ನವೆಂಬರ್ 6 ರವರೆಗೆ ಬುಧನಿಂದ ಭಾರಿ ಸಂಕಷ್ಟ,ಈ ರಾಶಿಯವರು ಜಾಗರೂಕರಾಗಿರುವುದು ಅವಶ್ಯ
ಬುಧನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ.ಬುಧನು ತುಲಾ ರಾಶಿಗೆ ಚಲಿಸುವುದರಿಂದ ಕೆಲವು ರಾಶಿಯವರು ಅಶುಭ ಫಲಿತಾಂಶವನ್ನು ಪಡೆಯಬಹುದು.
ಗ್ರಹಗಳ ರಾಜಕುಮಾರ ಬುಧ ಅಕ್ಟೋಬರ್‌ನಲ್ಲಿ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 19 ರಂದು ಮಧ್ಯರಾತ್ರಿ 01.06 ಕ್ಕೆ ಬುಧ ಸಂಕ್ರಮಣ ನಡೆಯಲಿದೆ.
ನವೆಂಬರ್ 6 ರವರೆಗೆ ಬುಧನು ತುಲಾ ರಾಶಿಯಲ್ಲಿ ಇರುತ್ತಾನೆ. ಜ್ಯೋತಿಷ್ಯದ ಪ್ರಕಾರ ಬುಧನು ಯಾವುದೇ ರಾಶಿಗೆ ಪ್ರವೇಶಿಸಿದಾಗ ಕೆಲವು ರಾಶಿಗಳು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮೇಷ ರಾಶಿಯವರು ಬುಧ ಸಂಕ್ರಮಣದಿಂದ ಹಣಕಾಸಿನ ತೊಂದರೆ ನೋಡಬೇಕಾಗುತ್ತದೆ. ವೆಚ್ಚಗಳು ಹೆಚ್ಚಾಗಬಹುದು. ಸಾಲ ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ಕೆಲಸದಲ್ಲಿ ಕೆಲವು ಘರ್ಷಣೆಗಳು ಇರುತ್ತವೆ.
ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ಅನೇಕ ಸವಾಲುಗಳು ಮತ್ತು ವೈಫಲ್ಯಗಳನ್ನು ಎದುರಿಸಬೇಕಾಗಬಹುದು.ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಸಂಭಾಷಣೆಯಲ್ಲಿ ಜಾಗರೂಕರಾಗಿರಬೇಕು.
ಕರ್ಕಾಟಕ ರಾಶಿಯವರು ಬುಧ ಸಂಕ್ರಮಣದ ಅವಧಿಯಲ್ಲಿ ತಾಳ್ಮೆಯಿಂದಿರಬೇಕು. ನಿಮ್ಮ ಮುಂದೆ ಬರುವ ಅಡೆತಡೆಗಳನ್ನು ನೀವು ಜಯಿಸಬಹುದು ಮತ್ತು ಅಂತಿಮವಾಗಿ ಯಶಸ್ಸನ್ನು ಸಾಧಿಸಬಹುದು.ಆತುರದ ನಿರ್ಧಾರಗಳಿಂದ ದೂರವಿರಲು ಸೂಚಿಸಲಾಗಿದೆ.