2026ರ ಬುಧ ಸಂಚಾರ: 4 ರಾಶಿಗಳಿಗೆ ದುಡ್ಡು ಸುರಿಯಲಿದೆ, ನಿಮ್ಮ ರಾಶಿ ಇದೆಯಾ ನೋಡಿ?
2026ರ ಆಗಸ್ಟ್ 22ರಂದು ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಸೂರ್ಯನೊಂದಿಗೆ ಸೇರಿ 'ಬುಧಾದಿತ್ಯ ಯೋಗ'ವನ್ನು ಸೃಷ್ಟಿಸಲಿದೆ. ಈ ಯೋಗದಿಂದಾಗಿ 4 ರಾಶಿಯವರಿಗೆ ವೃತ್ತಿ, ಹಣಕಾಸು ಮತ್ತು ಕೌಟುಂಬಿಕ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ.

2026ರಲ್ಲಿ ಬುಧ ಸಂಚಾರ - ಅದೃಷ್ಟದ ರಾಶಿಗಳು
ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹದ ಸಂಚಾರವು 12 ರಾಶಿಗಳ ಮೇಲೆ ಬೇರೆ ಬೇರೆ ಪರಿಣಾಮ ಬೀರುತ್ತೆ. ಅದೇ ರೀತಿ, 2026ರ ಆಗಸ್ಟ್ 22ರಂದು ಬುಧ ಗ್ರಹದ ಪ್ರಮುಖ ಸಂಚಾರ ನಡೆಯಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದಕ್ಕೂ ಮುನ್ನ ಆಗಸ್ಟ್ 17ರಂದು ಸೂರ್ಯ ಕೂಡ ಸಿಂಹ ರಾಶಿಗೆ ಬರುವುದರಿಂದ, ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿ 'ಬುಧಾದಿತ್ಯ ಯೋಗ'ವನ್ನು ಸೃಷ್ಟಿಸುತ್ತವೆ. ಈ ಯೋಗವು ಜ್ಞಾನ, ಮಾತು, ವೃತ್ತಿ ಮತ್ತು ಆರ್ಥಿಕ ವಿಚಾರಗಳಲ್ಲಿ ಕೆಲವು ರಾಶಿಗಳಿಗೆ ಅನುಕೂಲಕರ ಬದಲಾವಣೆಗಳನ್ನು ತರಬಹುದು ಎಂಬ ನಂಬಿಕೆ ಇದೆ.
ವೃಶ್ಚಿಕ ರಾಶಿ
ಅನಿರೀಕ್ಷಿತ ಹಣಕಾಸಿನ ಲಾಭ ಸಿಗುವ ಸಾಧ್ಯತೆ, ಆದಾಯ ಹೆಚ್ಚಾಗಬಹುದು. ವ್ಯಾಪಾರ, ಉದ್ಯಮ ಮಾಡುವವರಿಗೆ ಹೊಸ ಅವಕಾಶ, ಲಾಭ ಸಿಗಲಿದೆ. ಬಹಳ ಸಮಯದಿಂದ ಕಾಯುತ್ತಿದ್ದ ಕೆಲವು ನಿರ್ಧಾರಗಳು ನಿಮಗೆ ಲಾಭವನ್ನುಂಟು ಮಾಡಲಿವೆ. ಸಮಾಜದಲ್ಲಿ ಗೌರವ ಸಿಗಲಿದೆ. ಕೆಲಸ ಅಥವಾ ವೃತ್ತಿಯ ಕಾರಣದಿಂದ ದೂರದ ಪ್ರಯಾಣ ಮಾಡಬೇಕಾಗಬಹುದು. ಈ ಪ್ರಯಾಣ ಭವಿಷ್ಯದ ಬೆಳವಣಿಗೆಗೆ ಉಪಯುಕ್ತವಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ.
ಮೇಷ ರಾಶಿ
ಬುಧನ ಈ ಸಿಂಹ ರಾಶಿಯ ಸಂಚಾರ ಮೇಷ ರಾಶಿಯವರಿಗೆ ಹಲವು ರೀತಿಯಲ್ಲಿ ಅನುಕೂಲಕರವಾಗಿರಲಿದೆ ಅಂತ ಜ್ಯೋತಿಷ್ಯ ಹೇಳುತ್ತದೆ. ಆದಾಯಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಪ್ರಗತಿ, ಬಹಳ ದಿನಗಳಿಂದ ನಿಂತುಹೋಗಿದ್ದ ಕೆಲವು ಕೆಲಸಗಳು ಮತ್ತೆ ವೇಗ ಪಡೆದು ಪೂರ್ಣಗೊಳ್ಳುವ ಸಾಧ್ಯತೆ, ಕುಟುಂಬದಲ್ಲೂ ಸಂತೋಷದ ವಾತಾವರಣ, ಕೆಲಸ ಮತ್ತು ವೃತ್ತಿ ಸಂಬಂಧಿತ ವಿಷಯಗಳಲ್ಲಿ ಹೊಸ ಅವಕಾಶಗಳು ಸಿಗಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಸರ ಮಾಡದಿರುವುದು ಉತ್ತಮ.
ಧನು ರಾಶಿ
ಈ ಸಂಚಾರವು ಧನು ರಾಶಿಯವರಿಗೆ ಹಲವು ರೀತಿಯಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ ಎಂಬುದು ಜ್ಯೋತಿಷ್ಯದ ನಂಬಿಕೆ. ಆದಾಯ ಹೆಚ್ಚಾಗುವ ಅವಕಾಶಗಳು ಸೃಷ್ಟಿ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ, ಕುಟುಂಬದಲ್ಲಿ ಸಂತೋಷದ ವಾತಾವರಣ, ಬಹಳ ದಿನಗಳಿಂದ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವವರಿಗೆ, ಆ ಪ್ರಯತ್ನಗಳಲ್ಲಿ ಪ್ರಗತಿ ಕಾಣಬಹುದು. ಕೆಲಸ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ಸಮಯ ಇದಾಗಿರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಕನ್ಯಾ ರಾಶಿ
ಈ ಸಂಚಾರವು ಆದಾಯ ಮತ್ತು ವೃತ್ತಿ ವಿಷಯಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ಸಿಗಬಹುದು. ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಬರಬಹುದು. ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಕ್ರಮಗಳು ನಡೆಯುವ ಸನ್ನಿವೇಶ ಸೃಷ್ಟಿಯಾಗಬಹುದು.

