ಚಂದ್ರ ಮಂಗಳದಿಂದ 5 ರಾಶಿಗೆ ಮಹಾಲಕ್ಷ್ಮೀ ರಾಜಯೋಗ; ನವೆಂಬರ್ 1ರಿಂದ ಅದೃಷ್ಟ ಶುಭಾರಂಭ
ನವೆಂಬರ್ ಆರಂಭದಲ್ಲಿ ಕರ್ಕಾಟಕ ರಾಶಿಯಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆಯಿಂದ 'ಚಂದ್ರ ಮಂಗಳ ಯೋಗ' ಅಥವಾ 'ಮಹಾಲಕ್ಷ್ಮಿ ಯೋಗ' ಸೃಷ್ಟಿಯಾಗುತ್ತಿದೆ. ಈ ವಿಶೇಷ ಯೋಗವು 4 ರಾಶಿಯವರಿಗೆ ಆರ್ಥಿಕ ಪ್ರಗತಿ ಹಾಗೂ ವೃತ್ತಿಜೀವನದಲ್ಲಿ ಭರ್ಜರಿ ಲಾಭ ತಂದುಕೊಡಲಿದೆ.

ಚಂದ್ರ ಮಂಗಳ ಯೋಗ
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಜನೆ ಬದುಕಿನಲ್ಲಿ ದೊಡ್ಡ ಬದಲಾವಣೆ ತರುತ್ತದೆ. ನವೆಂಬರ್ ಆರಂಭದಲ್ಲಿ ಚಂದ್ರ ಮತ್ತು ಮಂಗಳ ಒಂದೇ ರಾಶಿಯಲ್ಲಿ ಸೇರುತ್ತಿದ್ದಾರೆ. ಇದರಿಂದ 'ಚಂದ್ರ ಮಂಗಳ ಯೋಗ' ಸೃಷ್ಟಿಯಾಗುತ್ತಿದೆ. ವೇದ ಜ್ಯೋತಿಷ್ಯದಲ್ಲಿ ಇದನ್ನು 'ಮಹಾಲಕ್ಷ್ಮಿ ಯೋಗ' ಅಂತಾರೆ. ಇದು ಸಂಪತ್ತು, ಆರ್ಥಿಕ ಪ್ರಗತಿ ಹಾಗೂ ವೃತ್ತಿಜೀವನದ ಬೆಳವಣಿಗೆಗೆ ಕಾರಣವಾಗುತ್ತದೆ.
ಸಮಯ
ಪಂಚಾಂಗದ ಪ್ರಕಾರ, ನವೆಂಬರ್ 1ರ ಮಧ್ಯರಾತ್ರಿ 12 ಗಂಟೆಗೆ ಚಂದ್ರ ಕರ್ಕಾಟಕ ರಾಶಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿಯೇ ಇರುವ ಮಂಗಳನ ಜೊತೆ ಚಂದ್ರ ಸೇರುವುದರಿಂದ ಈ ಯೋಗ ಶುರುವಾಗುತ್ತದೆ. ನವೆಂಬರ್ 3ರ ಮುಂಜಾನೆ 3:46ರವರೆಗೆ ಈ ಯೋಗ ಇರಲಿದೆ. ಆಮೇಲೆ ಚಂದ್ರ ಸಿಂಹ ರಾಶಿಗೆ ಹೋಗುತ್ತಾನೆ.
ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ, ಚಂದ್ರ ಮನಸ್ಸು ಮತ್ತು ಭಾವನೆಗಳನ್ನು ಪ್ರತಿನಿಧಿಸಿದರೆ, ಮಂಗಳ ಧೈರ್ಯ, ಶಕ್ತಿ ಮತ್ತು ಕ್ರಿಯಾಶೀಲತೆಯನ್ನು ಸೂಚಿಸುತ್ತಾನೆ. ಇವೆರಡೂ ಗ್ರಹಗಳ ಸಂಯೋಜನೆ ಕೆಲವು ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ, ಕೆಲಸದ ಜಾಗದಲ್ಲಿ ಭರ್ಜರಿ ಲಾಭ ತಂದುಕೊಡಲಿದೆ.
ತುಲಾ ರಾಶಿ
ತುಲಾ ರಾಶಿಯವರ ವೃತ್ತಿಜೀವನದಲ್ಲಿ ಈ ಗ್ರಹಗಳ ಸಂಯೋಜನೆ ಹೊಸ ತಿರುವು ತರಲಿದೆ. ಕೆಲಸದ ಜಾಗದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಸಿಗಬಹುದು. ಪ್ರಮೋಷನ್ ಅಥವಾ ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಬದಲಾವಣೆಗಳ ಬಗ್ಗೆ ಸಿಹಿಸುದ್ದಿ ಕೇಳುವಿರಿ.
ವ್ಯಾಪಾರಸ್ಥರಿಗೆ ಪರಿಚಯಸ್ಥರ ಮೂಲಕ ಹೊಸ ಡೀಲ್ ಅಥವಾ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಈವರೆಗೆ ಪೆಂಡಿಂಗ್ ಇದ್ದ ಹಣಕಾಸಿನ ವಹಿವಾಟುಗಳು ಮತ್ತೆ ಶುರುವಾಗಲಿವೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಗಳಿಸುವ ನಿಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗುತ್ತದೆ.
ಮೇಷ ರಾಶಿ
ಮೇಷ ರಾಶಿಯವರ ವೃತ್ತಿಜೀವನದಲ್ಲಿ ಚಂದ್ರ ಮಂಗಳ ಯೋಗ ಹೊಸ ದಾರಿಗಳನ್ನು ತೆರೆಯಲಿದೆ. ಕೆಲಸ ಬದಲಾಯಿಸಲು ಕಾಯುತ್ತಿರುವವರಿಗೆ ಒಳ್ಳೆ ಅವಕಾಶಗಳು ಸಿಗುತ್ತವೆ. ಈಗಾಗಲೇ ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿ ಅಥವಾ ಹೊಸ ಹುದ್ದೆ ಸಿಗುವ ಚಾನ್ಸ್ ಇದೆ.
ವ್ಯಾಪಾರಸ್ಥರು ಹೊಸಬರ ಜೊತೆ ಸೇರಿ ಕೆಲಸ ಮಾಡುವುದರಿಂದ ಬ್ಯುಸಿನೆಸ್ ಡೆವಲಪ್ ಮಾಡಬಹುದು. ಆದಾಯ ಹೆಚ್ಚಾಗುವ ಸಾಧ್ಯತೆಗಳಿದ್ದರೂ, ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುವುದು ಬಹಳ ಮುಖ್ಯ. ದೊಡ್ಡ ಮಟ್ಟದ ಹೂಡಿಕೆ ಮಾಡುವ ಮುನ್ನ ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ.
ಕರ್ಕಾಟಕ ರಾಶಿ
ಚಂದ್ರ ಮತ್ತು ಮಂಗಳ ಕರ್ಕಾಟಕ ರಾಶಿಯಲ್ಲೇ ಸೇರುತ್ತಿರುವುದರಿಂದ, ಈ ರಾಶಿಯವರಿಗೆ ಈ ಯೋಗ ಬಹಳ ಸ್ಪೆಷಲ್. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಕೆಲಸ ಮತ್ತು ಉದ್ಯೋಗದಲ್ಲಿ ನಿಮಗೆ ಹೊಸ ಅವಕಾಶಗಳು ಒಲಿದುಬರುತ್ತವೆ. ಆಫೀಸ್‌ನಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ಸ್ವಂತ ಬ್ಯುಸಿನೆಸ್ ಮಾಡುವವರಿಗೆ ಹೊಸ ಕ್ಲೈಂಟ್ಸ್ ಅಥವಾ ಪ್ರಾಜೆಕ್ಟ್‌ಗಳಿಂದ ಒಳ್ಳೆ ಲಾಭ ಸಿಗುತ್ತದೆ. ಬಹಳ ದಿನಗಳಿಂದ ಬರಬೇಕಿದ್ದ ಬಾಕಿ ಹಣ ನಿಮ್ಮ ಕೈಸೇರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ಹೊಸ ಪ್ಲಾನ್ ಶುರು ಮಾಡಲು ಇದು ಬೆಸ್ಟ್ ಟೈಮ್.
ಮಕರ ರಾಶಿ
ಮಕರ ರಾಶಿಯವರಿಗೆ ಮಹಾಲಕ್ಷ್ಮಿ ಯೋಗದ ಈ ಸಮಯ ಉದ್ಯೋಗ ಮತ್ತು ಹಣಕಾಸಿನ ವಿಚಾರದಲ್ಲಿ ಬಹಳ ಮುಖ್ಯವಾಗಲಿದೆ. ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿಗಳು ಸಿಗುತ್ತವೆ. ಜೊತೆಗೆ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒಳ್ಳೆ ಚಾನ್ಸ್ ಸಿಗುತ್ತದೆ. ಉದ್ಯಮಿಗಳು ಹೊಸ ಗ್ರಾಹಕರು, ಪಾರ್ಟ್‌ನರ್‌ಶಿಪ್ ಮತ್ತು ಬ್ಯುಸಿನೆಸ್ ಪ್ಲಾನ್‌ಗಳ ಮೂಲಕ ಭರ್ಜರಿ ಲಾಭ ಗಳಿಸುತ್ತಾರೆ. ಆದಾಯ ಹೆಚ್ಚಿಸುವ ನಿಮ್ಮ ಪ್ರಯತ್ನಗಳು ಕೈಗೂಡುತ್ತವೆ. ಬಹಳ ದಿನಗಳಿಂದ ಪೆಂಡಿಂಗ್ ಇದ್ದ ಕೆಲಸಗಳು ಕಂಪ್ಲೀಟ್ ಆಗಲಿವೆ. ಭವಿಷ್ಯದ ಆರ್ಥಿಕ ಭದ್ರತೆ ಬಗ್ಗೆ ಗಮನಹರಿಸುವುದು ಒಳ್ಳೆಯದು.

