ಸಂಖ್ಯಾಶಾಸ್ತ್ರ ಪ್ರಕಾರ 1ನೇ ದಿನಾಂಕದಂದು ಜನಿಸಿದವರ ಸಾಮರ್ಥ್ಯ, ವೀಕ್‌ನೆಸ್ ಏನು?
Numerology Number 1 People Personality, Behavior: 1ನೇ ತಾರೀಕಿನಂದು ಹುಟ್ಟಿದವರ ಗುಣಲಕ್ಷಣಗಳು, ಬಲಹೀನತೆಗಳು, ಪ್ರೀತಿ ಮತ್ತು ಅದೃಷ್ಟ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Number 1 in Numerology Prediction
ಜನ್ಮ ದಿನಾಂಕದ ಆಧಾರದ ಮೇಲೆ ವ್ಯಕ್ತಿತ್ವ, ಆಸಕ್ತಿ, ಭವಿಷ್ಯವನ್ನು ತಿಳಿಯಬಹುದು. ೧ನೇ ತಾರೀಕಿನಂದು ಹುಟ್ಟಿದವರ ಗುಣಲಕ್ಷಣಗಳು, ಬಲಹೀನತೆಗಳು, ಕೆಲಸ, ವ್ಯಾಪಾರ ಮತ್ತು ಪ್ರೀತಿ ಹೇಗಿರುತ್ತದೆ ಎಂಬುದನ್ನು ನೋಡೋಣ.
ಸಂಖ್ಯೆ 1
ಸಂಖ್ಯಾಶಾಸ್ತ್ರದಲ್ಲಿ 1 ರಿಂದ 9ರವರೆಗಿನ ಪ್ರತಿಯೊಂದು ಸಂಖ್ಯೆಗೂ ನಿರ್ದಿಷ್ಟ ಗುಣಲಕ್ಷಣಗಳಿವೆ. 1ರ ವರ್ಗದಲ್ಲಿ 1, 10. 19 ಮತ್ತು 28 ಸಂಖ್ಯೆಗಳು ಬರುತ್ತವೆ. ಈ ಸಂಖ್ಯೆಯಲ್ಲಿ ಹುಟ್ಟಿದವರಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಇವರ ಮೇಲೆ ಸೂರ್ಯನ ಅನುಗ್ರಹವಿರುತ್ತದೆ.
ಸ್ವಭಾವ
1, 10, 19 ಮತ್ತು 28ರಂದು ಹುಟ್ಟಿದವರನ್ನು ಸೂರ್ಯ ದೇವರು ಮಾರ್ಗದರ್ಶನ ಮಾಡುತ್ತಾನೆ. ಇವರು ಉತ್ತಮ ವ್ಯಕ್ತಿತ್ವ, ಆತ್ಮವಿಶ್ವಾಸ, ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುತ್ತಾರೆ.
ಕೆಲಸ
ಈ ಸಂಖ್ಯೆಯಲ್ಲಿ ಹುಟ್ಟಿದವರು ಸ್ವಂತ ಉದ್ಯೋಗ ಮಾಡಲು ಇಷ್ಟಪಡುತ್ತಾರೆ. ಯೋಚಿಸಿ ಕೆಲಸ ಮಾಡುತ್ತಾರೆ. ಆತ್ಮವಿಶ್ವಾಸ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ.
ಯಾವ ವೃತ್ತಿ?
1ರಂದು ಹುಟ್ಟಿದವರು ಕಠಿಣ ಪರಿಶ್ರಮಿಗಳು. ಸರ್ಕಾರಿ ಕೆಲಸದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು. ಉತ್ತಮ ಉದ್ಯಮಿಗಳಾಗಬಹುದು. ನಾಯಕರು ಅಥವಾ ರಾಜಕಾರಣಿಗಳಾಗಬಹುದು.
ಅದೃಷ್ಟ ಬಣ್ಣಗಳು: ಕಿತ್ತಳೆ, ಹಳದಿ, ಕೆಂಪು ಮತ್ತು ಕಂದು.