ಮೇ 1ಕ್ಕೆ ಗುರು ಗ್ರಹ ಬದಲಾವಣೆ, ವರ್ಷಪೂರ್ತಿ 5 ರಾಶಿಗಳಿಗೆ ಗುರು ಬಲವಿಲ್ಲ!
ಈ ವರ್ಷಗುರು ವೃಷಭ ರಾಶಿಗೆ ಬದಲಾಗುವ ವರ್ಷ. 2024 ಮೇ 01 ರಂದು ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ ಮಾಡಲಿದ್ದಾನೆ. ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್ ಗುರು ಬಲ ಬಗ್ಗೆಹೇಳಿದ್ದಾರೆ. ನಿಮ್ಮ ರಾಶಿ ಫಲ ಹೇಗಿದೆ ಅಂತ ಚೆಕ್ ಮಾಡಿಕೊಳ್ಳಿ.
ಇದು, ಗುರು ವೃಷಭ ರಾಶಿಗೆ ಬದಲಾಗುವ ವರ್ಷ. 2024 ಮೇ 01 ರಂದು ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ. ವರ್ಷವೆಲ್ಲ ಗುರು ವೃಷಣಭದಲ್ಲಿ ಸಂಚಾರವಿರುತ್ತದೆ. ವೃಷಭ ಶುಕ್ರನ ರಾಶಿಯಲ್ಲಿ ಗುರು ಸೇರಿದಾಗ - ಸ್ವಸ್ಥ ಆರೋಗ್ಯವೂ, ಸುಖ, ಧನ, ವ್ಯಾಪಾರ ವರ್ಧನೆ, ಮಿತ್ರ- ಪುತ್ರ ಬಂಧುಗಳ ಸುಖ,ದಾನ, ಧರ್ಮ ಕಾರ್ಯ, ದೈವ, ಗುರು ಭಕ್ತಿ ಸೇವೆ, ಸದಾಚಾರವೂ ವರ್ಧಿಸುತ್ತವೆ. ಶ್ರವಣಾ ಚಂದ್ರ ಮಕರದಲ್ಲಿ, ಬುಧವಾರ ಮಧ್ಯಾಹ್ನ ಗುರು ಬದಲಾವಣೆಯ ಶುಭದಿನವಸವಾಗಿದೆ. ಬುಧವಾರ ಆಗಿರುವುರಿಂದ ಬೋಧಕರು, ಲೆಕ್ಕಿಗರು, ಮಾಧ್ಯಮಗಳು, ಬರಹಗಾರರು, ಮಂತ್ರಿಗಳು, ಚಾಣಾಕ್ಷಮತಿಗಳು ಮುನ್ನೆಲೆಗೆ ಬರುವರು.
ಸುಮಾರು 22 ದಿವಸಗಳು ಗುರು ರವಿಯಿಂದ ವೃಷಭದಲ್ಲಿ ಅಸ್ತ. ಅಲ್ಲಿಯವರೆಗೆ ಲೋಕದಲ್ಲಿ ಸಂಕಷ್ಟಗಳು ಹರಡುತ್ತದೆ. ಶನಿದೃಷ್ಟಿಯಿಂದ ಮುಂದೆ ಸಾಗಿದ ಪರಿಣಾಮ ಯುದ್ಧ ಜನಾಂಗೀಯ ಕಲಹಗಳು, ಸಮಾಧಾನ, ಸಾಂತ್ವನ ಮಾರ್ಗದರ್ಶನ ತಾಳ್ಮೆಗಳು ಇಲ್ಲವಾಗಿ ಬಹು ಸಂಕಷ್ಟದಲ್ಲಿ ಬೀಳಬೇಕಾಗುತ್ತದೆ. ಗುರುದಯವಾದ ಮೇಲೆ ಜೂನ್ನಿಂದ ಪ್ರಗತಿಗಳುಂಟು. 9.10.2024 ರಿಂದ 4.2.2025ರ ವರೆಗೂ ಮೂರುವರೆ ತಿಂಗಳು ಗುರುವು ವೃಷಭದಲ್ಲಿ ‘ವಕ್ರೀಚಾರ’ವಿದ್ದು ಭಾರತಕ್ಕೆ ದೀರ್ಘಗಾಮಿತ್ವ, ಯಶೋಮಯ ಜಾಗತಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಮೇಷ, ಕರ್ಕ, ಸಿಂಹ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಗಳಿಗೆ ಗುರುಬಲದ ವರ್ಷ. ಇತರ ಐದು ರಾಶಿಗಳಿಗೆ ಗುರು ಬಲವಿಲ್ಲ. ಮೇಷ, ಸಿಂಹ, ಕರ್ಕರಾಶಿಯವರಿಗೆ ಅತ್ಯುತ್ತಮ ಗುರುವರ್ಷ. ವೃಶ್ವಿಕ ರಾಶಿಗೆ ರಾಜ ಯೋಗ. ಕನ್ಯಾ, ಮಕರ. ಕುಂಭರಾಶಿಯವರಿಗೆ ವ್ಯವಹಾರಿಕ ಉತ್ತಮ ವರ್ಷವಾಗಲಿದೆ.
ಮೇಷರಾಶಿಗೆ ಒಳ್ಳೆ ಗುರುಬಲ ವರ್ಷ. ಉದ್ಯೋಗ ಧನಾದಾಯ ಹೆಚ್ಚಳ. ಕಾರ್ಯಭಾರ ಬೆಳೆಯುವುದು. ಶ್ರೀಸುಬ್ರಹ್ಮಣ್ಯ ನಾಗರ ಪೂಜಿಸಿ.
ವೃಷಭ ರಾಶಿಗೆ ಗುರುಬಲವಿಲ್ಲ ಈ ವರ್ಷ , ಒತ್ತಡದ ವರ್ಷ. ವ್ಯವಹಾರದಲ್ಲಿ ಮೋಸವಾದೀತು ಜಾಗ್ರತೆಯಿಂದ ಇರಿ. ಗುರುಗಳನ್ನು ಪೂಜಿಸಿ.
ಮಿಥುನ ರಾಶಿಗೆ ವ್ಯಯದ ಗುರು , ಕಷ್ಟಕರ ವರ್ಷ. ಬಂಧು ಮಿತ್ರರೇ ಹಳ್ಳಕೆ ನೂಕುವರು, ಎಚ್ಚರ. . ಶ್ರೀನರಹರಿ- ನಾಗರ ಪೂಜಿಸಿ.
ಕರ್ಕ ರಾಶಿಗೆ ಏಕಾದಶ ಗುರು ಅತ್ಯುತ್ತಮ. ಧನಾದಾಯ, ಆರೋಗ್ಯ ಸುಧಾರಣೆ. ಧರ್ಮ ಕರ್ಮ ಕಾರ್ಯಗಳು ನಡೆವುದು. ಶ್ರೀಆಂಜನೇಯ ಸೇವೆ ಮಾಡಿ.
ಸಿಂಹ ರಾಶಿಗೆ ದಶಮ ಗುರುವಿನ ವರ್ಷ. ಶನಿಬಲವೂ ಇದ್ದು ಮನಸು ಸಮತ್ವಕ್ಕೆ ಬರುತ್ತದೆ. ಶ್ರೀಸುಬ್ರಹ್ಮಣ್ಯ ನಾಗ ಶಾಂತಿ ನಡೆಯಲಿ.
ಕನ್ಯಾ ರಾಶಿಗೆ ಒಂಬತ್ತನೇ ಗುರುವು ಶುಭ ಲಾಭ ಕರ್ಮಗಳ ಕೊಡುವನು. ಧೈರ್ಯವಾಗಿ ಮುನ್ನಡೆಯಿರಿ. ಶ್ರೀಗಣಪತಿ , ಅಂಬೆಯರ ಪೂಜಿಸಿ.
ತುಲಾ ರಾಶಿಗೆ ಅಷ್ಟಮ ಗುರು , ಪಂಚಮ ಶನಿ, ತ್ರಾಸ ಹೆಚ್ಚು. ತಾಳ್ಮೆ ವಹಿಸಬೇಕಾದ ವರ್ಷ. ಶನಿ-ಗುರು ಶಾಂತಿ ಹೋಮ ಮಾಡುವುದು ಒಳ್ಳೆಯದು
ವೃಶ್ಚಿಕ ರಾಶಿಗೆ ಸಪ್ತಮ ಗುರು , ಅಭಿವೃದ್ಧಿ ಉನ್ನತ ಸ್ಥಾನಮಾನ, ಸಂಚಾರ ದೇವ ಗುರುಕಾರ್ಯಗಳು ನಡೆವುದು. ಈಶ್ವರ , ದತ್ತಾತ್ರೇಯರ ಅಭಿಷೇಕ ಸೇವೆ ನಡೆಯಲಿ.
ಧನು ರಾಶಿಗೆ ಷಷ್ಠ ಗುರು ಬಲವಿಲ್ಲ. ಕೆಲಸ ಒತ್ತಡ ಹೆಚ್ಚಿರುತ್ತದೆ, ಫಲ ಕಡಿಮೆಯ ವರ್ಷವಾಗಿದೆ. ಶ್ರೀಗುರು - ನಾಗರ ಸೇವೆಗಳಾಗಲಿ.
ಮಕರ ರಾಶಿಯವರಿಗೆ ಪಂಚಮ ಗುರು. ನೀಚರಾಶಿ ವೀಕ್ಷಣೆ. ಮಧ್ಯಮ ಫಲ ಈ ವರ್ಷ ನಿಮಗೆ ಇದೆ. ಗುರುರಾಯರ ಸೇವೆ ಮಾಡುತ್ತಿರಿ ಒಳ್ಳೆಯದಾಗುತ್ತದೆ.
ಕುಂಭ ರಾಶಿಯವರಿಗೆ ಚತುರ್ಥ ಗುರು , ಒಳ್ಳೆಯದು. ಸ್ಥಾನಮಾನ, ವಾಸ, ಯಾತ್ರೆಗಳ ವರ್ಷ. ಆದಾಯ ಮಧ್ಯಮ. ಶನಿಶಾಂತಿ, ನಾಗ ಪೂಜೆಗಳು ನಡೆಯಲಿ.
ಮೀನ ರಾಶಿಯವರಿಗೆ ತೃತೀಯ ಗುರು , ಜನ್ಮ ರಾಹು , ವ್ಯಯದ ಶನಿ. ಸಮಸ್ಯೆಗಳ ಉಲ್ಬಣ ವರ್ಷ. ಜಾಗ್ರತೆ ವಹಿಸಿ. ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ.