ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದ್ದೀರಾ? : ಅಭಿಮನ್ಯೂ ಹೇಳಿ ಕೊಡುವ ಪಾಠವೇನು?
ಧಾರ್ಮಿಕ ಗ್ರಂಥಗಳು (religious book) ಹಲವಾರಿವೆಯ ಅದರಲ್ಲಿ ಮಹಾಭಾರತವೂ ಒಂದು ಮಹಾಗ್ರಂಥ. ಒಬ್ಬ ವ್ಯಕ್ತಿಯು ಮಹಾಭಾರತದಿಂದ ಬಹಳಷ್ಟು ಕಲಿಯಬಹುದು. ಮಹಾಭಾರತದಲ್ಲಿ, ಯುದ್ಧವನ್ನು ಮಾತ್ರವಲ್ಲದೆ, ಅನೇಕ ಪಾತ್ರಗಳ ಬಗ್ಗೆಯೂ ಹೇಳಲಾಗಿದೆ. ಜೀವನದ ನಿಜವಾದ ಅರ್ಥವನ್ನು ಸಹ ಮಹಾಭಾರತದಲ್ಲಿ ತಿಳಿಸಲಾಗಿದೆ. ಮನುಷ್ಯನ ಮನಸ್ಸನ್ನು ಅರಿತು, ಮುನ್ನುಗ್ಗೋದು ಹೇಗೆ, ಸೋಲು ಹೇಗೆ ಎಂಥ ಮನುಷ್ಯನಿಗೂ ಪಾಠ ಕಲಿಸುತ್ತೆ ಎಂಬುದನ್ನು ಈ ಕಥೆಯಿಂದ ನಾವು ಕಲಿಯಬಹುದು.
ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಒಂದಾದ ಮಹಾಭಾರತ ವ್ಯಕ್ತಿಗೆ ಜೀವನ ಪಾಠವನ್ನು ತಿಳಿಸುತ್ತದೆ. ಇದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಈ ಸಣ್ಣ ಪಾಠಗಳು ನಿಮ್ಮ ಇಡೀ ಜೀವನವನ್ನು ಬದಲಾಯಿಸುತ್ತವೆ. ಅಲ್ಲದೇ ನೀವು ಜೀವನದ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ.
ಮಹಾಭಾರತದಲ್ಲಿ, ಮುಂಬರುವ ದಿನಗಳಲ್ಲಿ ಹಿಂದೆ ಮಾಡಿದ ತಪ್ಪುಗಳನ್ನು ಪುನರಾವರ್ತಿಸದಂತೆ ತಿಳಿಸಿಕೊಡುತ್ತದೆ. ನೀವು ಯಶಸ್ವಿ (Success) ಮನುಷ್ಯನಾಗಲು ಸಹಾಯ ಮಾಡುವ ಅದೇ ಕೆಲವು ಪಾಠಗಳ ಬಗ್ಗೆ ಮಹಾಭಾರತದ ಮೂಲಕ ಕಲಿಯಿರಿ.
ಪ್ರಮಾಣವಲ್ಲ, ಗುಣಮಟ್ಟದ ಮೇಲೆ ಗಮನ ಹರಿಸಿ
ಇಂದಿನ ಬಿಡುವಿಲ್ಲದ ಜೀವನದಲ್ಲಿ, ಪ್ರತಿಯೊಬ್ಬರೂ ಯಶಸ್ಸಿನ ಮೆಟ್ಟಿಲೇರಲು ಬಯಸುತ್ತಾರೆ. ಆದರೆ ಉನ್ನತ ಸ್ಥಾನಕ್ಕೆ ತಲುಪಿದಾಗ, ಅವರು ತಮ್ಮ ತಂಡದಲ್ಲಿ ಜನರು ನಿಜವಾಗಿಯೂ ಏನು ಬಯಸುತ್ತಾರೆ ಅನ್ನೋದನ್ನು ಮರೆತುಬಿಡುತ್ತಾರೆ. ಮಹಾಭಾರತದಿಂದ ಇದಕ್ಕೆ ಒಂದು ಉದಾಹರಣೆ ತೆಗೆದುಕೊಳ್ಳಬಹುದು. ಅದರ ಬಗ್ಗೆ ಮುಂದೆ ನೋಡೋಣ…
ಪಾಂಡವರು ಮತ್ತು ಕೌರವರ ನಡುವೆ ಯಾವುದೇ ರೀತಿಯಲ್ಲಿ ರಾಜಿಯಾಗದಿದ್ದಾಗ ಮತ್ತು ಯುದ್ಧದ ಪರಿಸ್ಥಿತಿ ಉದ್ಭವಿಸಿದಾಗ, ಶ್ರೀಕೃಷ್ಣನು ದುರ್ಯೋಧನ ಮತ್ತು ಅರ್ಜುನನಿಗೆ ಒಂದು ಕಡೆ ನನ್ನ ಸಂಪೂರ್ಣ ನಾರಾಯಣಿ ಸೈನ್ಯ ಮತ್ತು ಮತ್ತೊಂದೆಡೆ ನಾನು ಎಂದು ಹೇಳುವ ಆಯ್ಕೆಯನ್ನು ನೀಡಿದನು. ಎರಡರಲ್ಲಿ ಯಾವುದನ್ನು ಬೇಕಾದರೂ ನೀವು ಆಯ್ಕೆ ಮಾಡಬಹುದು ಎಂದನು.
ಒಂದೆಡೆ, ಶ್ರೀ ಕೃಷ್ಣ ಪರಮಾತ್ಮನಿದ್ದನು ಮತ್ತು ಮತ್ತೊಂದೆಡೆ ಬೃಹತ್ ಸೈನ್ಯವಿತ್ತು. ಅರ್ಜುನನು ನಿರಾಯುಧ ಭಗವಾನ್ ಶ್ರೀ ಕೃಷ್ಣನನ್ನು ಆಯ್ಕೆ ಮಾಡಿದನು. ದುರ್ಯೋಧನ ಸೈನ್ಯವನ್ನು ಆಯ್ಕೆ ಮಾಡಿದನು. ಕೊನೆಯಲ್ಲಿ ಯಾರು ಗೆದ್ದರು ಎಂದು ಈಗ ನೀವು ಸ್ವತಃ ತಿಳಿದುಕೊಳ್ಳಬಹುದು. ಆದುದರಿಂದ ಯಾವಾಗಲೂ ಎಷ್ಟಿದೆ ಅನ್ನೋದರ ಬಗ್ಗೆ ಗಮನ ಹರಿಸದೆ, ಗುಣಮಟ್ಟದ ಮೇಲೆ ಗಮನ ಹರಿಸೋದು ಮುಖ್ಯ.
ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಿ
ಮಹಾಭಾರತದಿಂದ ನೀವು ನಿಮ್ಮನ್ನು ಸಮಯಕ್ಕೆ ಸರಿಯಾಗಿ ಹೇಗೆ ಹೊಂದಿಸಬೇಕು ಎಂದು ಕಲಿಯಬೇಕು, ಇಲ್ಲದಿದ್ದರೆ ನೀವು ಬಹಳ ಹಿಂದೆ ಉಳಿಯುತ್ತೀರಿ. ಪಗಡೆಯಾಟದಲ್ಲಿ ಕೌರವರ ವಿರುದ್ಧ ಸೋತ ನಂತರ ಪಾಂಡವರು 12 ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸ ಎದುರಿಸಿದರು. ಈ ಪರಿಸ್ಥಿತಿ ತುಂಬಾ ಕಷ್ಟವಾಗಿತ್ತು. ಏಕೆಂದರೆ ಪಾಂಡವರಿಗೆ ಮರೆಮಾಚಲು ಯಾವುದೇ ಮಾರ್ಗವಿರಲಿಲ್ಲ. ಏಕೆಂದರೆ ಎಲ್ಲರಿಗೂ ಅವರ ಪರಿಚಯವಿತ್ತು. ಆದರೆ ಪಾಂಡವರು ತಮ್ಮನ್ನು ತಾವು ಬದಲಾಯಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದರು ಮತ್ತು ಮರೆಮಾಚಲು ತಮ್ಮ ವೇಷ ಬದಲಾಯಿಸಿ ರಾಜ ವಿರಾಟನ ರಾಜ್ಯಕ್ಕೆ ಹೋದರು.
ವಿರಾಟನ ರಾಜ್ಯದಲ್ಲಿ ಅರ್ಜುನನು ರಾಜನ ಮಗಳು ಉತ್ತರಾಗೆ ನೃತ್ಯ (Dance) ಕಲಿಸಿದನು. ಅದೇ ಸಮಯದಲ್ಲಿ, ಯುಧಿಷ್ಠಿರ ರಾಜನಿಗೆ ಪಗಡೆ ಕಲಿಸಲು ಪ್ರಾರಂಭಿಸಿದನು. ಭೀಮನಿಗೆ ಆಹಾರವೆಂದರೆ ತುಂಬಾ ಇಷ್ಟ. ಅವನು ತನ್ನನ್ನು ತಾನು ಬದಲಾಯಿಸುವ ಮೂಲಕ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದನು. ಅಲ್ಲಿ ದ್ರೌಪದಿ ಇದ್ದಳು, ಅವಳ ಹಿಂದೆ ನೂರಾರು ಸೇವಕಿಯರು ವಾಸಿಸುತ್ತಿದ್ದರು. ಅವಳು ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಾಳೆ ಮತ್ತು ರಾಣಿ ಸುದೇಶ್ನಾಳ ಸೇವಕಿಯಾಗುವ ಮೂಲಕ ಅವಳ ಸೇವೆ ಮಾಡಿದಳು. ಆದ್ದರಿಂದ, ಮನುಷ್ಯನು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕು.
ಯಾವಾಗಲೂ ನಿಮ್ಮನ್ನು ನೀವು ಅಪ್ ಡೇಟ್ ಮಾಡಿಕೊಳ್ಳಿ
ಇಂದಿನ ಕಾಲದಲ್ಲಿ, ಒಬ್ಬ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಮುಂದೆ ಬರಲು ಮತ್ತು ಯಶಸ್ವಿಯಾಗಬೇಕಾದರೆ, ತನ್ನನ್ನು ತಾನು ಯಾವಾಗಲೂ ಅಪ್ ಡೇಟ್ (Update) ಮಾಡಿಕೊಳ್ಳೋದು ಬಹಳ ಮುಖ್ಯ. ಏಕೆಂದರೆ ಅರ್ಧ-ಅಪೂರ್ಣ ಜ್ಞಾನವು ನಿಮಗೆ ಅಪಾಯಕಾರಿ ಎಂದು ಮಹಾಭಾರತ ತಿಳಿಸಿದೆ.
ಅರ್ಜುನನ ಮಗ ಅಭಿಮನ್ಯುವಿನ ಕತೆ ಕೇಳಿ. ಅಭಿಮನ್ಯು ಒಬ್ಬ ಮಹಾನ್ ವ್ಯಕ್ತಿ ಮತ್ತು ಯೋಧನಾಗಿಯೇ ಹುಟ್ಟಿದನು. ಅವನು ತನ್ನ ತಾಯಿಯ ಹೊಟ್ಟೆಯಲ್ಲಿ ಚಕ್ರವ್ಯೂಹವನ್ನು ಮುರಿಯುವ ಕಲೆಯನ್ನು ಕಲಿತಿದ್ದನು. ಆದರೆ ಅವನ ಒಂದೇ ಒಂದು ತಪ್ಪು ಏನೆಂದರೆ ಅವನು ಈ ವಿದ್ಯೆಯ ಬಗ್ಗೆ ಮುಂದೆ ಕಲಿಯಲಿಲ್ಲ. ಇದರ ಪರಿಣಾಮವೆಂದರೆ ಅವನು ಕೌರವರ ಚಕ್ರವ್ಯೂಹ ಮುರಿದು ಒಳ ಹೋಗಿದ್ದನು, ಆದರೆ ಅದನ್ನು ಬೇಧಿಸಿ ಹಿಂದಿರುಗಿ ಬರೋದು ಮಾತ್ರ ತಿಳಿದಿರಲಿಲ್ಲ, ಇದರರ್ಥ ಅಪೂರ್ಣ ಮಾಹಿತಿಯಿಂದ ನಾಶವಾಗುತ್ತೆ.