ಶನಿ-ರಾಹು ಸಂಯೋಗದಿಂದ ಪಿಶಾಚ ಯೋಗ,ಅ.17ರವರೆಗೆ ಈ ರಾಶಿಯವರು ಜಾಗ್ರತೆ
ಶನಿ ರಾಹು ಅಕ್ಟೋಬರ್ 17 ರವರೆಗೆ ಕೆಲವು ರಾಶಿಚಕ್ರದ ಜನರಿಗೆ ತೊಂದರೆ ನೀಡಬಹುದು.ಹೀಗಾಗಿ ಈ ರಾಶಿಯವರು ಜಾಗರೂಕರಾಗಿರಬೇಕು.
ವೈದಿಕ ಜ್ಯೋತಿಷ್ಯದಲ್ಲಿ ಶನಿ ಮತ್ತು ರಾಹುಗಳಿಗೆ ವಿಶೇಷ ಮಹತ್ವವಿದೆ. ಶನಿಯನ್ನು ನ್ಯಾಯ ಮತ್ತು ಕರ್ಮ ವನ್ನು ಒದಗಿಸುವವನು ಎಂದು ಪರಿಗಣಿಸಲಾಗಿದೆ. ರಾಹುವನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ.
ಶನಿಯು ಮಾರ್ಚ್ 15 ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ ಮತ್ತ ಅಕ್ಟೋಬರ್ 17, 2023 ರವರೆಗೆ ಈ ನಕ್ಷತ್ರದಲ್ಲಿ ಇರುತ್ತಾನೆ. ಶತಭಿಷಾ ನಕ್ಷತ್ರ ಅಧಿಪತಿ ರಾಹು. ಹೀಗಾಗಿ ಶನಿ ರಾಹು ಸಂಯೋಗವು ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ.
ಮುಂಬರುವ ಏಳು ದಿನಗಳು ಕರ್ಕಾಟಕ ರಾಶಿಯವರಿಗೆ ತುಂಬಾ ನೋವಿನಿಂದ ಕೂಡಿರುತ್ತದೆ.ನೀವು ನಷ್ಟವನ್ನು ಅನುಭವಿಸಬಹುದು. ವೃತ್ತಿ ಜೀವನದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.ಉದ್ಯೋಗ ಸಂಬಂಧಿತ ನಿರ್ಧಾರಗಳಲ್ಲಿ ಜಾಗರೂಕರಾಗಿರಿ.
ಶನಿ ಮತ್ತು ರಾಹು ಸಂಯೋಗವು ಕನ್ಯಾ ರಾಶಿಯವರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ.ಆರೋಗ್ಯ ಮತ್ತು ಆರ್ಥಿಕ ವಿಷಯದಲ್ಲಿ ಸಮಸ್ಯೆ ಇರುತ್ತದೆ.ನಿಮ್ಮ ನಡುವಳಿಕೆಯ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಗೌರವ ಮತ್ತು ಖ್ಯಾತಿಯು ಅಪಾಯದಲ್ಲಿದೆ.
ಕುಂಭ ರಾಶಿಯವರಿಗೆ ಸದ್ಯಕ್ಕೆ ಶನಿಯ ಸಾಡೇಸಾತಿಯ ಎರಡನೇ ಘಟ್ಟ. ಶನಿ ಮತ್ತು ರಾಹು ಸಂಯೋಗದಿಂದ ಕುಂಭ ರಾಶಿಯವರು ಹೆಚ್ಚಿನ ಸಮಸ್ಯೆ ಎದುರಿಸಬೇಕು.ಹಣದ ವಿಷಯದಲ್ಲಿ ಬುದ್ದಿವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ .