MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಬಣ್ಣದೋಕುಳಿಗೆ ಅಡ್ಡಿಯಾಗಲಿದ್ಯಾ ಚಂದ್ರಗ್ರಹಣ? ಈ ಮೂರು ರಾಶಿಗೆ ಸಂಕಷ್ಟದ ಕರಿ ನೆರಳು

ಬಣ್ಣದೋಕುಳಿಗೆ ಅಡ್ಡಿಯಾಗಲಿದ್ಯಾ ಚಂದ್ರಗ್ರಹಣ? ಈ ಮೂರು ರಾಶಿಗೆ ಸಂಕಷ್ಟದ ಕರಿ ನೆರಳು

Lunar Eclipse 2026 : ಹೋಳಿ ದಹನದ ದಿನವೇ ಚಂದ್ರಗ್ರಹಣ ಬಂದಿದೆ. ಇದ್ರಿಂದ ಹೋಳಿ ಹಬ್ಬಕ್ಕೆ ಅಡ್ಡಿಯಾಗುತ್ತಾ ಎನ್ನುವ ಪ್ರಶ್ನೆ ಜನರನ್ನು ಕಾಡ್ತಿದೆ. ಹೋಳಿ ಹಬ್ಬದ ಆಚರಣೆ ಹೇಗೆ, ಯಾವ ರಾಶಿ ಮೇಲೆ ಪರಿಣಾಮ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.  

2 Min read
Author : Roopa Hegde
Published : Feb 05 2026, 04:22 PM IST
Share this Photo Gallery
  • FB
  • TW
  • Linkdin
  • Whatsapp
17
ಹೋಳಿ ದಹನದಂದೇ ಚಂದ್ರಗ್ರಹಣ
Image Credit : Asianet News

ಹೋಳಿ ದಹನದಂದೇ ಚಂದ್ರಗ್ರಹಣ

ಹಿಂದೂ ಕ್ಯಾಲೆಂಡರ್ ಪ್ರಕಾರ, ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2026 ರಲ್ಲಿ, ಹೋಳಿ ದಹನ ಮಾರ್ಚ್ 3 ರಂದು ಮತ್ತು ಬಣ್ಣಗಳ ಓಕುಳಿ ಹೋಳಿ ಹಬ್ಬ ಮಾರ್ಚ್ 4 ರಂದು ಆಚರಿಸಲಾಗ್ತಿದೆ. ವರ್ಷದ ಮೊದಲ ಚಂದ್ರಗ್ರಹಣ ಹೋಳಿ ದಹನದ ದಿನ ಅಂದ್ರೆ ಮಾರ್ಚ್ 3 ರಂದು ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೋಳಿ ದಹನದಂದೇ ಚಂದ್ರಗ್ರಹಣ ಬಂದಿರೋದು ಬಣ್ಣದೋಕುಳಿಗೆ ಅಡ್ಡಿ ಮಾಡುತ್ತಾ?

27
ಹೋಳಿ ದಹನಕ್ಕೆ ಅಡ್ಡಿಯಾಗುತ್ತಾ ಗ್ರಹಣ ?
Image Credit : Asianet News

ಹೋಳಿ ದಹನಕ್ಕೆ ಅಡ್ಡಿಯಾಗುತ್ತಾ ಗ್ರಹಣ ?

ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3, 2026 ರಂದು ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 3.21 ಕ್ಕೆ ಪ್ರಾರಂಭವಾಗಿ ಸಂಜೆ 6.46 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಭಾರತದ ಹೆಚ್ಚಿನ ಭಾಗಗಳಲ್ಲಿ ಗೋಚರಿಸಲಿದೆ. ಚಂದ್ರಗ್ರಹಣದ ಒಟ್ಟು ಅವಧಿ ಸುಮಾರು 3 ಗಂಟೆ 25 ನಿಮಿಷಗಳಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ, ಗ್ರಹಣದ ಸಮಯದಲ್ಲಿ ಪೂಜೆ, ದಾನ, ಆಹಾರ ಮತ್ತು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಹೋಳಿ ದಹನಕ್ಕೆ 6.46 ರಿಂದ 8.50ರವರೆಗೆ ಶುಭ ಸಮಯವಿದೆ. ಗ್ರಹಣವು ಹೋಳಿ ದಹನದ ಶುಭ ಸಮಯಕ್ಕಿಂತ ಸ್ವಲ್ಪ ಮೊದಲು ಕೊನೆಗೊಳ್ಳುತ್ತಿದೆ. ಆದ್ದರಿಂದ ಹೋಳಿ ದಹನ ಹಾಗೂ ಹೋಳಿ ಆಚರಣೆ ಮೇಲೆ ಯಾವುದೇ ನೇರ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾವುದೇ ಭಯವಿಲ್ಲದೆ ಹೋಳಿ ದಹನ ಹಾಗೂ ಮರುದಿನ ಹೋಳಿ ಹಬ್ಬವನ್ನು ಆಚರಿಸಬಹುದಾಗಿದೆ.

Related Articles

Related image1
Dream Meaning: ಕನಸಿನಲ್ಲಿ ಹಾವು ಹೀಗೆ ಕಾಣಿಸಿಕೊಂಡಿದೆಯಾ?, ಇದರ ಹಿಂದಿದೆ ಒಂದು ವಿಶೇಷ ಅರ್ಥ
Related image2
Affair Signs: ಅಕ್ರಮ ಸಂಬಂಧ ಇದ್ರೆ ನಿಮ್ಮ ಜಾತಕದಲ್ಲೇ ಗೊತ್ತಾಗುತ್ತೆ! ಆ ಸೂಚನೆಗಳೇನು?
37
ಚಂದ್ರಗ್ರಹಣದಿಂದ ಸಂಕಷ್ಟ
Image Credit : Asianet News

ಚಂದ್ರಗ್ರಹಣದಿಂದ ಸಂಕಷ್ಟ

2026 ರಲ್ಲಿ ಹೋಳಿ ದಿನವೇ ಚಂದ್ರಗ್ರಹಣ ಬಂದಿರೋದು ಕೆಲ ರಾಶಿಯವರಿಗೆ ಸಂಕಷ್ಟ ತರಲಿದೆ. ಹೋಳಿ ಮತ್ತು ಚಂದ್ರಗ್ರಹಣದ ಸಂಯೋಜನೆಯು ಕನ್ಯಾರಾಶಿಯರಿಗೆ ಶುಭವಲ್ಲ. ಇದು ಮಾನಸಿಕ ತೊಂದರೆಗೆ ಕಾರಣವಾಗುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಜೀವಕ್ಕೆ ಅಪಾಯವನ್ನುಂಟು ಮಾಡುವ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

47
ದಾಂಪತ್ಯದಲ್ಲಿ ಬಿರುಕು
Image Credit : Asianet News

ದಾಂಪತ್ಯದಲ್ಲಿ ಬಿರುಕು

ಹೋಳಿ ದಹನ ಹಾಗೂ ಚಂದ್ರಗ್ರಹಣದ ಪ್ರಭಾವ ಮೇಷ ರಾಶಿಯವರ ಮೇಲಾಗಲಿದೆ. ಸಂಗಾತಿಯೊಂದಿಗೆ ಹಳೆಯ ವಿವಾದಗಳು ಮತ್ತೆ ಗಲಾಟೆಗೆ ಕಾರಣ ಆಗ್ಬಹುದು. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಮೇಷ ರಾಶಿಯವರು ಈ ಸಂದರ್ಭದಲ್ಲಿ ಶಾಂತವಾಗಿರುವುದು ಬಹಳ ಮುಖ್ಯ. ಸಾಮಾಜಿಕ ಖ್ಯಾತಿಗೆ ಧಕ್ಕೆಯಾಗುವ ಸಂಭವ ಇರೋದ್ರಿಂದ ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಬೇಡಿ.

57
ಆರ್ಥಿಕ ಸಂಕಷ್ಟ
Image Credit : Asianet News

ಆರ್ಥಿಕ ಸಂಕಷ್ಟ

ಶನಿಯ ಸಾಡೇ ಸತಿ ಮೀನ ರಾಶಿಯ ಮೇಲೆ ಮೇಲುಗೈ ಸಾಧಿಸುತ್ತಿದೆ. ಆದ್ದರಿಂದ, ಹೋಳಿಯಂದು ಗ್ರಹಣದ ನೆರಳು ನಿಮ್ಮ ಜೀವನದಲ್ಲಿ ದುರಂತವನ್ನು ತರಬಹುದು. ಕೆಲಸದಲ್ಲಿ ಸವಾಲುಗಳು ಹೆಚ್ಚಾಗುತ್ತವೆ. ಕಾನೂನು ವಿಷಯಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಿ. ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಖರ್ಚಿಗೆ ಬ್ರೇಕ್ ಹಾಕದೆ ಹೋದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

67
ಅಶುಭ ಪ್ರಭಾವದಿಂದ ರಕ್ಷಣೆ ಹೀಗೆ
Image Credit : Asianet News

ಅಶುಭ ಪ್ರಭಾವದಿಂದ ರಕ್ಷಣೆ ಹೀಗೆ

ಹೋಳಿಯಂದು ಚಂದ್ರಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು, ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವುದು ಪರಿಣಾಮಕಾರಿ. ಚಂದ್ರಗ್ರಹಣದ ಪ್ರಭಾವಕ್ಕೆ ಒಳಗಾಗುವ ರಾಶಿಯವರು ಚಂದ್ರಗ್ರಹಣವನ್ನು ನೋಡಬಾರದು. ಗ್ರಹಣದ ನಂತರ ಸ್ನಾನ ಮಾಡಿ ದಾನ ಮಾಡಬೇಕು. 

77
ಯಾರಿಗೆ ಲಾಭ?
Image Credit : Asianet News

ಯಾರಿಗೆ ಲಾಭ?

ಹೋಳಿ ದಹನದ ದಿನ ಚಂದ್ರಗ್ರಹಣ ಬಂದಿರುವುದು ಕೆಲ ರಾಶಿಯವರಿಗೆ ಲಾಭ ತರಲಿದೆ. ಸಿಂಹ ರಾಶಿಯವರಿಗೆ ಸಾಕಷ್ಟು ಪ್ರಯೋಜನಕಾರಿ. ವಿದ್ಯಾರ್ಥಿಗಳಿಗೆ ಲಾಭಕರವಾಗಿರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಉದ್ಯಮಿಗಳಿಗೆ ಸಹ ಪ್ರಯೋಜನಕಾರಿ. ಧನು ರಾಶಿಯವರಿಗೆ ವಾಹನ ಅಥವಾ ಆಸ್ತಿ ಖರೀದಿ ಭಾಗ್ಯ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಮಕರ ರಾಶಿಯವರಿಗೆ ಹೊಸ ಉದ್ಯೋಗ ಅಥವಾ ಬಡ್ತಿಯ ಲಾಭವಿದೆ. ವಿದೇಶಗಳಲ್ಲಿ ಪ್ರಯಾಣಿಸುವ ಸಾಧ್ಯತೆ ಇದೆ. ವೃತ್ತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಪ್ರಯೋಜನಕಾರಿಯಾಗಿದೆ. ದುಬಾರಿ ಅಥವಾ ಐಷಾರಾಮಿ ವಸ್ತುವನ್ನು ಖರೀದಿಸಬಹುದು. ಹೊಸ ಆದಾಯದ ಮೂಲ ತೆರೆಯಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಚಂದ್ರ ಗ್ರಹಣ
ಹೋಳಿ ಹಬ್ಬ
ಜ್ಯೋತಿಷ್ಯ

Latest Videos
Recommended Stories
Recommended image1
Dream Meaning: ಕನಸಿನಲ್ಲಿ ಹಾವು ಹೀಗೆ ಕಾಣಿಸಿಕೊಂಡಿದೆಯಾ?, ಇದರ ಹಿಂದಿದೆ ಒಂದು ವಿಶೇಷ ಅರ್ಥ
Recommended image2
ಶನಿ ಅಷ್ಟ 2026: 8ನೇ ಮನೆಯಲ್ಲಿ ಶನಿ ಸಂಚಾರ, ಈ 4 ರಾಶಿಗೆ ಅನಿರೀಕ್ಷಿತ ಆರ್ಥಿಕ ಬಡತನ-ನಷ್ಟ
Recommended image3
ಕ್ಷಣಾರ್ಧದಲ್ಲಿ ಬಣ್ಣ ಬದಲಾಯಿಸುವ ಮನಸ್ಥಿತಿ... ಈ ರಾಶಿಯವರೊಂದಿಗೆ ಜಾಗರೂಕರಾಗಿರಿ!
Related Stories
Recommended image1
Dream Meaning: ಕನಸಿನಲ್ಲಿ ಹಾವು ಹೀಗೆ ಕಾಣಿಸಿಕೊಂಡಿದೆಯಾ?, ಇದರ ಹಿಂದಿದೆ ಒಂದು ವಿಶೇಷ ಅರ್ಥ
Recommended image2
Affair Signs: ಅಕ್ರಮ ಸಂಬಂಧ ಇದ್ರೆ ನಿಮ್ಮ ಜಾತಕದಲ್ಲೇ ಗೊತ್ತಾಗುತ್ತೆ! ಆ ಸೂಚನೆಗಳೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved