- Home
- Astrology
- Festivals
- Incense Sticks: ಊದಿನ ಕಡ್ಡಿ ಹಚ್ಚಿರೋ ಜಾಗದಲ್ಲಿ ಇದ್ದಾಗ ಏನು ಮಾಡಬೇಕು? ಹೀಗೆ ಕೇರ್ ತಗೊಳ್ಳಿ.. ಇಲ್ಲಾ ಅಂದ್ರೆ...!
Incense Sticks: ಊದಿನ ಕಡ್ಡಿ ಹಚ್ಚಿರೋ ಜಾಗದಲ್ಲಿ ಇದ್ದಾಗ ಏನು ಮಾಡಬೇಕು? ಹೀಗೆ ಕೇರ್ ತಗೊಳ್ಳಿ.. ಇಲ್ಲಾ ಅಂದ್ರೆ...!
ಊದಿನ ಕಡ್ಡಿ (ಅಗರಬತ್ತಿ) ಎಂದರೆ ದೇವಸ್ಥಾನ, ಪೂಜೆಗಳಲ್ಲಿ ಅಥವಾ ಸುಗಂಧಕ್ಕಾಗಿ ಬಳಸುವ ಒಂದು ವಿಧದ ಸಣ್ಣ ಕಡ್ಡಿ. ಇದನ್ನು ಸುಗಂಧಯುಕ್ತ ಪುಡಿಯಿಂದ ಮಾಡಲಾಗಿದ್ದು, ಇದನ್ನು ಹಚ್ಚಿದಾಗ ಹೊಗೆಯೊಂದಿಗೆ ಸುಗಂಧ ಬೀರುತ್ತದೆ. ಆದರೆ, ಇದರಿಂದ ಕೆಲವು ಸಮಸ್ಯೆಗಳು ತಲೆದೋರಬಹುದು. ಈ ಸ್ಟೋರಿ ನೋಡಿ…

ಊದಿನ ಕಡ್ಡಿ (ಅಗರಬತ್ತಿ) ಎಂದರೆ ದೇವಸ್ಥಾನ, ಪೂಜೆಗಳಲ್ಲಿ ಅಥವಾ ಸುಗಂಧಕ್ಕಾಗಿ ಬಳಸುವ ಒಂದು ವಿಧದ ಸಣ್ಣ ಕಡ್ಡಿ. ಇದು ಸುಗಂಧಯುಕ್ತ ಪುಡಿಯಿಂದ ಮಾಡಲಾಗಿರುತ್ತದೆ. ಇದನ್ನು ಹಚ್ಚಿದಾಗ ಹೊಗೆಯೊಂದಿಗೆ ಸುಗಂಧ ಬೀರುತ್ತದೆ.
ಪೂಜೆ ಮತ್ತು ಆರಾಧನೆ: ದೇವರ ಪೂಜೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಅಗರಬತ್ತಿ (Incense Sticks) ಬಳಸಲಾಗುತ್ತದೆ. ಇದು ಒಂಥರಾ ಸುವಾಸನೆ ಬೀರುವ ಕಾರಣಕ್ಕೆ ಪೂಜೆಯಲ್ಲಿ ಆಹ್ಲಾದತೆಯನ್ನು ತರುತ್ತದೆ.
ಈ ಊದಿನ ಕಡ್ಡಿಯನ್ನು ಸುಗಂಧದ ಕಾರಣಕ್ಕಾಗಿ, ಅಂದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಉತ್ತಮ ಪರಿಮಳವನ್ನು ಹರಡಲು ಉಪಯೋಗಿಸುತ್ತಾರೆ.
ಧ್ಯಾನ ಮತ್ತು ಯೋಗ ಮಾಡುವವರು ಕೂಡ ಧ್ಯಾನ ಮಾಡುವಾಗ ಶಾಂತ ಮತ್ತು ಏಕಾಗ್ರತೆಗಾಗಿ ಊದಿನ ಕಡ್ಡಿ ಬಳಸುತ್ತಾರೆ. ಇದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ.
ಆದರೆ ವೈಜ್ಞಾನಿಕವಾಗಿ, ಈ ಅಗರಬತ್ತಿ ಹಚ್ಚುವುದರಿಂದ ಕೆಲವರ ಆರೋಗ್ಯದ ಮೇಲಿನ ಕೆಟ್ಟ ಪರಿಣಾಮಗಳು ಬೀರಬಹುದು ಎನ್ನಲಾಗುತ್ತದೆ. ಊದುಬತ್ತಿ ಹಚ್ಚುವುದರಿಂದ, ಅದರ ಹೊಗೆಯಿಂದ ಶ್ವಾಸಕೋಶದ ಸಮಸ್ಯೆಗಳು, ಅಲರ್ಜಿಗಳು ಮತ್ತು ಕಿಡ್ನಿಗಳ ಮೇಲೆ ಒತ್ತಡದಂತಹ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ಅಧ್ಯಯನಗಳು ಹೇಳಿವೆ.
ಶ್ವಾಸಕೋಶದ ಸಮಸ್ಯೆಗಳು: ಅಗರಬತ್ತಿ ಹೊಗೆಯಿಂದ ಕೆಮ್ಮು, ಶೀತ ಮತ್ತು ಆಸ್ತಮಾದಂತಹ ಸಮಸ್ಯೆಗಳು ಉಂಟಾಗಬಹುದು.
ಅಲರ್ಜಿಗಳು: ತೆಳು ಚರ್ಮದವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಕಿಡ್ನಿಗಳ ಮೇಲೆ ಒತ್ತಡ: ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವಾಗ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.
ನರಗಳ ಸಮಸ್ಯೆಗಳು: ಕೆಲವು ಸಂದರ್ಭಗಳಲ್ಲಿ ನರಗಳ ಕಾಯಿಲೆಗಳಿಗೂ ಕಾರಣವಾಗಬಹುದು. ಸೂಕ್ಷ್ಮ ದೇಹಪ್ರಕೃತಿಯ ಜನರು ಊದುಬತ್ತಿ ಹಚ್ಚಿರುವ ಸ್ಥಳಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು ಎನ್ನಲಾಗುತ್ತದೆ.
ಸಲಹೆ: ಊದಿನ ಕಡ್ಡಿಗಳನ್ನು ಬಳಸುವ ಜಾಗದಲ್ಲಿ ಸಾಕಷ್ಟು ಗಾಳಿಯಾಡಲು ವ್ಯವಸ್ಥೆ ಇರಬೇಕು. ಮಕ್ಕಳು ಹಾಗೂ ವೃದ್ಧರು ಇರುವ ಸ್ಥಳದಲ್ಲಿ ಎಚ್ಚರಿಕೆಯಿಂದ ಬಳಸಬೇಕು. ಅನಾರೋಗ್ಯ ಹೊಂದಿರವವರು ಇಂತಹ ಸ್ಥಳಗಳಿಂದ ದೂರವಿರುವುದು ಉತ್ತಮ.

