು ಕೊಡುತ್ತವೋ ಅಂಥ ಫಲವನ್ನೇ ವಕ್ರಗತಿಯಲ್ಲಿರುವಾಗಲೂ ಕೊಡುತ್ತವೆ. ಹೀಗಾಗಿ ಗ್ರಹಗಳ ವಕ್ರತ್ವ ಒಂದು ರೀತಿಯಲ್ಲಿ ಶುಭಫಲವನ್ನೇ ತಂರುತ್ತವೆ. ಅದರಲ್ಲಿ ಶನೈಶ್ಚರನೂ ಹೊರತಾಗಿಲ್ಲ. ಇಷ್ಟುದಿನ ಕೆಲವರಿಗೆ ಅಧಿಕಾರಬಲ, ಸ್ಥಾನ ಬದಲಾವಣೆ, ಆರೋಗ್ಯ ಸುಧಾರಣೆ, ಸಾಲ ನಿವಾರಣೆ, ವೃತ್ತಿ ಸುಧಾರಣೆ, ಮಾನಸಿಕ ನೋವುಗಳಿಗೆ ಮುಕ್ತಿಯೂ ಸೇರಿದಹಾಗೆ ಅನೇಕ ಶುಭಫಲವನ್ನು ತಂದಿದ್ದಾನೆ.
 

214

ಈಗ ಇದೇ ನವರಂಬರ್ 14 ಗುರುವಾರದಿಂದ ಶನೈಶ್ಚರ ವಕ್ರತ್ವದಿಂದ ಮತ್ತೆ ತನ್ನ ಸಂಚಾರವನ್ನು ಸರಿಪಡಿಸಿಕೊಂಡು ಮುಂದೆ ಸಾಗಲಿದ್ದಾನೆ. ಮತ್ತೆ ಶತಭಿಷ ನಕ್ಷತ್ರದಿಂದ ಮುಂದೆ ಮುಂದೆ ಸಾಗಲಿದ್ದಾನೆ. ಇಂಥ ಶನೈಶ್ಚರನ ಸಹಜ ಸಂಚಾರದಿಂದ ಯಾವ ರಾಶಿಗಳಿಗೆ ಯಾವ ಫಲವಿದೆ..? ಯಾರಿಗೆ ಶುಭ..? ಯಾರಿಗೆ ಅಶುಭ..? ತಿಳಿಯೋಣ.
 

314

ಮೇಷ =  ವೃತ್ತಿಯಲ್ಲಿ ವಿಶೇಷ ಲಾಭ. ರಾಜಕಾರಣಿಗಳಿಗೆ ಹೆಚ್ಚಿನ ಸ್ಥಾನಮಾನ. ಅಧಿಕಾರ ಪ್ರಾಪ್ತಿಯಾಗಲಿದೆ. ಸಿವಿಲ್ ಕ್ಷೇತ್ರದವರಿಗೆ ಹೆಚ್ಚಿನ ಅನುಕೂಲಗಳುಂಟಾಗಲಿವೆ. ಹೊಸ ಅವಕಾಶಗಳು ಅರಸಿಬರಲಿವೆ. ಹಿರಿಯರಿಂದ ಸಹಕಾರ ಸಿಗಲಿದೆ. ಸೀನಿಯರ್ಸ್ ನಿಮಗೆ ಉತ್ತಮ ಮಾರ್ಗದರ್ಶನ ಮಾಡಲಿದ್ದಾರೆ.

ಪರಿಹಾರ = ಶಿವ ಸನ್ನಿಧಾನದಲ್ಲಿ ಅರ್ಚನೆ ಮಾಡಿಸಿ
 

414

ವೃಷಭ = ವೃತ್ತಿಯಲ್ಲಿ ವಿಶೇಷ ಅವಕಾಶಗಳು ದೊರೆಯಲಿವೆ. ರಾಜಕೀಯ ಲಾಭವಿದೆ. ಕಬ್ಬಿಣ, ಸೀಮೆಂಟ್, ಗಾರೆ, ಸೆರಾಮಿಕ್ ಕ್ಷೇತ್ರದವರಿಗೆ ಲಾಭ. ಶ್ರಮಜೀವಿಗಳಿಗೆ ವಿಶೇಷ ಅನುಕೂಲವಿದೆ. ಹಿರಿಯರನ್ನು ಗುರ್ತಿಸಿ ಗೌರವಿಸಲಿದ್ದಾರೆ. ಅಧಿಕಾರಬಲ ಬರಲಿದೆ.

ಪರಿಹಾರ = ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿ
 

514

ಮಿಥುನ = ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯಗಳು ಬರಲಿವೆ. ಹಿರಿಯರಿಂದ ಉತ್ತಮ ಮಾರ್ಗದರ್ಶನ ಸಿಗಲಿದೆ. ಧರ್ಮಕಾರ್ಯಗಳಲ್ಲಿ ಆಸಕ್ತಿ, ವೈರಾಗ್ಯತಾಳಲಿದ್ದೀರಿ. ಸಂನ್ಯಾಸದ ಕಡೆ ಒಲವುಬರಲಿದೆ. ದೇವಾಲಯ ಕಾರ್ಯಗಳಲ್ಲಿ ಆಸಕ್ತಿ. ವೃತ್ತಿಯಲ್ಲಿ ಅನಾನುಕೂಲ. ಸಹೋದರರಲ್ಲಿ ಮನಸ್ತಾಪ.

ಪರಿಹಾರ = ವಿಷ್ಣು ಸಹಸ್ರನಾಮ ಪಠಿಸಿ
 

614

ಕರ್ಕಟಕ = ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಮೂತ್ರರೋಗಾದಿಗಳ ಬಾಧೆ ಉಂಟಾಗಲಿದೆ. ವೈಷಮ್ಯ ದ್ವೇಷ ಭಾವನೆ ಹೆಚ್ಚಾಗಲಿದೆ. ವೃತ್ತಿಯಲ್ಲಿ ಅನುಕೂಲವಿದೆ. ಹಣಕಾಸಿನ ತೊಂದರೆ ಎದುರಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಆಲಸ್ಯ. ಮಾತು ಕಠಿಣವಾಗಿರಲಿದೆ.

ಪರಿಹಾರ = ಆಂಜನೇಯ ಪ್ರಾರ್ಥನೆ ಮಾಡಿ
 

714

ಸಿಂಹ = ದಾಂಪತ್ಯದಲ್ಲಿ ಮನಸ್ತಾಪಗಳುಂಟಾಗಲಿವೆ. ವ್ಯಾಪಾರದಲ್ಲಿ ಹೆಚ್ಚಿನ ಅನುಕೂಲ. ಸಿವಿಲ್ ಕ್ಷೇತ್ರದವರಿಗೆ ಲಾಭ. ಧರ್ಮ ಸಂಘರ್ಷಗಳಿಂದ ನೋವು. ಆರೋಗ್ಯದಲ್ಲಿ ಏರುಪೇರಾಗಲಿದೆ. ಕಾಲು-ಮೂಳೆ ಸಂಬಂಧಿ ನೋವುಂಟಾಗಲಿದೆ. ಬಂಧು-ಸ್ನೇಹಿತರಲ್ಲಿ ಎಚ್ಚರವಹಿಸಿ.

ಪರಿಹಾರ = ಈಶ್ವರ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಿ
 

814

ಕನ್ಯಾ = ಶತ್ರುಗಳು ದೂರಾಗುತ್ತಾರೆ. ತಂದೆಯ ಬಂದುಗಳಿಂದ ಸಹಾಯ. ಧೈರ್ಯ-ಸ್ಥೈರ್ಯಗಳುಂಟಾಗಲಿವೆ. ಸಾಲದಿಂದ ಮುಕ್ತರಾಗುತ್ತೀರಿ. ಹೆಚ್ಚಿನ ವ್ಯಯವೂ ಇದೆ. ಸಹೋದರರಲ್ಲಿ ಸಣ್ಣಪುಟ್ಟ ಮನಸ್ತಾಪ. ವಿದ್ಯಾರ್ಥಿಗಳಿಗೆ ಅನುಕೂಲ.

ಪರಿಹಾರ = ನರಸಿಂಹ ಪ್ರಾರ್ಥನೆ ಮಾಡಿ
 

914

ತುಲಾ = ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಬೇಕು. ಬುದ್ಧಿ ಮಂದವಾಗಲಿದೆ. ಹಿರಿಯರ ಸಲಹೆ ತೆಗೆದುಕೊಳ್ಳಿ. ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಲಿದೆ. ಉದರ ಸಂಬಂಧಿ ತೊಂದರೆಗಳು ನಿಮ್ಮನ್ನು ಬಾಧಿಸಲಿವೆ. ಉನ್ನತ ಶಿಕ್ಷಣದವರಿಗೆ ಆಲಸ್ಯ ಕಾಡಲಿದೆ.

ಪರಿಹಾರ = ಲಲಿತಾ ಸಹಸ್ರನಾಮ/ಆಂಜನೇಯ ಪ್ರಾರ್ಥನೆ ಮಾಡಿ
 

1014

ವೃಶ್ಚಿಕ = ಹಳೆ ಮನೆಯ ರಿಪೇರಿ ಕಾರ್ಯಗಳು ನಡೆಯಲಿವೆ. ಬಂಧು-ಸ್ನೇಹಿತರ ಸಹಕಾರ ಸಿಗಲಿದೆ. ಹಳೆಯ ಮಿತ್ರರ ಸಹಕಾರ. ವಾಹನ ಖರೀದಿ ಯೋಚನೆಗೆ ಬಲ ಬರಲಿದೆ. ವೃತ್ತಿಯಲ್ಲಿ ನಿಧಾನಗತಿಯ ಬೆಳವಣಿಗೆ ಇರಲಿದೆ.

ಪರಿಹಾರ = ದುರ್ಗಾ ಸನ್ನಿಧಾನದಲ್ಲಿ ಅಷ್ಟೋತ್ತರ ಸೇವೆ ಮಾಡಿಸಿ
 

1114

ಧನುಸ್ಸು = ಸಹೋದರರಲ್ಲಿ ಅನುಕೂಲ. ಧೈರ್ಯ ಸಾಹಸಗಳಿಂದ ಕಾರ್ಯ ಸಾಧನೆ. ವೃತ್ತಿಯಲ್ಲಿ ಅನುಕೂಲ ಉಂಟಾಗಲಿದೆ. ಆಪ್ತ ಸಹಾಯಕರಿಂದ ವಿಶೇಷ ಸಹಕಾರ. ಹಿರಿಯರ ವಿಚಾರವಾಗಿ ವ್ಯಯ. ಶೌರ್ಯ ಪರಾಕ್ರಮಗಳು ಹೆಚ್ಚಾಗಲಿವೆ. ಯೋಧರಿಗೆ ವಿಶೇಷ ಅನುಕೂಲ.

ಪರಿಹಾರ = ಗುರು ಸ್ತೋತ್ರ ಪಠಿಸಿ
 

1214

ಮಕರ = ಕುಟುಂಬದಲ್ಲಿ ಸಹಕಾರ. ಹಿರಿಯರಿಂದ ಹಣಕಾಸಿನ ಸಹಕಾರ. ವಿದ್ಯಾರ್ಥಿಗಳಗೆ ಸಮಾಧಾನಫಲ. ಆಲಸ್ಯ ನಿಮ್ಮನ್ನು ಕಾಡಲಿದೆ. ಆಹಾರದ ಮೇಲೆ ಗಮನಕೊಡಿ. ಅತಿಯಾದ ಅಪೇಕ್ಷೆಗಳಿಂದ ತೊಂದರೆ.

ಪರಿಹಾರ = ಆಂಜನೇಯ ಸ್ವಾಮಿಗೆ ವಡೆ ಹಾರ ಮಾಡಿಸಿ

1314

ಕುಂಭ = ಸ್ವಂತಬಲದಿಂದ ಮೇಲೆಬರುತ್ತೀರಿ. ಅಧಿಕಾರದ ಬಲ ಉಂಟಾಗಲಿದೆ. ರಾಜಕಾರಣಿಗಳಿಗೆ ವಿಶೇಷ ಅನುಕೂಲ. ಸೇವಕರು-ಸಹಾಯಕರಿಂದ ಹೆಚ್ಚಿನ ಅನುಕೂಲ. ವೃತ್ತಿಯಲ್ಲಿ ಹೆಚ್ಚಿನ ಅನುಕೂಲ. ಕುತ್ತಿಗೆ-ತಲೆ ಭಾಗದಲ್ಲಿ ಆರೋಗ್ಯ ಹಾನಿಯಾಗಲಿದೆ.

ಪರಿಹಾರ = ಶನೈಶ್ಚರ ಕವಚ ಪಠಿಸಿ
 

1414

ಮೀನ = ಹೆಚ್ಚಿನ ವ್ಯಯ ಉಂಟಾಗಲಿದೆ. ಆಪ್ತರನ್ನು ಕಳೆದುಕೊಳ್ಳುವಿರಿ. ಕಾಲಿನ ಭಾಗದಲ್ಲಿ ತೊಂದರೆ ಉಂಟಾಗಲಿದೆ. ಕಬ್ಬಿಣ-ಕಲ್ಲಿನಿಂದ ಪೆಟ್ಟಾಗಲಿದೆ. ಶ್ರಮಜೀವಿಗಳಿಗೆ ಹೆಚ್ಚಿನ ಒತ್ತಡ. ಇತರೆ ಗ್ರಹಗಳಿಂದ ಶುಭಫಲವಿರಲಿದೆ. ಆತಂಕಗೊಳ್ಳಬೇಡಿ.

ಪರಿಹಾರ = ಶನೈಶ್ಚರ ಸನ್ನಿಧಾನಕ್ಕೆ ಎಳ್ಳೆಣ್ಣೆ ಸಮರ್ಪಣೆ ಮಾಡಿ

About the Author

SN
Suvarna News
ಕುಂಭ ರಾಶಿ
ಶನಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved