ಗುರುವಿನಿಂದ 2024 ರಲ್ಲಿ ಈ ರಾಶಿಗೆ ಕೆಲಸದಲ್ಲಿ ಪ್ರಗತಿ, ಹಣ ಸಂಪತ್ತಿನ ಸುರಿಮಳೆ
ಗುರುವು ಮೇಷ ರಾಶಿಯಿಂದ ಹೊರಬಂದು 2024 ರಲ್ಲಿ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.
ಹೊಸ ವರ್ಷ 2024 ರಲ್ಲಿ ಗುರುವು ಮೇಷರಾಶಿಯನ್ನು ತೊರೆದು ಮೇ 1 ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.ವೃಷಭ ರಾಶಿಗೆ ಗುರುವಿನ ಪ್ರವೇಶ ಅನೇಕ ರಾಶಿಗಳಿಗೆ ಪ್ರಯೋಜನ ಕಾರಿಯಾಗಿದೆ.
ಗುರುವಿನ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನ ಕಾರಿ.ನಿಮ್ಮ ಅದೃಷ್ಟ ಬಲಗೊಳ್ಳುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಒಳ್ಳೆಯ ಸುದ್ದಿ ಸ್ವೀಕರಿಸಬಹುದು.
ಗುರುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಮಂಗಳಕರ. ಮುಂಬರುವ ಹನ್ನೇರಡು ತಿಂಗಳು ನಿಮಗೆ ಲಾಭದಾಯಕ. ಅಡೆತಡೆಗಳು ದೂರವಾಗುತ್ತದೆ.ಆದಾಯ ಹೆಚ್ಚಳ. ಬಡ್ತಿ ಸಿಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ವಿಯಾಗುತ್ತೀರಿ.ಹೊಸ ಉದ್ಯೋಗದ ಪ್ರಸ್ತಾಪವನ್ನು ಸಹ ಪಡೆಯಬಹುದು.
ಗುರುವಿನ ಸಂಚಾರವು ಸಿಂಹ ರಾಶಿಯವರಿಗೆ ಧನಾತ್ಮಕ ಫಲಿತಾಂಶವನ್ನು ತರುತ್ತದೆ. ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಆರ್ಥಿಕ ಲಾಭ ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.