ಧನ ತ್ರಯೋದಶಿ… ನಾಳೆ ಬೆಳಗ್ಗೆ ಎದ್ದ ತಕ್ಷಣ ಇದನ್ನ ನೋಡಿದ್ರೆ ಅದೃಷ್ಟದ ಬಾಗಿಲು ತೆರೆದಂತೆ
ಐದು ದಿನಗಳ ದೀಪಾವಳಿ ಹಬ್ಬವು ಧನ ತ್ರಯೋದಶಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಈ ವರ್ಷ ಧನ ತ್ರಯೋದಶಿ ಅಕ್ಟೋಬರ್ 18, 2025 ರ ಶನಿವಾರದಂದು ಆಚರಿಸಲಾಗುತ್ತದೆ. ಈ ದಿನ ಬೆಳಗ್ಗೆ ಎದ್ದ ತಕ್ಷಣ ನೀವು ಇದನ್ನ ನೋಡಿದ್ರೆ ಅದೃಷ್ಟದ ಬಾಗಿಲು ತೆರೆದಂತೆ.

ಧನ ತ್ರಯೋದಶಿ
ಧನ ತ್ರಯೋದಶಿ ಹಬ್ಬವು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಈ ದಿನದಂದು, ಧನ್ವಂತರಿ ಮತ್ತು ಕುಬೇರನನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ. ಧನ ತ್ರಯೋದಶಿ ದಿನದಂದು ಚಿನ್ನ, ಬೆಳ್ಳಿ, ಪಾತ್ರೆಗಳು ಅಥವಾ ಹೊಸ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಅದೃಷ್ಟದ ಬಾಗಿಲು ತೆರೆಯುತ್ತೆ
ಧಾರ್ಮಿಕ ನಂಬಿಕೆಗಳ ಪ್ರಕಾರ,ಧನ ತ್ರಯೋದಶಿ ದಿನ ಹೊಸ ವಸ್ತುಗಳನ್ನು ಖರೀದಿ ಮಾಡೋದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ.. ಅಷ್ಟೇ ಅಲ್ಲ ನಿಮ್ಮ ಅದೃಷ್ಟ, ಸಮೃದ್ಧಿಯ ಬಾಗಿಲು ಕೂಡ ತೆರೆಯುತ್ತದೆ. ಇದಲ್ಲದೆ, ಧನ ತ್ರಯೋದಶಿ ದಿನದಂದು ಬೆಳಗ್ಗೆ ಎದ್ದ ತಕ್ಷಣ ನೀವು ಈ ನಿರ್ದಿಷ್ಟ ವಸ್ತುವನ್ನು ನೋಡುವುದು ಸಹ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ವರ್ಷ, ಧನ ತ್ರಯೋದಶಿಯನ್ನು ಅಕ್ಟೋಬರ್ 18, 2025 ರ ಶನಿವಾರದಂದು ಆಚರಿಸಲಾಗುತ್ತದೆ.
ಧನ ತ್ರಯೋದಶಿ ಮಹತ್ವ
ಸನಾತನ ಧರ್ಮದಲ್ಲಿ ಧನ ತ್ರಯೋದಶಿ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಈ ದಿನ, ಧನ್ವಂತರಿ ಮತ್ತು ಸಂಪತ್ತಿನ ದೇವರು ಕುಬೇರನನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ. ಧಂತೇರಸ್‌ನಲ್ಲಿ ಪೂಜೆ ಮಾಡುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ಎಂದಿಗೂ ಉದ್ಭವಿಸುವುದಿಲ್ಲಎನ್ನುವ ನಂಬಿಕೆ ಇದೆ.
ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸುತ್ತಾಳೆ
ಈ ದಿನ ಮನೆಯ ಪ್ರತಿಯೊಂದು ಮೂಲೆಯನ್ನೂ ಸ್ವಚ್ಛಗೊಳಿಸಬೇಕು, ಏಕೆಂದರೆ ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸುತ್ತಾಳೆ ಹಾಗಾಗಿ ಮನೆ ಪೂರ್ತಿಯಾಗಿ ಶುಚಿಯಾಗಿರಬೇಕು ಎನ್ನುವ ನಂಬಿಕೆ ಇದೆ. ಮನೆ ಸ್ವಚ್ಛವಾಗಿದ್ದರೆ, ಲಕ್ಷ್ಮಿ ದೇವಿಯು ಸಂತೋಷದಿಂದ ಪ್ರವೇಶಿಸಿ ಆಶೀರ್ವದಿಸುತ್ತಾಳೆ ಎಂದು ಹೇಳಲಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಇದನ್ನ ನೋಡುವುದು ಅದೃಷ್ಟ
ಧನ ತ್ರಯೋದಶಿ ದಿನ ಎಚ್ಚರವಾದಾಗ ನಿಮ್ಮ ಮನೆಯ ಯಾವುದೇ ಮೂಲೆಯಲ್ಲಿ ಹಲ್ಲಿಯನ್ನು ನೋಡಿದರೆ, ಅದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧಂತೇರಸ್‌ನಲ್ಲಿ ಹಲ್ಲಿಯನ್ನು ನೋಡುವುದು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಂಪತ್ತು ಬರುತ್ತದೆ ಎಂಬುದರ ಸಂಕೇತವಾಗಿದೆ.
ಹಲ್ಲಿ ಲಕ್ಷ್ಮೀ ದೇವಿಯ ಸಂಕೇತ
ಸನಾತನ ಧರ್ಮದಲ್ಲಿ, ಹಲ್ಲಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಧನ ತ್ರಯೋದಶಿ ದಿನವನ್ನು ಧನ್ವಂತರಿ, ಕುಬೇರ ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಈ ದಿನ ನೀವು ಎದ್ದ ತಕ್ಷಣ ಹಲ್ಲಿಯನ್ನು ನೋಡಲು ಪ್ರಯತ್ನಿಸಿ. ಹಲ್ಲಿಯನ್ನು ನೀವು ಯಾವುದೇ ಕೋಣೆಯಲ್ಲೂ, ಮಹಡಿಯಲ್ಲೂ ಎಲ್ಲಿ ಬೇಕಾದರೂ ನೋಡುವುದು ತುಂಬಾನೆ ಮುಖ್ಯ.