ಹರಿದ, ಕೊಳಕು ಬಟ್ಟೆ ಹಾಕಿದಂಗೆ ಕನಸು ಬಿತ್ತಾ? ಹಾಗಿದ್ರೆ ಅರ್ಥ ತಿಳಿದ್ಕೊಳ್ಳಿ
ರಾತ್ರಿ ಚಿತ್ರ ವಿಚಿತ್ರ ಕನಸುಗಳು ಬೀಳ್ತಿರುತ್ವೆ. ಕೆಲವೊಂದು ಕನಸು ನಮ್ಮನ್ನು ಕಾಡುತ್ತೆ. ಈ ಕನಸು ಶುಭವೋ, ಅಶುಭವೋ ಅಂತ ಜನರು ತಲೆ ಕೆಡಿಸಿಕೊಳ್ತಾರೆ. ಇದ್ರಲ್ಲಿ ಕೊಳಕು ಬಟ್ಟೆ ಕನಸು ಕೂಡ ಸೇರಿದೆ. ಕೊಳಕು ಬಟ್ಟೆ ಅಥವಾ ಹರಿದ ಬಟ್ಟೆ ಧರಿಸಿದಂತೆ ಕನಸು ಬಿದ್ರೆ ಅದರ ಅರ್ಥ ಏನು?

ಸ್ವಪ್ನ ಶಾಸ್ತ್ರ
ಸ್ವಪ್ನ ಶಾಸ್ತ್ರದ ಪ್ರಕಾರ ಪ್ರತಿಯೊಂದು ಕನಸಿಗೂ ತನ್ನದೇ ಆದ ಮಹತ್ವವಿದೆ. ಪ್ರತಿ ಕನಸೂ ನಮ್ಮ ಜೀವನದಲ್ಲಿ ನಡೆಯಬಹುದಾದ ಕೆಲ ಘಟನೆಗಳ ಮುನ್ಸೂಚನೆಯಾಗಿರುತ್ತದೆ.ಕೆಲ ಕನಸು ಬಿದ್ದಾಗ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನೂರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ನಷ್ಟ ಕಟ್ಟಿಟ್ಟಬುತ್ತಿ. ಹರಿದ ಅಥವಾ ಕೊಳಕು ಬಟ್ಟೆಯನ್ನು ಧರಿಸಿದಂತೆ ಬಿದ್ದ ಕನಸು ಕೂಡ ನಮ್ಮ ಜೀವನದ ಜೊತೆ ನಂಟು ಹೊಂದಿದೆ.
ಕೊಳಕು ಬಟ್ಟೆ ಕನಸು
ನೀವು ಕೊಳಕು ಬಟ್ಟೆ ಧರಿಸಿದಂತೆ ಕನಸು ಕಂಡ್ರೆ ಅದು ಜಾಗರೂಕರಾಗಿ ಎಂಬುದರ ಸಂಕೇತ. ನಿಮ್ಮ ಇಮೇಜ್ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಇದು ಸೂಚಿಸುತ್ತದೆ. ಹತ್ತಿರವಿರುವ ಯಾರಾದರೂ ನಿಮ್ಮನ್ನು ನಿರಾಶೆಗೊಳಿಸಬಹುದು. ಹಿಂದಿನ ತಪ್ಪಿನ ಬಗ್ಗೆ ವಿಷಾದಿಸುವುದು ಸಹ ತೊಂದರೆ ಉಂಟುಮಾಡಬಹುದು. ಅಂತಹ ಸಮಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಹರಿದ ಬಟ್ಟೆ
ಇನ್ನು ನಿಮ್ಮ ಕನಸಿನಲ್ಲಿ ನೀವು ಹರಿದ ಬಟ್ಟೆ ಹಾಕಿಕೊಂಡಂತೆ ಕನಸು ಬಿದ್ದರೆ ಅದನ್ನು ಕೂಡ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹರಿದ ಹಾಗೂ ಕೊಳಕಾದ ಬಟ್ಟೆಯನ್ನು ಧರಿಸಿದಂತೆ ಕನಸು ಬಿದ್ದರೆ ಅದು ನಿಮ್ಮ ಖರ್ಚುನ್ನು ಹೆಚ್ಚು ಮಾಡುತ್ತದೆ ಎಂಬ ಸಂಕೇತ. ಹಾಗೆಯೇ ಹಣಕಾಸಿನ ವಿಷಯಗಳ ಬಗ್ಗೆ ಜಾಗರೂಕರಾಗಿರಿ ಎಂಬುದನ್ನು ಸೂಚಿಸುತ್ತದೆ. ಪ್ರಮುಖ ಕೆಲಸ ಸ್ಥಗಿತಗೊಳ್ಳಬಹುದು ಎಂಬುದನ್ನು ಇದು ಸಂಕೇತಿಸುತ್ತದೆ. ಒಂದು ಯೋಜನೆ ನಿರೀಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು. ಆದ್ದರಿಂದ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

