ಗಣಪತಿ ಬಪ್ಪನ ಸ್ವಾಗತಕ್ಕೆ ಸಿದ್ಧತೆ: ಖ್ಯಾತ ಕಲಾವಿದ ಜಿ.ಡಿ. ಭಟ್ಟರು ತಯಾರಿಸಿದ ಗಣಪನ ಮೂರ್ತಿಗಳ ಝಲಕ್..!
ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಗಣಪನ ಸ್ವಾಗತಕ್ಕೆ ನಾಡಿಗೆ ನಾಡೇ ಸಜ್ಜುಗೊಳ್ಳುತ್ತಿದೆ. ಮುಂದಿನ ತಿಂಗಳಲ್ಲಿ ಗಣೇಶ ಹಬ್ಬ ಇದ್ದು ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ವಿವಿಧ ಭಂಗಿಯ ಗಣೇಶ ಮೂರ್ತಿಗಳು ರೆಡಿಯಾಗುತ್ತಿದ್ದು, ಕಲಾವಿದನ ಕೈ ಚಳಕವನ್ನೊಮ್ಮೆ ನೋಡಿ
- ಫೋಟೋ ಕೃಪೆ: ಗೋಪಿ ಜಾಲಿ, ಕುಮಟಾ
ಗಣಪತಿಯನ್ನು ತಯಾರಿಸುವ ಕಲಾವಿದರೂ ಕೂಡ ತಿಂಗಳು ಮೊದಲೇ ಗಣಪನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುತ್ತಾರೆ. ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿ ತಯಾರಿಕೆಯಲ್ಲಿ ಕಲಾವಿದರು ತೊಡಗಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ.ಡಿ. ಭಟ್ಟರು ಈಗಾಗಲೇ ನೂರಾರು ಗಣಪತಿಯ ಮಣ್ಣಿನ ವಿಗ್ರಹಗಳನ್ನು ಸಿದ್ದಪಡಿಸಿದ್ದಾರೆ.
ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿಯ ವಿಗ್ರಹಗಳಿಗೆ ಕುಸುರಿ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಬಣ್ಣ ಬಳಿದು ಸಿದ್ಧಗೊಳ್ಳಲಿದೆ.
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶನ ಮೂರ್ತಿಗಳಿಗೆ ಸರ್ಕಾರ ನಿಷೇಧ ಹೇರಿದೆ. ಆದರೂ ಕೂಡ ರಾಜ್ಯಾದ್ಯಂತ ವ್ಯಾಪಕವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ.
ಆದ್ರೆ, ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ.ಡಿ. ಭಟ್ಟರು ಮಾತ್ರ ಜೇಡಿ ಮಣ್ಣಿನಿಂದಲೇ ನೂರಾರು ಗಣಪನ ಮೂರ್ತಿಗಳನ್ನ ತಯಾರಿಸುತ್ತಾರೆ. ಈ ಮೂಲಕ ಭಟ್ಟರು ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ.ಡಿ. ಭಟ್ಟರು ಗಣೇಶನ ಮೂರ್ತಿ ತಯಾರಿಕೆಯಲ್ಲಿ ಬಹಳ ಹೆಸರುವಾಸಿಯಾಗಿದ್ದಾರೆ. ಭಟ್ಟರು ತಯಾರಿಸಿದ ಗಣಪನ ಮೂರ್ತಿಗಳಿಗೆ ಭಾರೀ ಬೇಡಿಕೆ ಇದೆ
ಗಣೇಶ ಚತುರ್ಥಿ ಆಚರಣೆ ಮುಂಬೈನಲ್ಲಿ ಭಾರಿ ವಿಶೇಷ. ಮುಂಬೈನಲ್ಲಿ ಹಲವು ದಶಕಗಳಿಂದ ಕೆಲ ಸಂಘಟನೆಗಳು ಗಣೇಶ ಹಬ್ಬ ಆಚರಿಸುತ್ತಾ ಬರುತ್ತಿದೆ. ಈ ಪೈಕಿ ಜಿಎಸ್‌ಬಿ ಸೇವಾ ಮಂಡಲ್ ಕೂಡ ಒಂದು. ಈ ಬಾರಿಯೂ ಜಿಎಸ್‌ಬಿ ಸೇವಾ ಮಂಡಲದ ಗಣೇಶ ವಿಶ್ವದ ಶ್ರೀಮಂತ ಗಣಪ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಿಎಸ್‌ಬಿ ಗಣಪನಿಗೆ ಈ ಬಾರಿ ಬರೋಬ್ಬರಿ 400.58 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ.
ಮುಂಬೈನ ಜಿಎಸ್‌ಬಿ ಸೇವಾ ಮಂಡಲ ಈ ಬಾರಿ 5 ದಿನಗಳ ಗಣೇಶೋತ್ಸವ ಆಚರಿಸಲಿದೆ. ಸೆಪ್ಟೆಂಬರ್ 7 ರಿಂದ 11ರ ವರೆಗೆ ಅದ್ಧೂರಿಯಾಗಿ ಗಣೇಶೋತ್ಸವ ನಡೆಯಲಿದೆ. ಜಿಎಸ್‌ಬಿ ಗಣೇಶನ ದರ್ಶನ ಪಡೆಯಲು ಈಗಾಗಲೇ ಭಕ್ತರು ಸಜ್ಜಾಗಿದ್ದಾರೆ. ಆದರೆ ಗಣೇಶನ ಅನಾವರಣ ಸೆಪ್ಟೆಂಬರ್ 5 ರಂದು ಜಿಎಸ್‌ಬಿ ಸೇವಾ ಮಂಡಲ ಮಾಡಲಿದೆ. ಜಿಸ್‌ಬಿ ಸೇವಾ ಮಂಡಲ ಪ್ರತಿ ವರ್ಷ ಗಣೇಶೋತ್ಸವಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಈ ಬಾರಿ 70ನೇ ವರ್ಷದ ಗಣೇಶೋತ್ಸವದ ಕಾರಣ ವಿಮೆ ಮೊತ್ತವನ್ನು ಏರಿಸಲಾಗಿದೆ.
ಗಣಪತಿಯನ್ನು ತಯಾರಿಸುವ ಕಲಾವಿದರೂ ಕೂಡ ತಿಂಗಳು ಮೊದಲೇ ಗಣಪನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುತ್ತಾರೆ. ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿ ತಯಾರಿಕೆಯಲ್ಲಿ ಕಲಾವಿದರು ತೊಡಗಿಕೊಂಡಿದ್ದಾರೆ.
ಈ ವರ್ಷ ಗಣೇಶ ಚತುರ್ಥಿ 7 ಸೆಪ್ಟೆಂಬರ್ 2024 ರಂದು ಬಂದಿದೆ. ಇಂದಿನಿಂದಲೇ ಗಣೇಶ ಉತ್ಸವದ ಸಿದ್ಧತೆಗಳು ಆರಂಭವಾಗಿ 17 ಸೆಪ್ಟೆಂಬರ್ 2024 ರಂದು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಈ ದಿನ, ಗಣಪತಿಯ ನೀರಿನಲ್ಲಿ ವಿಸರ್ಜನೆ ಮಾಡುವ ಮೂಲಕ ಗಣಪತಿಗೆ ಬೀಳ್ಕೊಡಲಾಗುತ್ತದೆ.