ಬೆಳಗ್ಗೆದ್ದು ಯಾರ ಮುಖಾನೂ ನೋಡೋದು ಬೇಡ; ಈ 5 ಕೆಲಸ ಮಾಡಿ ಹಣದ ಸುರಿಮಳೆ ಆಗುತ್ತೆ!
ದಿನನಿತ್ಯದ ಕೆಲವು ಅಭ್ಯಾಸಗಳಿಂದ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಬಹುದು. ಮಂತ್ರ ಪಠಣ, ತುಳಸಿ ಪೂಜೆ, ಧ್ಯಾನ, ಸ್ವಚ್ಛತೆ ಮುಂತಾದವುಗಳು ಲಕ್ಷ್ಮೀ ಕೃಪೆಗೆ ಕಾರಣವಾಗುತ್ತವೆ.

Goddess Laxmi: ಪ್ರತಿದಿನದ ಆರಂಭ ದೇವರ ಸ್ಮರಣೆಯಿಂದ ಆರಂಭಿಸಬೇಕು ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಿರುತ್ತಾರೆ. ಈ ಒಂದು ಅಭ್ಯಾಸದಿಂದ ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ. ತಾಯಿ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಬೆಳಗ್ಗೆದ್ದು ಯಾರ ಮುಖವನ್ನು ನೋಡುವುದು ಬೇಡ.
ಬೆಳಗ್ಗೆದ್ದು ನರಿ, ರತ್ನಪಕ್ಷಿಯ ,ಮುಖ ನೋಡಬೇಕು ಎಂದು ಹಿರಿಯರು ಹೇಳುತ್ತಾರೆ. ಇದಕ್ಕಾಗಿ ಕೆಲವರು ಮಲಗುವ ಕೋಣೆಗಳಲ್ಲಿ ನರಿ ಮತ್ತು ರತ್ನಪಕ್ಷಿಯ ಫೋಟೋಗಳನ್ನು ಇರಿಸಿಕೊಂಡಿರುತ್ತಾರೆ. ಪ್ರತಿದಿನ ಬೆಳಗ್ಗೆ ನಿಯಮಿತವಾಗಿ ಕೆಲವು ಕೆಲಸಗಳನ್ನು ಮಾಡೋದರಿಂದ ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ
ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಬೆಳಗ್ಗೆ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆ 5 ಅಭ್ಯಾಸಗಳು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಮಂತ್ರ ಜಪಿಸಬೇಕು
1.ಪ್ರತಿದಿನ ಬೆಳಗ್ಗೆ "ಓಂ ಶ್ರೀ ಗಣೇಶಾಯ ನಮಃ ಅಥವಾ ಓಂ ಮಹಾಲಕ್ಷ್ಮ್ಯೈ ನಮಃ" ಎಂಬ ಶುಭ ಮಂತ್ರವನ್ನು ಜಪಿಸಬೇಕು. ಈ ಮಂತ್ರ ಜಪಿಸೋದರಿಂದ ನಿಮ್ಮ ಇಡೀ ದಿನ ಶುಭಕರವಾಗಿರುತ್ತದೆ. ಈ ಮಂತ್ರ ಜಪ ಮಾಡೋದರಿಂದ ನೀವು ಲಕ್ಷ್ಮೀದೇವಿಯ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ.
ತುಳಸಿ ಪೂಜೆ
2.ಸಂಪತ್ತಿನ ಒಡತಿಯಾಗಿರುವ ಲಕ್ಷ್ಮೀ ದೇವಿ ಕೃಪೆಗೆ ಪಾತ್ರರಾಗಲು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಪ್ರತಿದನ ಬೆಳಗ್ಗೆ ಸ್ನಾನದ ಬಳಿಕ ತುಳಸಿಯನ್ನು ಪೂಜಿಸಬೇಕು. ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಮನೆ ಆವರಣದಲ್ಲಿ ತುಳಸಿ ಗಿಡವಿರಬೇಕು ಎಂದು ವಾಸ್ತು ತಜ್ಞರು ಸಹ ಸಲಹೆ ನೀಡುತ್ತಾರೆ. ತುಳಸಿ ಪೂಜೆಯಿಂದ ನಿಮ್ಮ ದಿನ ಮಂಗಳಕರವಾಗಿರುತ್ತದೆ.
ಅಂಗೈಗಳನ್ನು ನೋಡಿಕೊಳ್ಳಿ
3.ಬೆಳಗ್ಗೆ ಎದ್ದ ತಕ್ಷಣ ಅಂಗೈಗಳನ್ನು ನೋಡಿಕೊಂಡು 'ಕರಾಗ್ರೇ ವಸತೇ ಲಕ್ಷ್ಮೀ: ಕರಮಧೇ ಸರಸ್ವತಿ. ಕರಮೂಲೇ ಸ್ಥಿತೋ ಬ್ರಹ್ಮಪ್ರಭಾತೇ ಕರದರ್ಶನಂ.' ಎಂಬ ಮಂತ್ರವನ್ನು ಜಪಿಸಬೇಕು. ನಂತರ ಅಂಗೈಗಳನ್ನು ಉಜ್ಜಿಕೊಂಡು ಮುಖದ ಮೇಲೆ ಸವರಿಕೊಳ್ಳಬೇಕು.
ಧ್ಯಾನ
4.ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡುವುದರಿಂದ ದೇವರ ಆಶೀರ್ವಾದ ಪಡೆದು ಮಾನಸಿಕ ನೆಮ್ಮದಿಯ ಅನುಭವವಾಗುತ್ತದೆ. ಧ್ಯಾನದ ಸಮಯದಲ್ಲಿ ಓಂ ಎಂದು ಹೇಳುವದರಿಂದಲೂ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಮನೆಯಲ್ಲಿ ಧನ್ಯಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ.
ಸ್ವಚ್ಛತೆ
5.ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೂ ಮನೆಯಲ್ಲಿರುವ ದೇವರಕೋಣೆಯನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಬೇಕು. ಹೀಗೆ ಮಾಡೋದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣನ್ಯೂಸ್ ದೃಢೀಕರಿಸುವದಿಲ್ಲ.