ಕಪ್ಪು ಬಣ್ಣದ ರಾಖಿ ಕಟ್ಟಬಹುದಾ? ರಕ್ಷಾ ಬಂಧನದ ದಿನದಂದು ಈ ತಪ್ಪುಗಳನ್ನು ಮಾಡಬೇಡಿ!
ರಕ್ಷಾ ಬಂಧನ ಸಮೀಪಿಸುತ್ತಿದ್ದು, ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುತ್ತಾರೆ. ರಾಖಿ ಕಟ್ಟಿಸಿಕೊಳ್ಳುವ ಸೋದರ ಜೀವನ ಪರ್ಯಂತ ನಿನ್ನ ಜೊತೆಯಲ್ಲಿರುತ್ತೇನೆ ಎಂದು ಭರವಸೆ ನೀಡುತ್ತಾನೆ.
ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಸಹೋದರತ್ವದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ರಾಖಿ ಕಟ್ಟುವ ಸೋದರಿಗೆ ಸೋದರಿ ಗಿಫ್ಟ್ ನೀಡುತ್ತಾನೆ.
ರಕ್ಷಾ ಬಂಧನದಂದು ರಾಖಿ ಕಟ್ಟುವಾಗ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಜ್ಯೋತಿಷ್ಯದಲ್ಲಿ ರಾಖಿ ಹೇಗಿರಬೇಕು ಎಂದು ಹೇಳಲಾಗಿದೆ. ರಾಖಿ ಬಣ್ಣ ಸೋದರನ ಮೇಲೆ ಕೆಲವೊಮ್ಮೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸೋದರನ ರಾಶಿ ಪ್ರಕಾರ ರಾಖಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು. ನೋಡಲು ಚೆನ್ನಾಗಿದೆ ಅಂದ ಮಾತ್ರಕ್ಕೆ ರಾಖಿ ಖರೀದಿಸಬಾರದು. ರಾಶಿ ಪ್ರಕಾರ ಸರಳವಾಗಿ ಮನೆಯಲ್ಲಿಯೇ ರಾಖಿ ತಯಾರಿಸಬಹುದು.
1.ಕಪ್ಪು ಬಣ್ಣದ ರಾಖಿ
ಕಪ್ಪು ಬಣ್ಣವನ್ನು ಮಂಗಳಕಾರ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ರಕ್ಷಾ ಬಂಧನದ ದಿನದಂದು ಕಪ್ಪು ಬಣ್ಣದ ರಾಖಿ ಆಯ್ಕೆ ಮಾಡಿಕೊಳ್ಳಬಾರದು. ಶುಭ ಸಮಾರಂಭಗಳಲ್ಲಿ ಕಪ್ಪು ವಸ್ತ್ರ ಸೇರಿದಂತೆ ಆ ಬಣ್ಣದ ಯಾವುದೇ ಸಾಮಾಗ್ರಿಗಳನ್ನು ಬಳಕೆ ಮಾಡಲ್ಲ. ವಾಮಾಚಾರದಲ್ಲಿ ಕಪ್ಪು ಬಣ್ಣ ಬಳಕೆ ಮಾಡಲಾಗುತ್ತದೆ.
2.ಕಡು ಬಣ್ಣದ ರಾಖಿಗಳು
ಗಾಢ ಬಣ್ಣಗಳನ್ನು ಸಂತೋಷದ ಪ್ರತೀಕ ಎಂದು ಪರಿಗಣಿಸಲ್ಲ. ಜ್ಯೋತಿಷ್ಯದ ಪ್ರಕಾರ ಕಡು ಗಾಢ ಬಣ್ಣಗಳನ್ನು ಸಹ ಅಶುಭ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಸೋದರನಿಗೆ ಕಟ್ಟುವ ರಾಖಿ ಅತಿ ಕಡು ಬಣ್ಣದಾಗಿರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ತಿಳಿ ಬಣ್ಣದ ರಾಖಿಗಳನ್ನು ಖರೀದಿಸಿ ಸೋದರನಿಗೆ ಕಟ್ಟಿ.
3.ಡ್ಯಾಮೇಜ್ ರಾಖಿಗಳು
ಮಾರುಕಟ್ಟೆಗಳಲ್ಲಿ ರಾಖಿ ಖರೀದಿಸುವಾಗ ಎಚ್ಚರಿಕೆಯಿಂದಿರಬೇಕು. ಖರೀದಿಸುವ ಗದ್ದಲದಲ್ಲಿ ಕೆಲವೊಮ್ಮೆ ಡ್ಯಾಮೇಜ್ ಆಗಿರೋ ಖರೀದಿ ಮಾಡಲಾಗುತ್ತದೆ. ಕೆಲವೊಮ್ಮೆ ಏನು ಆಗಲ್ಲ ಅಂತ ಅದೇ ರಾಖಿಯನ್ನು ಕಟ್ಟಲಾಗುತ್ತದೆ. ಹೀಗೆ ಮಾಡೋದರಿಂದ ಸೋದರನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ব্যাম্বু -লেডি
4.ಯಾವ ರಾಖಿ ಉತ್ತಮ?
ರೇಷ್ಮೆ ಬಣ್ಣದ ಅಥವಾ ರೇಷ್ಮೆ ಎಳೆಯ ರಾಖಿಯನ್ನು ಕಟ್ಟಲು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ಭಾಗಗಲ್ಲಿ ಅರಿಶಿನದ ದಾರವನ್ನೇ ರಾಖಿಯನ್ನಾಗಿ ಸೋದರಿ ಸೋದರನಿಗೆ ಕಟ್ಟಲಾಗುತ್ತದೆ. ಹೀಗೆ ಮಾಡೋದರಿಂದ ಸೋದರ-ಸೋದರಿ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.