- Home
- Astrology
- Festivals
- Garuda Purana: ಗರುಡ ಪುರಾಣ ಹೇಳುತ್ತೆ… ಮಹಿಳೆಯರು ಈ ತಪ್ಪು ಮಾಡಿದ್ರೆ ಜೀವನ ನರಕವಾಗುತ್ತೆ
Garuda Purana: ಗರುಡ ಪುರಾಣ ಹೇಳುತ್ತೆ… ಮಹಿಳೆಯರು ಈ ತಪ್ಪು ಮಾಡಿದ್ರೆ ಜೀವನ ನರಕವಾಗುತ್ತೆ
ಗರುಡ ಪುರಾಣವು ಪುರುಷರು ಮತ್ತು ಮಹಿಳೆಯರಿಗೆ ಅನೇಕ ನಿಯಮಗಳನ್ನು ಉಲ್ಲೇಖಿಸುತ್ತದೆ, ಅವುಗಳನ್ನು ಪಾಲಿಸಿದರೆ ಜೀವನದಲ್ಲಿ ಸಂತೋಷ ಸದಾ ಇರುತ್ತೆ. ಆದರೆ ಕೆಲವು ವಿಷಯಗಳನ್ನು ಮಹಿಳೆಯರು ಮಾಡಬಾರದು ಎನ್ನಲಾಗುತ್ತೆ, ಅವುಗಳ ಬಗ್ಗೆ ತಿಳಿಯೋಣ.

ಗರುಡ ಪುರಾಣಕ್ಕೆ ಹಿಂದೂ ಧರ್ಮದಲ್ಲಿ (Hindu Dharma) ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವ್ಯಕ್ತಿಯ ಮರಣದ ನಂತರ ಪಠಿಸಲಾಗುತ್ತದೆ. ಗರುಡ ಪುರಾಣದಲ್ಲಿ ಮಹಿಳೆಯರು ಮಾಡುವ ಕೆಲವು ಕೆಲಸಗಳು ಅವರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದನ್ನು ತಿಳಿಸಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಯಾವ 4 ಕೆಲಸಗಳನ್ನು ಮಾಡಬಾರದು ಎಂದು ನಮಗೆ ತಿಳಿಸೋಣ.
ಕಾರಣವಿಲ್ಲದೆ ಗಂಡನಿಂದ ದೂರವಾಗುವುದು
ಗರುಡ ಪುರಾಣದ (Garuda Purana) ಪ್ರಕಾರ, ಯಾವುದೇ ಕಾರಣವಿಲ್ಲದೆ ದೀರ್ಘಕಾಲ ಜೊತೆಗಿದ್ದ ಗಂಡನಿಂದ ದೂರವಿದ್ದ ಮಹಿಳೆಗೆ ಕುಟುಂಬ ಮತ್ತು ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಇದರಿಂದಾಗಿ ನಿಮ್ಮ ಸಂಗಾತಿಯೂ ಮಾನಸಿಕವಾಗಿ ದುರ್ಬಲರಾಗಬಹುದು. ಆದ್ದರಿಂದ, ಮಹಿಳೆಯರು ಯಾವುದೇ ಕಾರಣವಿಲ್ಲದೆ ತಮ್ಮ ಗಂಡನಿಂದ ದೂರವಾಗಬಾರದು.
ಕೆಟ್ಟ ಸ್ವಭಾವದ ಜನರ ಸಹವಾಸ
ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ಮಹಿಳೆಯಾಗಿರಲಿ ಅಥವಾ ಪುರುಷನಾಗಿರಲಿ, ಯಾವಾಗಲೂ ತನ್ನ ಸ್ವಭಾವವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಕೆಟ್ಟ ಸ್ವಭಾವದ (bad habits) ಜನರಿಂದಲೂ ದೂರವಿರಬೇಕು. ವಿಶೇಷವಾಗಿ ಮಹಿಳೆಯರು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರುಡ ಪುರಾಣದ ಪ್ರಕಾರ, ಮಹಿಳೆಯರು ಕೆಟ್ಟ ಸ್ವಭಾವದ ಜನರಿಂದ ದೂರವಿರಬೇಕು ಏಕೆಂದರೆ ಅಂತಹ ಜನರ ಸಹವಾಸವು ನಿಮ್ಮ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಮಹಿಳೆಯರು ಬೇರೆಯವರ ಮನೆಯಲ್ಲಿ ಉಳಿಯಬಾರದು
ಗರುಡ ಪುರಾಣದ ಪ್ರಕಾರ, ಮಹಿಳೆಯರು ಯಾವುದೇ ಸಂದರ್ಭದಲ್ಲೂ ಬೇರೆಯವರ ಮನೆಗೆ ಹೋಗಿ ಅಲ್ಲಿ ಉಳಿಯಬಾರದು. ಯಾವುದೇ ಸಮಸ್ಯೆ ಇದ್ದರೂ, ನಿಮ್ಮ ಸ್ವಂತ ಮನೆಯಲ್ಲಿಯೇ ಇರುವ ಮೂಲಕ ಅದನ್ನು ಪರಿಹರಿಸಿಕೊಳ್ಳುವುದು ಉತ್ತಮ ಏಕೆಂದರೆ ಹಾಗೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಕಡಿಮೆಯಾಗುವ ಬದಲು ಹೆಚ್ಚಾಗಬಹುದು.
ಯಾರನ್ನೂ ಅವಮಾನಿಸಬೇಡಿ
ಗರುಡ ಪುರಾಣದ ಪ್ರಕಾರ, ಮಹಿಳೆಯರು ತಮ್ಮ ಕುಟುಂಬ ಸದಸ್ಯರನ್ನು ಎಂದಿಗೂ ಅವಮಾನಿಸಬಾರದು. ನೀವು ನಿಮ್ಮ ಕುಟುಂಬವನ್ನು ಅವಮಾನಿಸಿದರೆ, ನಿಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ನಿಮಗೆ ಕುಟುಂಬದ ಸದಸ್ಯರೊಂದಿಗೆ ಯಾವುದೇ ಸಮಸ್ಯೆ ಇದ್ದರೆ, ಅವರನ್ನು ಅವಮಾನಿಸುವ ಬದಲು ಅವರ ಜೊತೆ ಕುಳೀತು ಮಾತನಾಡಿ.