- Home
- Astrology
- Festivals
- ಹುಡುಗಿಯರ ಹೃದಯ ಕದಿಯುವ 4 ರಾಶಿಯ ರೊಮ್ಯಾಂಟಿಕ್ ಹುಡುಗರು; ರಸಿಕತನಕ್ಕೆ ಮತ್ತೊಂದು ಹೆಸರೇ ಇವರು
ಹುಡುಗಿಯರ ಹೃದಯ ಕದಿಯುವ 4 ರಾಶಿಯ ರೊಮ್ಯಾಂಟಿಕ್ ಹುಡುಗರು; ರಸಿಕತನಕ್ಕೆ ಮತ್ತೊಂದು ಹೆಸರೇ ಇವರು
ಜ್ಯೋತಿಷ್ಯದ ಪ್ರಕಾರ, 4 ರಾಶಿಯ ಹುಡುಗರು ಅತ್ಯಂತ ಆಕರ್ಷಕ ಮತ್ತು ರೊಮ್ಯಾಂಟಿಕ್ ಆಗಿರುತ್ತಾರೆ. ಇವರ ಮಾತಿನ ಶೈಲಿ, ವ್ಯಕ್ತಿತ್ವ ಮತ್ತು ಪ್ರಣಯ ಸ್ವಭಾವದಿಂದಾಗಿ ಹುಡುಗಿಯರು ಇವರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ.

Zodiac Traits
ಜ್ಯೋತಿಷಿಗಳ ಪ್ರಕಾರ, 12 ರಾಶಿಗಳಲ್ಲಿ 4 ರಾಶಿಯ ಹುಡುಗರು ನೋಡೋಕೆ ತುಂಬಾನೇ ಆಕರ್ಷಕವಾಗಿ ಇರ್ತಾರಂತೆ. ಅಷ್ಟೇ ಅಲ್ಲ, ಇವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಕೂಡ. ಇದೇ ಕಾರಣಕ್ಕೆ ಹುಡುಗಿಯರು ಇವರ ಕಡೆ ಬೇಗ ಆಕರ್ಷಿತರಾಗ್ತಾರೆ. ಇವರು ಮಾತಾಡೋ ಶೈಲಿ, ರೊಮ್ಯಾಂಟಿಕ್ ನೇಚರ್ ಹುಡುಗಿಯರಿಗೆ ಹುಚ್ಚು ಹಿಡಿಸುತ್ತೆ. ಇದೇ ಕಾರಣಕ್ಕೆ ಇವರಿಗೆ ಒಂದಕ್ಕಿಂತ ಹೆಚ್ಚು ಲವ್ ಅಫೇರ್ ಇರೋ ಸಾಧ್ಯತೆನೂ ಇರುತ್ತೆ.
ಮಿಥುನ ರಾಶಿ
ಈ ರಾಶಿಯ ಹುಡುಗರು ತುಂಬಾ ನಗುಮೊಗದವರು ಮತ್ತು ಎಲ್ಲರ ಜೊತೆ ಬೇಗ ಬೆರೆಯುತ್ತಾರೆ. ಇವರು ಯಾವುದೇ ಪಾರ್ಟಿಗೆ ಹೋದರೂ ಅಲ್ಲೊಂದು ಕಳೆ ಕಟ್ತಾರೆ. ಮಾತಲ್ಲೇ ಯಾರನ್ನ ಬೇಕಿದ್ರೂ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇವರ ಸೆನ್ಸ್ ಆಫ್ ಹ್ಯೂಮರ್ ಕೂಡಾ ಅದ್ಭುತವಾಗಿರುತ್ತೆ. ಇದೇ ಕಾರಣಕ್ಕೆ ಹುಡುಗಿಯರು ಇವರ ಹತ್ತಿರ ಬರಲು ಪ್ರಯತ್ನಿಸುತ್ತಾರೆ. ಇವರಿಗೆ ಮಾತಾಡೋ ಕಲೆ ಅನ್ನೋದು ದೇವರು ಕೊಟ್ಟ ಗಿಫ್ಟ್.
ಸಿಂಹ ರಾಶಿಯ ಹುಡುಗರು ಇಂಪ್ರೆಸ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್
ಈ ರಾಶಿಯ ಹುಡುಗರ ವ್ಯಕ್ತಿತ್ವ ಗಟ್ಟಿಮುಟ್ಟಾಗಿ, ಗತ್ತು ಗಾಂಭೀರ್ಯದಿಂದ ಕೂಡಿರುತ್ತೆ. ಇವರು ಎಲ್ಲಿಗೆ ಹೋದರೂ ತಮ್ಮ ಛಾಪು ಮೂಡಿಸುತ್ತಾರೆ. ಮಾತಲ್ಲೇ ಬೇರೆಯವರನ್ನು ಸುಲಭವಾಗಿ ಇಂಪ್ರೆಸ್ ಮಾಡ್ತಾರೆ, ಆದರೆ ಆ ವಿಷಯ ಬೇರೆಯವರಿಗೆ ಗೊತ್ತೇ ಆಗಲ್ಲ. ಇವರ ಇದೇ ಗುಣ ಹುಡುಗಿಯರನ್ನು ಇವರತ್ತ ಸೆಳೆಯುತ್ತೆ. ಇವರು ಸಮಾಜಮುಖಿ ವ್ಯಕ್ತಿತ್ವದವರಾಗಿದ್ದು, ಸಮಾಜ ಸೇವೆಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಇದು ಇವರ ಪ್ಲಸ್ ಪಾಯಿಂಟ್.
ತುಲಾ ರಾಶಿಯವರು ಜನರ ಮನಸ್ಸು ಗೆಲ್ಲುತ್ತಾರೆ
ಈ ರಾಶಿಯ ಹುಡುಗರು 'ಪ್ರಿನ್ಸ್ ಚಾರ್ಮಿಂಗ್' ಥರ ಇರ್ತಾರೆ. ಇವರಿಗೆ ಗೊತ್ತಿಲ್ಲದ ಹಾಗೆಯೇ ಜನರ ಮನಸ್ಸನ್ನು ಗೆದ್ದುಬಿಡುತ್ತಾರೆ. ಇವರ ಹೊಳೆಯುವ, ದೊಡ್ಡ ಕಣ್ಣುಗಳಲ್ಲಿ ಒಂದು ವಿಶೇಷವಾದ ಆಕರ್ಷಣೆ ಇರುತ್ತೆ. ಈ ಆಕರ್ಷಣೆಯೇ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತೆ. ಇವರ ಪರ್ಸನಾಲಿಟಿ ಕೂಡಾ ಒಬ್ಬ ರಾಜಕುಮಾರನಂತೆಯೇ ಇರುತ್ತೆ. ಜೊತೆಗೆ, ಇವರು ಸಖತ್ ಸ್ಟೈಲಿಶ್ ಕೂಡ. ಹುಡುಗಿಯರು ಇವರ ಇದೇ ಸ್ಟೈಲ್‌ಗೆ ಫಿದಾ ಆಗ್ತಾರೆ.
ಇದನ್ನೂ ಓದಿ: ಇವರಿಗೆ ದಾರಿದ್ರ್ಯ ಆರಂಭ.. ಯುಗಾದಿಯಿಂದ ಈ 3 ರಾಶಿಯವರು ಏನು ಮಾಡಿದರೂ ಸಂಕಷ್ಟ ತಪ್ಪಿದ್ದಲ್ಲ!
ಮಕರ ರಾಶಿಯ ಹುಡುಗರು ನಗುಮೊಗದ ಸ್ವಭಾವದವರು
ಈ ರಾಶಿಯ ಹುಡುಗರು ಸ್ವಲ್ಪ ತಮಾಷೆ ಮಾಡ್ಕೊಂಡು ಇರ್ತಾರೆ. ಜನರನ್ನು ಹೇಗೆ ನಗಿಸಬೇಕು ಅನ್ನೋದು ಇವರಿಗೆ ಚೆನ್ನಾಗಿ ಗೊತ್ತಿರುತ್ತೆ. ಯಾರಾದರೂ ಮುನಿಸಿಕೊಂಡರೆ, ಅವರನ್ನು ಬೇಗ ಸಮಾಧಾನ ಮಾಡುತ್ತಾರೆ. ಪಾರ್ಟಿಗೆ ಹೋದರೆ ಸಾಕು, ಅಲ್ಲೊಂದು ಕಳೆ ತಂದುಬಿಡ್ತಾರೆ. ಇವರ ತಲೆ ಕೂಡಾ ತುಂಬಾ ಶಾರ್ಪ್. ಹುಡುಗಿಯರ ವಿಷಯದಲ್ಲಿ ತುಂಬಾ ಕೇರಿಂಗ್ ಆಗಿರುತ್ತಾರೆ. ಇವರ ಇದೇ ಗುಣ ಹುಡುಗಿಯರ ಪಾಲಿಗೆ ಇವರನ್ನು ಹೀರೋ ಮಾಡಿಬಿಡುತ್ತೆ.
ಇದನ್ನೂ ಓದಿ: 7 ದಿನದ ನಂತರ ಸೂರ್ಯನ ತ್ರಿಗ್ರಾಹಿ ಯೋಗ ಈ 3 ರಾಶಿ ಮೇಲೆ ಹಣದ ಮಳೆ, ಶ್ರೀಮಂತರಾಗುವ ಸುವರ್ಣಾವಕಾಶ
ಹಕ್ಕುತ್ಯಾಗ (Disclaimer)
ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ಈ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದಷ್ಟೇ ನಮ್ಮ ಉದ್ದೇಶ. ಓದುಗರು ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.

