ಗರ್ಭಿಣಿ ಮಹಿಳೆಯರು ಚಂದ್ರಗ್ರಹಣದ ದಿನ ಈ ವಸ್ತುಗಳನ್ನು ಮುಟ್ಟಲೇ ಬಾರದು
ಜ್ಯೋತಿಷ್ಯದಲ್ಲಿ ಚಂದ್ರಗ್ರಹಣಕ್ಕೆ ಬಹಳ ಮಹತ್ವವನ್ನು ನೀಡಲಾಗಿದೆ ಮತ್ತು ವಿಶೇಷವಾಗಿ ಗರ್ಭಿಣಿಯರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಜ್ಯೋತಿಷ್ಯದಲ್ಲಿ, ಚಂದ್ರಗ್ರಹಣವನ್ನು ಒಂದು ಪ್ರಮುಖ ಖಗೋಳ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ವಿಷಯಗಳನ್ನು ಮಾಡಬೇಕು, ಕೆಲವು ಕೆಲಸಗಳನ್ನು ಮಾಡಬಾರದು ಎಂದು ಸಹ ಹೇಳಲಾಗುತ್ತದೆ. ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ಒಂದಷ್ಟು ವಿಷಯಗಳ ಬಗ್ಗೆ ತಿಳಿಯೋಣ.
ಸೆಪ್ಟೆಂಬರ್ 7 ರ ಭಾನುವಾರ ರಾತ್ರಿ 9:58 ಕ್ಕೆ ಚಂದ್ರಗ್ರಹಣ (Lunar eclipse) ಸಂಭವಿಸಲಿದ್ದು, ಸೆಪ್ಟೆಂಬರ್ 8 ರ ರಾತ್ರಿ 1:26 ಕ್ಕೆ ಕೊನೆಗೊಳ್ಳಲಿದೆ. ಜ್ಯೋತಿಷಿಗಳ ಪ್ರಕಾರ, ಈ ಚಂದ್ರಗ್ರಹಣವು 'ರಕ್ತ ಚಂದ್ರ'ದಂತೆ ಗೋಚರಿಸಲಿದ್ದು, ಆ ಸಮಯದಲ್ಲಿ ಚಂದ್ರನು ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ.
ಚಂದ್ರಗ್ರಹಣದ ಸಮಯದಲ್ಲಿ ಗರ್ಭಿಣಿಯರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದನ್ನು ನೀವು ಬಹಳ ಹಿಂದಿನಿಂದ ಕೇಳಿರುತ್ತೀರಿ. ಗರ್ಭಿಣಿ ಮಹಿಳೆಯರಿಗೆ ಹಲವು ಸಮಸ್ಯೆಗಳು ಉಂಟಾಗಬಹುದು ಎಂದು. ಹಾಗಿದ್ರೆ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತದೆ. ಅದರಿಂದ ಹೊರ ಬರೋದು ಹೇಗೆ ಅನ್ನೋದನ್ನು ನೋಡೋಣ.
ಚಂದ್ರಗ್ರಹಣ ಸಮಯದಲ್ಲಿ, ಪರಿಸರದಲ್ಲಿ ನಕಾರಾತ್ಮಕ ಶಕ್ತಿಯು (negative energy) ಹೆಚ್ಚಾಗುತ್ತದೆ, ಇದು ವಿಶೇಷವಾಗಿ ಗರ್ಭಿಣಿಯರು ಮತ್ತು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಈ ಸಮಯದಲ್ಲಿ ಹೊರಗೆ ಹೋಗಬಾರದು ಎನ್ನುತ್ತಾರೆ.
ಗ್ರಹಣದ ಸಮಯದಲ್ಲಿ ಚಂದ್ರನ ಕಿರಣಗಳನ್ನು ಶುದ್ಧವೆಂದು ಪರಿಗಣಿಸಲಾಗುವುದಿಲ್ಲ, ಇದು ಗರ್ಭಾಶಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಸೂಜಿಗಳು, ಚಾಕುಗಳು, ಕತ್ತರಿಗಳು ಮುಂತಾದ ಚೂಪಾದ ವಸ್ತುಗಳಿಂದ ದೂರವಿರಬೇಕು. ಈ ವಸ್ತುಗಳ ಬಳಕೆಯು ಹುಟ್ಟಲಿರುವ ಮಗುವಿಗೆ ದೈಹಿಕ ದೋಷಗಳನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ.
ಈ ಸಮಯದಲ್ಲಿ, ಇಷ್ಟದೇವ ಮಂತ್ರಗಳನ್ನು, ವಿಶೇಷವಾಗಿ ಚಂದ್ರ ಮಂತ್ರಗಳನ್ನು ಪಠಿಸುವುದರಿಂದ ಸಕಾರಾತ್ಮಕ ಶಕ್ತಿ ದೊರೆಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ದೇವರನ್ನು ಸ್ತುತಿಸುತ್ತಾ, ಮಂತ್ರಗಳನ್ನು ಪಠಿಸುತ್ತಲೇ ಇರಿ. ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ.
ಈ ದಿನ ನೀವು ಮಾಡಬೇಕಾದ ಒಂದು ಉಪಾಯ ಕೂಡ ಇಲ್ಲಿದೆ. ಗರ್ಭಿಣಿ ಮಹಿಳೆ ತನ್ನ ಉದ್ದಕ್ಕೆ ಸಮಾನವಾದ ದಾರವನ್ನು ತೆಗೆದುಕೊಂಡು ಅದನ್ನು ಮನೆಯಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಇಡಬೇಕು ಮತ್ತು ಗ್ರಹಣ ಮುಗಿದ ನಂತರ, ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಇದರಿಂದಾಗಿ ಗ್ರಹಣದ ಪರಿಣಾಮವು ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.

