ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಈಗ ಯಾವ ಹಂತದಲ್ಲಿದೆ ಇಲ್ನೋಡಿ..
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, ಗರ್ಭಗುಡಿ ಮತ್ತಿತರೆ ಭಾಗದ ನಿರ್ಮಾಣದ ಫೋಟೋಗಳನ್ನು ಮಂದಿರ ನಿರ್ಮಾಣ ಸಮಿತಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ರಾಮಜನ್ಮಭೂಮಿಯಲ್ಲಿರುವ ಟ್ರಸ್ಟ್‌ನ ಕಚೇರಿಯ ಉಸ್ತುವಾರಿ ಪ್ರಕಾಶ್ ಗುಪ್ತಾ ಪ್ರಕಾರ, ದೇವಾಲಯದ ಮೊದಲ ಹಂತದ ಸುಮಾರು 75 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಇನ್ನು ಈ ದೇವಾಲಯದಲ್ಲಿ 167 ಕಂಬಗಳನ್ನು ಅಳವಡಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮನ ಜನ್ಮಸ್ಥಳದಲ್ಲಿ ಭಗವಾನ್ ಶ್ರೀ ರಾಮನನ್ನು ಪೂಜಿಸಿದರು ಮತ್ತು ದೇವಾಲಯದ ನಿರ್ಮಾಣ ಕಾರ್ಯವನ್ನು ಅವಲೋಕಿಸುತ್ತಿರುವುದು.
ಶ್ರೀರಾಮ ಜನ್ಮಭೂಮಿ ಮಂದಿರದ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನೆಲದ ಮೇಲೆ ಕೆತ್ತಿದ ಕಲ್ಲುಗಳನ್ನು ಹಾಕಲಾಗುತ್ತಿದೆ.
ಸಮಿತಿ ಹಂಚಿಕೊಂಡ ಫೋಟೋಗಳಲ್ಲಿ 20 ಅಡಿ ಎತ್ತರದ ಗೋಡೆಗಳು, ಬಾಗಿಲು ಮತ್ತಿತರೆ ಭಾಗದ ಕಟ್ಟಡವು ಆಕಾರ ತಳೆಯುತ್ತಿರುವುದನ್ನು ಕಾಣಬಹುದು.
ಶ್ರೀ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗುತ್ತಿರುವುದನ್ನು ನೋಡುತ್ತಿರುವ ಸಂಜೆಯ ಸೂರ್ಯನ ರಮಣೀಯ ನೋಟ..
ದೇವಾಲಯದ ಗರ್ಭಗುಡಿಯಲ್ಲಿ ಎಲ್ಲಾ ಕಂಬಗಳನ್ನು ನಿರ್ಮಿಸಲಾಗಿದೆ. ರಾಮನ ದರ್ಶನ ಪಡೆಯಲು ಗರ್ಭಗುಡಿಗೆ ತೆರಳು 32 ಮೆಟ್ಟಿಲುಗಳನ್ನು ನಿರ್ಮಿಸಬೇಕು. ಅದರಲ್ಲಿ 24 ನಿರ್ಮಿಸಲಾಗಿದೆ.
ನೆಲ ಅಂತಸ್ತಿನ ನಿರ್ಮಾಣದಲ್ಲಿ ಗರ್ಭಗುಡಿಯ ಮೇಲೆ 20 ಅಡಿ ಎತ್ತರದ ಗೋಡೆ ಹಾಗೂ 166 ಕಂಬಗಳನ್ನು ನಿರ್ಮಿಸಲಾಗಿದೆ. ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಪ್ರಕಾರ, ಶೀಘ್ರದಲ್ಲಿಯೇ ಗರ್ಭಗುಡಿಯ ತೊಲೆ ಹಾಕುವ ಕಾರ್ಯ ಆರಂಭವಾಗಲಿದೆ.
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣದಲ್ಲಿ ಬಳಸುತ್ತಿರುವ ಈ ಇಟ್ಟಿಗೆಗಳು ಭಗವಂತನ ಕೃಪೆಯ ಜೀವಂತ ಸಂಕೇತಗಳು ಮತ್ತು ಹಿಂದೂ ಸ್ವಾಭಿಮಾನ ಮತ್ತು ಶೌರ್ಯ. ಇವುಗಳ ಮೇಲೆ ಜೈ ಶ್ರೀ ರಾಮ್ ಎಂದು ಕೆತ್ತಲಾಗಿದೆ.
ಜನವರಿ 2024 ರಲ್ಲಿ, ಮಕರ ಸಂಕ್ರಾಂತಿಯ ದಿನದಂದು, ಶ್ರೀರಾಮನು ಈ ಗರ್ಭಗುಡಿಯಲ್ಲಿ ಕುಳಿತುಕೊಳ್ಳುತ್ತಾನೆ. ನಿರ್ಮಾಣ ವೇಗ ನೋಡಿದರೆ, ಈ ಗಡುವು ಮೀರುವ ಸಾಧ್ಯತೆ ಇಲ್ಲ.
ದೇವಾಲಯವು ನಿರ್ಮಾಣದ ನಂತರ 160 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ನಿಲ್ಲುತ್ತದೆ ಎಂದು ನಂಬಲಾಗಿದೆ; ರಾಮಮಂದಿರಕ್ಕಾಗಿ 2.7 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇದು ಪೂರ್ಣಗೊಂಡಾಗ ಮೂರನೇ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಮತ್ತು ಮೂರು ಮಹಡಿಗಳಲ್ಲಿ ಹರಡುತ್ತದೆ.