Vastu Secrets: ಮನೆಯಲ್ಲಿ ಕನ್ನಡಿಯನ್ನ ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು?
ಹಣದ ಹರಿವು ಹೆಚ್ಚಿಸಲು ಮನೆಯಲ್ಲಿ ಕನ್ನಡಿಗಳನ್ನು ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ವಾಸ್ತು ಸಲಹೆಗಳು.

ಶುಭ ಶಕ್ತಿ ಪ್ರವೇಶ
ಮನೆಯಲ್ಲಿ ಸುಖ-ಶಾಂತಿ ನೆಲೆಸಲು ವಾಸ್ತು ಶಾಸ್ತ್ರದಲ್ಲಿ ಕನ್ನಡಿಗಳ ಸ್ಥಾನ ಮಹತ್ವದ ಪಾತ್ರ ವಹಿಸುತ್ತದೆ. ಸರಿಯಾದ ಸ್ಥಾನದಲ್ಲಿ ಕನ್ನಡಿಗಳನ್ನು ಇಡುವುದರಿಂದ ಶುಭ ಶಕ್ತಿಗಳು ಮನೆಯೊಳಗೆ ಸುಲಭವಾಗಿ ಪ್ರವೇಶಿಸುತ್ತವೆ.
ಬಾಗಿಲಿಗೆ ನೇರವಾಗಿಡಬೇಡಿ
ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕನ್ನಡಿ ಇಡುವುದು ಒಳ್ಳೆಯದು. ಬಾಗಿಲಿಗೆ ನೇರವಾಗಿ ಕನ್ನಡಿ ಇಡಬಾರದು.
ಮಲಗುವ ಕೋಣೆಯಲ್ಲಿ ಜಾಗ್ರತೆ
ಮಲಗುವ ಕೋಣೆಯಲ್ಲಿ ಹಾಸಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಬೀಳಬಾರದು. ಈಶಾನ್ಯ ದಿಕ್ಕಿನಲ್ಲಿ ಕನ್ನಡಿ ಇಡಬಾರದು.
ಪ್ರವೇಶ ದ್ವಾರದ ಬಳಿ ಹೇಗೆ?
ಮನೆಯ ಹೊರಗೆ ಕನ್ನಡಿ ಇಡಬಾರದು. ಒಳಗೆ ಪ್ರವೇಶ ದ್ವಾರದ ಬಲ ಅಥವಾ ಎಡಭಾಗದಲ್ಲಿ ಕನ್ನಡಿ ಇಡಬಹುದು.
ಊಟದ ಕೋಣೆಯಲ್ಲಿ ಕನ್ನಡಿ
ಊಟದ ಮೇಜಿನ ಪ್ರತಿಬಿಂಬ ಕನ್ನಡಿಯಲ್ಲಿ ಬೀಳುವಂತೆ ಇಡಬೇಕು. ಶೌಚಾಲಯದಲ್ಲಿ ಪಶ್ಚಿಮ ಅಥವಾ ದಕ್ಷಿಣ ಗೋಡೆಯ ಮೇಲೆ ಕನ್ನಡಿ ಇಡಬೇಕು.
ಒಡೆದ ಮತ್ತು ಕೊಳಕು ಕನ್ನಡಿಗಳು
ಒಡೆದ ಮತ್ತು ಕೊಳಕು ಕನ್ನಡಿಗಳನ್ನು ತಕ್ಷಣ ತೆಗೆದುಹಾಕಬೇಕು. ಚೌಕಾಕಾರದ ಕನ್ನಡಿಗಳು ಒಳ್ಳೆಯದು.
ಕುಬೇರ ದಿಕ್ಕಿನಲ್ಲಿ ಹಣದ ಪೆಟ್ಟಿಗೆ
ಉತ್ತರ ದಿಕ್ಕಿನಲ್ಲಿ ಹಣದ ಪೆಟ್ಟಿಗೆಯ ಪ್ರತಿಬಿಂಬ ಕನ್ನಡಿಯಲ್ಲಿ ಬೀಳುವಂತೆ ಇಡಬೇಕು.
ಸುಖ, ಸಂಪತ್ತುಗಾಗಿ
ಮನೆಯಲ್ಲಿ ಶಾಂತಿ, ಸುಖ ಮತ್ತು ಸಂಪತ್ತಿಗಾಗಿ ವಾಸ್ತು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.