ಶಿವನ ಆರು ಪ್ರಮುಖ ಅವತಾರಗಳಿವು; ಒಂದೊಂದು ರೂಪಕ್ಕೂ ಮಹತ್ವ..!
ಮಹಾದೇವ ಹೆಸರಿನಿಂದ ಕರೆಯುವ ಶಿವನು ಬಹು ಉದ್ದೇಶಗಳನ್ನು ಪೂರೈಸಲು ಹಲವಾರು ಬಾರಿ ಅವತರಿಸಿದ್ದಾನೆ.
ಹನುಮಂತನ ಅವತಾರ: ರಾಮನ ಅವತಾರದಲ್ಲಿದ್ದ ವಿಷ್ಣುವಿನ ಸೇವೆ ಮಾಡುವುದಕ್ಕಾಗಿ ಶಿವನು, ಹನುಮಂತ ಅವತಾರವನ್ನು ತಾಳಿದರೆಂದು ಹೇಳುತ್ತಾರೆ. ಆಂಜನೇಯ ಶಿವನ ಹನ್ನೊಂದನೇ ರುದ್ರ ಅವತಾರ, ಈ ರೂಪದಲ್ಲೇ ಶಿವನು ರಾಮನ ಸೇವೆ ಮಾಡಿದ್ದನಂತೆ. ಇದರಿಂದಾಗಿ ರಾವಣನನ್ನು ವಧೆ ಮಾಡಲು ರಾಮ ಯಶಸ್ವಿಯಾದನು ಎಂದು ಹೇಳಲಾಗುತ್ತದೆ.
ದುರ್ವಾಸ ಅವತಾರ: ಜಗತ್ತಿನಲ್ಲಿ ಶಿಸ್ತನ್ನು ನಿರ್ವಹಿಸಲು ಶಿವನು ದುರ್ವಾಸ ಅವತಾರವನ್ನು ತಾಳಿದನು ಎಂದು ಹೇಳಲಾಗುತ್ತದೆ. ದುರ್ವಾಸರು ಮಹಾನ್ ಮುನಿಯಾಗಿದ್ದು, ತಮ್ಮ ಕೋಪಕ್ಕೆ ಹೆಸರಾಗಿದ್ದರು. ಇವರನ್ನು ಕಂಡರೆ ದೇವ-ದೇವತೆಗಳು ಕೂಡ ಹೆದರುತ್ತಿದ್ದರು.
ಕಾಲಭೈರವ ಅವತಾರ : ವಿಷ್ಣು ಮತ್ತು ಬ್ರಹ್ಮರ ಮಧ್ಯೆ ಯಾರು ಶ್ರೇಷ್ಠ ಎಂಬ ಚರ್ಚೆಯು ನಡೆದಾಗ ಶಿವನು ಭೈರವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ. ಎಲ್ಲಾ ಶಕ್ತಿಪೀಠಗಳನ್ನು ರಕ್ಷಿಸುವ ರಕ್ಷಕನಾಗಿ ಶಿವನು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದೆ.
ಶರಭ ಅವತಾರ: ಶರಭ ಅವತಾರದಲ್ಲಿ ಅರ್ಧ ಸಿಂಹ ಮತ್ತು ಅರ್ಧ ಪಕ್ಷಿಯ ರೂಪದಲ್ಲಿ ಶಿವ ಕಂಡು ಬರುತ್ತಾನೆ. ಈಶ್ವರ ಈ ಅವತಾರವನ್ನು ವಿಷ್ಣು ದೇವರ ನರಸಿಂಹ ಅವತಾರವನ್ನು ಶಾಂತಗೊಳಿಸಲು ತಾಳಿದರೆಂನೆಂದು ಶಿವ ಪುರಾಣ ಹೇಳುತ್ತದೆ.
ಕೀರಾತೇಶ್ವರ ಅವತಾರ: ಅರ್ಜುನನು ಅರಣ್ಯವಾಸವನ್ನು ಅನುಭವಿಸುತ್ತಿರುವಾಗ ಶಿವನು ಅರ್ಜುನನ್ನು ಪರೀಕ್ಷಿಸಲು ಬೇಟೆಗಾರನ ರೂಪದಲ್ಲಿ ಕೀರಾತೇಶ್ವರ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅರ್ಜುನನ ಪರಾಕ್ರಮ ಪೌರುಷಕ್ಕೆ ಮನಸೋತ ಶಿವನು ತಮ್ಮಲ್ಲಿದ್ದ ಪಾಶುಪತಾಸ್ತ್ರವನ್ನು ಅರ್ಜುನನಿಗೆ ವರವಾಗಿ ನೀಡುತ್ತಾನೆ.
ಗೃಹಪತಿ ಅವತಾರ: ಶಿವನು ಒಬ್ಬ ಬ್ರಾಹ್ಮಣ ವಿಶ್ವಾನರನ ಮನೆಯಲ್ಲಿ ಆತನ ಮಗನಾಗಿ ಜನಿಸುತ್ತಾನೆ. ವಿಶ್ವಾನರ ಆತನಿಗೆ ಗೃಹಪತಿ ಎಂಬ ಹೆಸರನ್ನಿಡುತ್ತಾನೆ. ಗೃಹಪತಿಯು ಒಂಭತ್ತನೆ ವಯಸ್ಸಿಗೆ ಕಾಲಿಡುತ್ತಿದ್ದಂತೆ ಆತ ಸಾಯುತ್ತಾನೆ ಎಂದು ನಾರದ ಮಹರ್ಷಿಗಳು ಹೇಳುತ್ತಾರೆ. ಗೃಹಪತಿಯು ಕಾಶಿಗೆ ಹೋಗಿ ಸಾವನ್ನು ಜಯಿಸುತ್ತಾನೆ.