Dhanteras 2025 : ಧನ್ತೇರಸ್ ಹತ್ತಿರ ಬರ್ತಿದೆ. ಇದೇ ಶನಿವಾರ ಹಬ್ಬ ಆಚರಣೆ ಮಾಡಲಾಗುವುದು. ಲಕ್ಷ್ಮಿ ಕೃಪೆ ನಿಮಗೆ ಬೇಕು, ಆರ್ಥಿಕ ಸಮಸ್ಯೆ ಬಗೆ ಹರಿಯಬೇಕು ಅಂದ್ರೆ ಬೆಸ್ಟ್ ಐಡಿಯಾ ಇಲ್ಲಿದೆ. 

ಈ ವರ್ಷ ಅಕ್ಟೋಬರ್ 18, ಶನಿವಾರ ಧನ್ತೇರಸ್ (Dhanteras )ಹಬ್ಬ ಆಚರಿಸಲಾಗ್ತಿದೆ. ಧನ್ತೇರಸನ್ನು ಧನತ್ರಯೋದಶಿ ಅಂತ ಕರೆಯಲಾಗುತ್ತದೆ. ಧನ್ತೇರಸ್ ದಿನ ದೇವಿ ಲಕ್ಷ್ಮಿ (Goddess Lakshmi) ಹಾಗೂ ಕುಬೇರ (Kubera)ನ ಪೂಜೆಗೆ ಆದ್ಯತೆ ನೀಡಲಾಗುತ್ತದೆ. ಪೂಜೆ ಜೊತೆ ಧನ್ತೇರಸ್ ದಿನ ಸಂಜೆ ದೀಪ ಬೆಳಗುವ ಪದ್ಧತಿ ಇದೆ. ತಾಯಿ ಲಕ್ಷ್ಮಿಗೆ ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪವನ್ನು ಬೆಳಗಲಾಗುತ್ತದೆ. ಬರೀ ದೀಪ ಬೆಳಗಿದ್ರೆ ಸಾಲದು. ಧನತ್ರಯೋದಶಿ ದಿನ ಸಂಜೆ ನೀವು ಇನ್ನೂ ಕೆಲ ಕೆಲ್ಸಗಳನ್ನು ತಪ್ಪದೇ ಮಾಡ್ಬೇಕು. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಆರ್ಥಿಕ ಸಮಸ್ಯೆ ನಿಮ್ಮಿಂದ ದೂರವಾಗಲಿದೆ. ಇಡೀ ವರ್ಷ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ.

ಲಕ್ಷ್ಮಿ ಆಶೀರ್ವಾದ ಪಡೆಯಲು ಧನ್ತೇರಸ್ ಸಂಜೆ ಏನು ಮಾಡ್ಬೇಕು? :

• 13 ದೀಪ ಬೆಳಗಿ : ಧನ್ತೇರಸ್ ದಿನ ಸಂಜೆ ನೀವು 13 ದೀಪಗಳನ್ನು ಬೆಳಗಬೇಕು. ನೀವು ಲಕ್ಷ್ಮಿ ಹಾಗೂ ಕುಬೇರನ ಮುಂದೆ ದೀಪವನ್ನು ಹಚ್ಚಬೇಕು. ಇದ್ರಿಂದ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ. ಕುಬೇರನ ಕೃಪೆ ನಿಮಗೆ ಲಭಿಸುತ್ತದೆ. ಮನೆಗೆ ಸಂಪತ್ತು, ಸಮೃದ್ಧಿ ಬರುವ ಜೊತೆಗೆ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ.

ಯಾರಿಗೆ ಏನೂ ಮಾಡದಿದ್ರೂ, ಈ ಜನ್ಮದಲ್ಲಿ ಕಷ್ಟ ಅನುಭವಿಸುವಂತೆ ಮಾಡೋ ಪ್ರಾರಬ್ಧ ಕರ್ಮದಿಂದ ಬಚಾವ್‌ ಆಗೋದು ಹೇಗೆ?

• ತ್ರಿಜೋರಿ ಪೂಜೆ : ನೀವು ದೀಪ ಬೆಳಗಿದ ನಂತ್ರ ಕುಬೇರ ದೇವ ಹಾಗೂ ನಿಮ್ಮ ಮನೆಯ ತ್ರಿಜೋರಿಗೆ ಪೂಜೆ ಮಾಡಲು ಮರೆಯಬೇಡಿ. ವಿಧಿ – ವಿಧಾನಗಳಿಂದ ನಿಮ್ಮ ಮನೆಯ ತ್ರಿಜೋರಿಯನ್ನು ಪೂಜೆ ಮಾಡಿ. ಧೂಪ – ದೀಪವನ್ನು ಹಚ್ಚಿ,ಹಣ್ಣು, ಸಿಹಿ ತಿಂಡಿಯನ್ನು ನೈವೇದ್ಯವಾಗಿ ನೀಡಿ ಪೂಜೆ ಮಾಡಬೇಕು. ನೀವು ಕುಬೇರನ ಮಂತ್ರವನ್ನು ಕೂಡ ಜಪಿಸಬಹುದು.

• ಮನೆಯ ಮೂಲೆಗೆ ಶಂಖದ ನೀರು : ದಕ್ಷಿಣವರ್ತಿ ಶಂಖವನ್ನು ತೆಗೆದುಕೊಂಡು, ಅದನ್ನು ಶುದ್ಧಗೊಳಿಸಿ, ಅದಕ್ಕೆ ಶುದ್ಧ ನೀರನ್ನು ಹಾಕಬೇಕು. ನಂತ್ರ ಆ ನೀರನ್ನು ನೀವು ನಿಮ್ಮ ಮನೆಯ ಸುತ್ತಲೂ ಸಿಂಪಡಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಜೊತೆಗೆ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸುತ್ತದೆ.

• ಮುಖ್ಯ ದ್ವಾರದಲ್ಲಿ ಈ ಚಿಹ್ನೆ ಬಿಡಿಸಿ : ಧನ್ತೇರಸ್ ದಿನ ನೀವು ಮನೆಯ ಮುಖ್ಯ ದ್ವಾರವನ್ನು ಅಲಂಕರಿಸಬೇಕು. ಲಕ್ಷ್ಮಿ ಇದೇ ಬಾಗಿಲಿನಿಂದ ನಿಮ್ಮ ಮನೆ ಪ್ರವೇಶ ಮಾಡುವ ಕಾರಣ ಮುಖ್ಯ ದ್ವಾರ ಸ್ವಚ್ಛವಾಗಿರಬೇಕು. ಮನೆಯ ಮುಖ್ಯದ್ವಾರವನ್ನು ಮೊದಲು ಸ್ವಚ್ಛಗೊಳಿಸಿ. ಯಾವುದೇ ಕೊಳಕಿಲ್ಲದಂತೆ ನೋಡಿಕೊಳ್ಳಿ. ನಂತ್ರ ಅರಿಶಿನ ಮತ್ತು ಅಕ್ಕಿಯ ಪೇಸ್ಟ್ ತಯಾರಿಸಿ, ಇದ್ರಿಂದ ಓಂ ಚಿಹ್ನೆಯನ್ನು ಬಿಡಿಸಿ. ತಾಯಿ ಲಕ್ಷ್ಮಿ ಖುಷಿಯಿಂದ ನಿಮ್ಮ ಮನೆಯನ್ನು ಪ್ರವೇಶ ಮಾಡ್ತಾಳೆ.

ಅಕ್ಟೋಬರ್ 18ಕ್ಕೆ ಡಬಲ್ ರಾಜಯೋಗ, 5 ರಾಶಿಗೆ ಶ್ರೀಮಂತಿಕೆ, ಸಂಪತ್ತು ಮತ್ತು ಆಸ್ತಿ

• ತ್ರಿಜೋರಿಯಲ್ಲಿ ಈ ವಸ್ತುವನ್ನು ಇಡಿ : ನೀವು ಧನ್ತೇರಸ್ ದಿನ ಹಣ, ಬಂಗಾರದ ಆಭರಣಗಳನ್ನು ಇಡುವ ನಿಮ್ಮ ಮನೆಯ ತ್ರಿಜೋರಿ ಬಾಗಿಲಿನ ಮೇಲೆ ಲಕ್ಷ್ಮಿ ದೇವಿಯ ಚಿತ್ರ ಹಾಕಬೇಕು. ನೀವು ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ದೇವಿಯ ಚಿತ್ರವನ್ನು ಹಾಕಿ. ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಕೈನಿಂದ ಚಿನ್ನದ ನಾಣ್ಯಗಳು ಕೆಳಗೆ ಬಿಳ್ತಿರುವ ಫೋಟೋ, ಸಮೃದ್ಧಿ ಮತ್ತು ಶಾಶ್ವತ ಸಂತೋಷವನ್ನು ತರುತ್ತದೆ. ಲಕ್ಷ್ಮಿ ಕುಳಿತಿರಬೇಕು, ಅಕ್ಕಪಕ್ಕ ಆನೆಗಳು ನಿಂತಿದ್ದು, ಸೊಂಡಿಲನ್ನು ಎತ್ತಿ ಆಶೀರ್ವಾದ ಮಾಡ್ತಿರುವಂತಿರಬೇಕು. ಈ ಫೋಟೋ ನಿಮ್ಮ ಮನೆ ತ್ರಿಜೋರಿ ಮೇಲಿದ್ರೆ ನಿಮಗೆ ಯಾವುದೇ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.