Happy Ugadi 2023: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಯುಗಾದಿ ಎಂದರೆ ಹೊಸ ಯುಗದ ಆದಿ. ಇದೀಗ ಶೋಭಾಕೃತ ನಾಮ ಸಂವತ್ಸರದ ಆದಿಯಲ್ಲಿದ್ದೇವೆ. ಈ ದಿನ ನಿಮ್ಮ ಪ್ರೀತಿಪಾತ್ರರೊಂದಿಗೆ ಫೇಸ್ಬುಕ್, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯುಗಾದಿಯ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ.
ಯುಗಾದಿಯು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಬ್ರಹ್ಮ ವಿಶ್ವವನ್ನು ಸೃಷ್ಟಿಸಿದ ದಿನ ಇದಾಗಿದೆ. ಈ ದಿನದಂದು, ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ:
ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣಬಡಿಸಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ. ಹಬ್ಬದ ಹಾರ್ದಿಕ ಶುಭಾಶಯಗಳು..
ಈ ಹೊಸ ವರ್ಷ ಎಲ್ಲರಿಗೂ ಮಂಗಳವನ್ನು ಆರೋಗ್ಯ, ನಿರ್ಭಯತೆ, ಸಂತಸವನ್ನು ನೀಡಲಿ. ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ, ಸಿಹಿನೆನಪಿ ಚಿರವಾಗಿಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ.. ಶೋಭಾಕೃತು ನಾಮ ಸಂವತ್ಸರದ ಶುಭಾಶಯಗಳು.
ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
ಈ ಯುಗಾದಿಯಂದು ನಿಮಗೆ ಶಾಂತಿ, ಉಲ್ಲಾಸ ಮತ್ತು ನಗು ತುಂಬಿದ ಜೀವನವನ್ನು ಬಯಸುತ್ತೇನೆ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿಯ ಶುಭಾಶಯಗಳು.
ಇದು ಹೊಸ ಆರಂಭವಾಗಿದ್ದು, ಅತ್ಯಾಕರ್ಷಕ ವರ್ಷ ಮುಂದಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಯುಗಾದಿಯನ್ನು ಬಹಳ ಭರವಸೆ ಮತ್ತು ನಿರೀಕ್ಷೆಯೊಂದಿಗೆ ಸ್ವಾಗತಿಸೋಣ. ಸಂತೋಷ, ಸಂತೃಪ್ತಿ, ಶಾಂತಿ ಮತ್ತು ಸಮೃದ್ಧಿಯ ಪೂರ್ಣ ವರ್ಷವನ್ನು ನಾವು ಎದುರು ನೋಡೋಣ. ಯುಗಾದಿಯ ಶುಭಾಶಯಗಳು.
ಈ ಯುಗಾದಿ ಶಾಂತಿಯುತ, ಸಮೃದ್ಧಿದಾಯಕ, ಸಂತೋಷದಾಯಕ ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಹಾರೈಸೋಣ. ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು.
ಹೊಸ ವರ್ಷದ ಆಗಮನವು ಭರವಸೆಯ ಹೊಸ ಹೊಳಪನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಜಗತ್ತು ಶಾಂತಿ ಮತ್ತು ಸಂತೋಷದಿಂದ ತುಂಬಿರಲಿ. ಯುಗಾದಿಯ ಶುಭಾಶಯಗಳು.
ಈ ಹೊಸ ವರ್ಷವು ನಿಮ್ಮಲ್ಲಿ ಶಕ್ತಿ, ಉತ್ಸಾಹ ಮತ್ತು ಕೃತಜ್ಞತೆಯನ್ನು ತುಂಬುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಯುಗಾದಿಯ ಶುಭಾಶಯಗಳು.