ಬುಧ ಸಂಕ್ರಮಣ , ಈ ರಾಶಿಯವರಿಗೆ ಲಾಭವೋ ಲಾಭ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
ಬುಧವು ದೀಪಾವಳಿಯ ಮೊದಲು ಮತ್ತು ನಂತರ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ನವೆಂಬರ್ 6 ರಂದು, ಬುಧವು ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ, ಇದರಿಂದ ಕೆಲವು ರಾಶಿಗೆ ಅದೃಷ್ಟ ಇರುತ್ತದೆ.
ಜ್ಯೋತಿಷ್ಯದಲ್ಲಿ ಬುಧ ಸಂಕ್ರಮಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಬುಧ ಗ್ರಹವು ಶೀಘ್ರದಲ್ಲೇ ತನ್ನ ಪಥವನ್ನು ಬದಲಾಯಿಸಲಿದೆ. ಇದು ಎಲ್ಲಾ ರಾಶಿ ಮೇಲೆ ಪರಿಣಾಮ ಬೀರುತ್ತದೆ.
ಬುಧ ರಾಶಿಯಲ್ಲಿನ ಬದಲಾವಣೆಯು ಮೇಷ ರಾಶಿಯ ಜನರಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವೃತ್ತಿ ಜೀವನದ ಸಮಸ್ಯೆ ಕೊನೆಗೊಳ್ಳುತ್ತದೆ. ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವೈವಾಹಿಕ ಜಿವನವು ಉತ್ತಮವಾಗಿರುತ್ತದೆ.
ಕನ್ಯಾ ರಾಶಿಯವರಿಗೆ ಬುಧ ಸಂಕ್ರಮಣವು ಮಂಗಳಕರವೆಂದು ಪರಿಗಣಿಸಲಾಗಿದೆ.ಕೆಲಸದ ಸ್ಥಳದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ.ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯಬಹುದು. ಹೊಸ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು.
ಬುಧ ರಾಶಿಯ ಬದಲಾವಣೆಯು ಮಕರ ರಾಶಿಯವರಿಗೆ ಶುಭ ಫಲಿತಾಂಶವನ್ನು ನೀಡುತ್ತದೆ. ವ್ಯಾಪಾರ ಮಾಡುವವರು ಉತ್ತಮ ವ್ಯವಹಾರಗಳು ಅಥವಾ ಹೂಡಿಕೆದಾರರನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ಸಮಸ್ಯೆಗಳು ಪರಿಹಾರವಾಗುತ್ತದೆ.