ಆರ್ಟ್ ಆಫ್ ಲಿವಿಂಗ್‌ನಲ್ಲಿ ನವರಾತ್ರಿ ಸಂಭ್ರಮ: ವೈದಿಕ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿದೇಶಿ ಜೋಡಿಗಳು
ಬೆಂಗಳೂರು(ಅ.24): ನಗರದಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೈದಿಕ ಯಜ್ಞಗಳೊಂದಿಗೆ ಇಂದು(ಮಂಗಳವಾರ) ನವರಾತ್ರಿ ಸಂಭ್ರಮ ಮನೆಮಾಡಿತ್ತು. ದಸರಾ ಹುಬ್ಬದ ಶುಭ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಮ್ಮುಖದಲ್ಲಿ ಜಪಾನ್, ಮಂಗೋಲಿಯಾ ಹಾಗೂ ಅಮೆರಿಕದ ಯುವಕ, ಯುವತಿಯರು ವೈದಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ಜೋಡಿಗಳಿಗೆ ರವಿಶಂಕರ್ ಗುರೂಜಿ ಅವರು ಆಶೀರ್ವದಿಸಿದ್ದಾರೆ.
ಮಾತೆ ದೈವವನ್ನು ಗೌರವಿಸುವ ಸಮಾರಂಭದಲ್ಲಿ ಚಂಡಿ ಹೋಮವನ್ನ ವಿಶ್ವದ 30 ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಜಗತ್ತಿನೆಲ್ಲೆಡೆ ಈ ಕಾರ್ಯಕ್ರಮವನ್ನ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಪಾನ್, ಮಂಗೋಲಿಯಾ ಮತ್ತು ಅಮೆರಿಕದಿಂದ ಆಗಮಿಸಿದ್ದ ಯುವಕ, ಯುವತಿಯರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಮ್ಮುಖದಲ್ಲಿ ವೈದಿಕ ವಿವಾಹವಾಗಿದ್ದಾರೆ. ನವದಂಪತಿಗಳಿಗೆ ರವಿಶಂಕರ್ ಗುರೂಜಿ ಅವರು ಆಶೀರ್ವಾದ ಮಾಡಿದ್ದಾರೆ.
ಭಾರತದಲ್ಲಿ ಶ್ರೀಮಂತ ವಿವಾಹಗಳ ಯುಗದಲ್ಲಿ, ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ವೈದಿಕ ವಿವಾಹಗಳನ್ನು ಜನಪ್ರಿಯಗೊಳಿಸಿದ್ದಾರೆ. ವೈದಿಕ ವಿವಾಹ ಮದುವೆಯ ಪ್ರತಿಜ್ಞೆ ಮತ್ತು ಬದ್ಧತೆಯ ಮೇಲೆ ಮತ್ತೆ ಹಳೆ ಸಂಪ್ರದಾಯವನ್ನ ತರುತ್ತದೆ.
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕಳೆದ 9 ದಿನಗಳಿಂದ ಕಾರ್ಯಕ್ರಮಗಳು ಪ್ರಾಚೀನ ವೇದ ಮಂತ್ರಗಳು, ಪವಿತ್ರ ಹೋಮ ಸಮಾರಂಭಗಳು, ಭಕ್ತಿ ಸಂಗೀತ, ನೃತ್ಯಗಳ ಶಬ್ದಗಳಿಂದ ಪ್ರತಿಧ್ವನಿಸಿತು.
ಜಪಾನ್, ಮಂಗೋಲಿಯಾ ಮತ್ತು ಅಮೆರಿಕದಿಂದ ಆಗಮಿಸಿದ್ದ ಯುವಕ, ಯುವತಿಯರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ವಿಜಯದಶಮಿ ಹೀಗಾಗಿ ಈ ಶುಭದಿನದಂದು ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸುಮಾರು 1.2 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದವನ್ನ ಏರ್ಪಡಿಸಲಾಗಿತ್ತು. ಮಹಾ ಪ್ರಸಾದವು 17 ಕ್ಕೂ ಹೆಚ್ಚು ರುಚಿಕರವಾದ ಸಸ್ಯಾಹಾರಿ ಭಕ್ಷ್ಯಗಳನ್ನು ಒಳಗೊಂಡಿತ್ತು.