- Home
- Astrology
- Festivals
- Maha Shivaratri 2026: ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ
Maha Shivaratri 2026: ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಸ್ವಾಗತವಿದೆ. ಕಾರ್ಯಕ್ರಮದ ವಿವರ ಇಲ್ಲಿದೆ

ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ
ದಿ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ಶಿವರಾತ್ರಿಯ ಮಹೋತ್ಸವದ ಆಚರಣೆಯು ನಡೆಯಲಿದ್ದು, ವೈದಿಕ ಪೂಜೆಗಳು, ಭಜನೆಗಳು, ಧ್ಯಾನ ನಡೆಯಲಿದೆ. ವೈದಿಕ ಸಂಪ್ರದಾಯದಂತೆ ನಡೆಯಲಿರುವ ಮಹೋತ್ಸವದಲ್ಲಿ ಭಾರತಾದ್ಯಂತದಿಂದ ಮತ್ತು ವಿದೇಶಗಳಿಂದಲೂ ಭಕ್ತರು ಪಾಲ್ಗೊಳ್ಳಲಿದ್ದಾರೆ. ಗುರುದೇವ ಶ್ರೀ ಶ್ರೀ ರವಿ ಶಂಕರರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಮಹೋತ್ಸವವು ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಶ್ಚೇತನವನ್ನು ಪ್ರತಿಬಿಂಬಿಸಲಿದೆ.
ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಮ್ಮುಖದಲ್ಲಿ ಶಿವನಾಮ ಸ್ಮರಣೆ!
ವೈದಿಕ ಪರಂಪರೆಯಲ್ಲೇ ಅತೀ ಪವಿತ್ರವಾದ ರಾತ್ರಿ ಎಂದು ಪರಿಗಣಿಸಲ್ಪಡುವ ಮಹಾಶಿವರಾತ್ರಿಯು ಆಳವಾದ ವಿಶ್ರಾಂತಿಯನ್ನು, ಅರಿವಿನ ಉನ್ನತ ಸ್ಥಿತಿಯನ್ನು ಮತ್ತು ಆಂತರಿಕ ಪರಿವರ್ತನೆಯನ್ನು ತರುವ ಅತ್ಯಂತ ಪ್ರಬಲ ಅವಕಾಶ. ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ಆಚರಿಸಲಾಗುವ ಈ ಮಹೋತ್ಸವವು ವೈದಿಕ ಆಚರಣೆಗಳು ಮತ್ತು ಹೃದಯಸ್ಪರ್ಶಿಯಾದ ಸುಮಧುರ ಸಂಗೀತದಿಂದ ಉಂಟಾಗುವ ಚೈತನ್ಯಮಯ ವಾತಾವರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಇದು ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ಅನುರಣಿಸುತ್ತದೆ.
ಕಾರ್ಯಕ್ರಮದ ವಿವರಗಳು:
ಸಂಜೆ 7:15 - 7:45 - ಭಜನೆಗಳು
ಸಂಜೆ 7:45 - 9:30 - ಮಹಾ ರುದ್ರ ಪೂಜೆ
ರಾತ್ರಿ 9:30 - 10:30 - ಭಜನೆಗಳು ಮತ್ತು ಗುರುದೇವರ ಪ್ರವಚನ
ರಾತ್ರಿ 11:30ಕ್ಕೆ - ಗುರುದೇವರೊಂದಿಗೆ ವಿಶೇಷವಾದ ಮಧ್ಯರಾತ್ರಿಯ ಧ್ಯಾನ
ಬೆಳಿಗ್ಗೆ 4:00 ಗಂಟೆಯಿಂದ - ಮಹಾ ರುದ್ರ ಹೋಮ
ಭಾರತದ 150 ಸ್ಥಳಗಳಲ್ಲಿ ಲಕ್ಷಾಂತರ ಜನರು ತಮ್ಮ ನಗರಗಳಲ್ಲಿಯೇ ರುದ್ರಪೂಜೆಯಲ್ಲಿ ಭಾಗವಹಿಸಿ, ಅದರ ಆಧ್ಯಾತ್ಮಿಕ ತರಂಗಗಳನ್ನು ಅನುಭವಿಸುವ ವಿಶೇಷ ಅವಕಾಶ.
ಜಗತ್ತಿನಾದ್ಯಂತದ ಲಕ್ಷಾಂತರ ಸಾಧಕರ ಉಪಸ್ಥಿತಿಯಲ್ಲಿ ನಡೆಯಲಿರುವ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ಮಹಾಶಿವರಾತ್ರಿ ಆಚರಣೆಯು, ಗಹನತೆಯೊಂದಿಗೆ ಸಂಭ್ರಮವನ್ನು ಮಿಶ್ರಣಗೊಳಿಸಿದ, ಪ್ರಬಲವಾದ ಸಕಾರಾತ್ಮಕ ಕ್ಷೇತ್ರವನ್ನು ನಿರ್ಮಿಸಲು ಸಜ್ಜಾಗಿದೆ.
ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ
ಶಿವರಾತ್ರಿಯ ಮಹತ್ವದ ಬಗ್ಗೆ ಮಾತನಾಡುತ್ತಾ ಗುರುದೇವ ಶ್ರೀ ಶ್ರೀ ರವಿ ಶಂಕರರು, 'ಶಿವರಾತ್ರಿಯು ಈ ಭೌತಿಕ ಜಗತ್ತು ಮತ್ತು ನಮ್ಮ ಆಂತರ್ಯದ ಅಲೌಕಿಕ ಜಗತ್ತಿನ ನಡುವೆ ಇರುವ ಸೇತುವೆ. ಅತಿಯಾಗಿ ಬಾಹ್ಯದ ಚಟುವಟಿಕೆಯಲ್ಲಿ ತೊಡಗುವುದರಿಂದ ಅಥವಾ ಬಾಹ್ಯದ ಗದ್ದಲದೊಂದಿಗೆ ಈ ಅಂತರಂಗದ ಪಯಣವು ಸಾಧ್ಯವಿಲ್ಲ.ಇದು ಆಂತರ್ಯದೊಂದಿಗೆ ಬೆಸೆಯುವ ಸ್ಥಳ; ಮನರಂಜನೆಯ ಸ್ಥಳವಲ್ಲ.ಕೆಲವರು ಶಿವರಾತ್ರಿಯನ್ನು ಕೇವಲ ಒಂದು ಪದ್ಧತಿಯಂತೆ ಮಾತ್ರ ಕಾಣುತ್ತಾರೆ. ಇನ್ನಿತರರು ಶಿವರಾತ್ರಿಯನ್ನು ಕೇವಲ ಮನರಂಜನೆಯೆಂಬಂತೆ ಕಾಣುತ್ತಾರೆ. ಎರಡೂ ರೀತಿಯವರು ಸಹ, ಶಿವರಾತ್ರಿಯು ಧ್ಯಾನಸ್ಥವಾದ ಅರಿವಿನ ಸ್ಥಿತಿಯೆಂಬುದನ್ನೇ ಮರೆತುಬಿಡುತ್ತಾರೆ. ಆನಂದದಲ್ಲಿ, ಭಕ್ತಿಯಲ್ಲಿ ಮಗ್ನವಾಗಿರುವುದೇ ಶಿವರಾತ್ರಿ. ಸಂತೋಷದ ಹಿಂದೆ ಓಡುತ್ತಲೇ ಇರುವುದರಿಂದ ನೀವು ದಣಿಯುತ್ತೀರಿ. ಆತ್ಮದಲ್ಲಿ ವಿಶ್ರಮಿಸಲು ಸ್ವಲ್ಪ ಸಮಯವನ್ನು ತೆಗೆದುಕೊಂಡಾಗ ನಿಮಗೆ ಬಲ ಬರುತ್ತದೆ, ಸಂತೋಷ ಸಿಗುತ್ತದೆ. ವರ್ಷದ ಕೆಲವು ರಾತ್ರಿಗಳು, ಈ ವಿಶ್ರಾಂತಿಯನ್ನು ಪಡೆಯಲು ವಿಶೇಷವಾಗಿ ಶುಭಕರವೆಂದು ಮತ್ತು ಪೂರಕವೆಂದು ಪರಿಗಣಿಸಲ್ಪಡುತ್ತವೆ. ಮಹಾಶಿವರಾತ್ರಿಯೆಂದರೆ ನಿಮ್ಮಲ್ಲಿನ ಆಳವಾದ ವಿಶ್ರಾಂತಿಯ ಸ್ಥಿತಿಗೆ ಬರುವುದು" ಎಂದು ಹಂಚಿಕೊಳ್ಳುತ್ತಾರೆ.
ಆಧ್ಯಾತ್ಮಿಕ ಉತ್ತುಂಗದ ಶಿವರಾತ್ರಿ
ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಉತ್ಸವವು, ಗಹನವಾದ ಆಧ್ಯಾತ್ಮಿಕತೆ ಮತ್ತು ಭವ್ಯವಾದ ವ್ಯವಸ್ಥಾಪನೆಯ ಸಮನ್ವಯವನ್ನು ಪ್ರತಿಬಿಂಬಿಸುತ್ತವೆ. ಸಾವಿರಾರು ಭಕ್ತರನ್ನು ಸ್ವಾಗತಿಸಿ, ಅವರಿಗೆ ಸಕಲ ಸೌಲಭ್ಯಗಳನ್ನೂ ನೀಡಲು ಪೂರ್ಣ ಸಿದ್ಧತೆಗಳು ನಡೆಯುತ್ತಿವೆ. ಶಿವರಾತ್ರಿಯಂದು ಸುಮಾರು 2.5 ರಿಂದ 3 ಲಕ್ಷ ಭಕ್ತರಿಗೆ ಪ್ರಸಾದವನ್ನು ಹಂಚುವ ಸರ್ವ ಸಿದ್ಧತೆಗಳನ್ನೂ ಸೇವಾಕರ್ತರು ನಡೆಸುತ್ತಿದ್ದಾರೆ. ಇದು ಈ ಕಾರ್ಯಕ್ರಮದ ವೈಶಿಷ್ಟ್ಯತೆಯಾದ ಸೇವಾ ಮನೋಭಾವ ಮತ್ತು ಆತಿಥ್ಯವನ್ನು ತೋರಿಸುತ್ತದೆ.
ಈ ಸಂಜೆಯ ಪ್ರಮುಖ ಆಕರ್ಷಣೆಯಾಗಿ ಪವಿತ್ರವಾದ ಮಹಾರುದ್ರ ಪೂಜೆ ನಡೆಯಲಿದೆ. ಇದು ಭಗವಾನ್ ಶಿವನ ಕರುಣಾಮಯ ರೂಪವಾದ ಭಗವಾನ್ ರುದ್ರನ ಆರಾಧನೆಗೆ ಸಮರ್ಪಿತವಾದ ಶಕ್ತಿಶಾಲಿ ವೈದಿಕ ವಿಧಿಯಾಗಿದೆ. ಗುರುದೇವರ ಸಾನ್ನಿಧ್ಯದಲ್ಲಿ ನಡೆಯುವ ಈ ರುದ್ರ ಪೂಜೆ, ಶಿವನ ಪರಿವರ್ತನಾ ಶಕ್ತಿಯನ್ನು ಆಹ್ವಾನಿಸುತ್ತದೆ; ಇದು ನಕಾರಾತ್ಮಕತೆಯ ವಿಲಯ ಮತ್ತು ಉನ್ನತ ಚೈತನ್ಯದ ಜಾಗೃತಿಯ ಸಂಕೇತವಾಗಿದೆ. ಶ್ರೀರುದ್ರಂನಲ್ಲಿರುವ ರುದ್ರಪಠಣದೊಂದಿಗೆ ನಡೆಯುವ ಈ ವಿಧಿಯು, ಪರಿಸರವನ್ನು ಶುದ್ಧಗೊಳಿಸಿ, ಸಮೂಹ ಚೈತನ್ಯವನ್ನು ಮೇಲಕ್ಕೆತ್ತಿ, ವ್ಯಕ್ತಿಗಳಿಗೂ ಸಮಾಜಕ್ಕೂ ಶಾಂತಿ, ಸಮೃದ್ಧಿ ಮತ್ತು ಕಲ್ಯಾಣವನ್ನು ತರುವುದು ಎಂದು ನಂಬಲಾಗಿದೆ.

