ಗುರು ರಾಹು ಸಂಯೋಗ ಅಂತ್ಯ,ಈ ರಾಶಿಯವರಿಗೆ ಅದೃಷ್ಟ,ಹಣದ ಹೊಳೆ
ಅಕ್ಟೋಬರ್ 30 ರಂದು ರಾಹು ಮೀನ ರಾಶಿಯನ್ನು ಪ್ರವೇಶಿಸುವುದರಿಂದ ಅಕ್ಟೋಬರ್ ನಲ್ಲಿ ಗುರು ರಾಹು ಸಂಯೋಗ ಅಂತ್ಯವಾಗುತ್ತದೆ. ಮೇಷ ರಾಶಿಯೊಂದಿಗೆ ರಾಹು ಸಂಯೋಗವು ಅಂತ್ಯವಾಗುವುದರಿಂದ ಹಲವು ರಾಶಿಗಳಿಗೆ ಮಂಗಳಕರ ದಿನ ಆರಂಭವಾಗುತ್ತದೆ.
ರಾಹು ಸಂಯೋಗ ಅಂತ್ಯದಿಂದ ಮೇಷ ರಾಶಿ ಜನರಿಗೆ ಮಂಗಳಕರವಾಗಿರುತ್ತದೆ. ಇವರು ಇದ್ದಕ್ಕಿದಂತೆ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಗೌರವ ಹೆಚ್ಚಾಗುತ್ತದೆ.ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ವಿದೇಶಿ ಪ್ರವಾಸದ ಅವಕಾಶವಿರುತ್ತದೆ.
ರಾಹು ಸಂಯೋಗ ಅಂತ್ಯದಿಂದ ಸಿಂಹ ರಾಶಿಯವರಿಗೆ ಆರ್ಥಿಕ ಲಾಭವನ್ನು ತರಬಹುದು. ಇವರ ಭವಿಷ್ಯ ಸುಧಾರಿಸುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯವು ಮಂಗಳಕರವಾಗಿದೆ.
ರಾಹು ಸಂಯೋಗ ಅಂತ್ಯವು ಧನು ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರಬಹುದು. ಈ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಷೇರು ಮಾರುಕಟ್ಟಗೆ ಸಂಬಂಧಿಸಿದ ಜನರು ಲಾಭವನ್ನು ಗಳಿಸುತ್ತಾರೆ.