ಮಕರ; ಮೇಲೆ ನೋಡಿ ಮುನಿಸಿಕೊಳ್ಳಬೇಡಿ, ಒಳಹೊಕ್ಕರೆ ಬೇರೆಯೇ ಇವರು
ಎಲ್ಲ ರಾಶಿಗಳಲ್ಲೇ ಹೆಚ್ಚು ತಪ್ಪಾಗಿ ಅರ್ಥೈಸಲ್ಪಡುವ ರಾಶಿಯವರೆಂದರೆ ಮಕರ ರಾಶಿಯವರು. ಸಾಮಾನ್ಯವಾಗಿ ಅವರನ್ನು ಬೋರಿಂಗ್, ಹೃದಯಹೀನರು, ದುರಾಸೆಯವರು, ಕ್ಷಮೆಗೆ ಅನರ್ಹರು ಎಂಬಂತೆ ನೋಡಲಾಗುತ್ತದೆ. ಅವರು ಡಿಸೆಂಬರ್ 23ರಿಂದ ಜನವರಿ 20ರವರೆಗೆ ಜನಿಸಿದವರು, ಶನಿಗ್ರಹ ಅವರನ್ನು ಆಳುವುದರಿಂದ ಅವರು ಸ್ವಲ್ಪ ಒರಟು, ಜನರೊಂದಿಗೆ ಬೆರೆಯದವರು, ಸರ್ವಾಧಿಕಾರಿಗಳಂತೆ ವರ್ತಿಸುವುದು ಹೌದು. ಆದರೆ, ಹೊರಗಿಂದ ಅವರೆಷ್ಟೇ ಒರಟೆನಿಸಲಿ, ಭಾವನಾರಹಿತರೆನಿಸಲಿ, ತಾಳ್ಮೆ ಹಾಗೂ ಪ್ರಯತ್ನದಿಂದ ಅವರನ್ನು ತಡಕಾಡಿದರೆ, ಅಲ್ಲಿ ಬೇರೆಯದೇ ಚೆಂದದ ವ್ಯಕ್ತಿತ್ವವೊಂದು ಸಿಗುತ್ತದೆ.

ಭಾವನೆಗಳನ್ನು ವ್ಯಕ್ತಪಡಿಸುವುದು ಮಕರ ರಾಶಿಯವರ ಗುಣವಲ್ಲ, ಹಾಗಾಗಿ ಗಂಭೀರವಾಗಿ ಕಾಣುತ್ತಾರೆ. ಈ ಗುಣದಿಂದಾಗಿ ಅವರಿಗೆ ಹೆಚ್ಚು ಗೆಳೆಯರಿರುವುದಿಲ್ಲ. ಆದರೆ, ಒಬ್ಬಿಬ್ಬರನ್ನು ಗೆಳೆಯರಾಗಿ ಮಾಡಿಕೊಂಡರೆಂದರೆ ಅವರನ್ನು ಅತಿಯಾಗಿ ಹಚ್ಚಿಕೊಳ್ಳುತ್ತಾರೆ. ಅವರು ಪ್ರೀತಿಯನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದಕ್ಕಿಂತ ಹೆಚ್ಚಾಗಿ ಕಾರ್ಯದ ಮೂಲಕ ತೋರಿಸುತ್ತಾರೆ.

ಯಾವುದೇ ಹೊಸ ಸ್ಥಳಕ್ಕೆ ಸುಲಭವಾಗಿ ಹೊಂದಿಕೊಳ್ಳಬಲ್ಲರು. ಯಾವುದೋ ಪವಾಡವಾಗಲಿ ಎಂದು ಕಾಯುವ ಬದಲು, ತಮ್ಮ ಬದುಕನ್ನು ತಾವೇ ಪ್ರಯತ್ನದಿಂದ ರೂಪಿಸಿಕೊಳ್ಳುತ್ತಾರೆ.

ಎಲ್ಲ ವಲಯಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ. ನಂಬಿಕಸ್ಥರು ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಹಾಗೂ ಅಂಥವರನ್ನೇ ಅವರು ಇಷ್ಟಪಡುತ್ತಾರೆ.

ಇವರು ಮಹತ್ವಾಕಾಂಕ್ಷಿಗಳಲ್ಲದೆ, ಕರಿಯರ್ ಓರಿಯೆಂಟೆಡ್. ಅವರು ವೃತ್ತಿಯಲ್ಲಿ ತಮಗೆ ತಾವೇ ಗುರಿಗಳನ್ನು ಕೊಟ್ಟುಕೊಂಡು ಸಾಧಿಸುತ್ತಾ ಮುನ್ನುಗ್ಗುತ್ತಾರೆ. ವರ್ಕೋಹಾಲಿಕ್ ವ್ಯಕ್ತಿತ್ವವಾದ್ದರಿಂದ ಉತ್ತಮ ಬದ್ಧತೆ, ಸಮಯಪ್ರಜ್ಞೆ, ಗಟ್ಟಿ ನಿರ್ಣಯ ಕೈಗೊಳ್ಳುವ ಗುಣ ಇವರದು. ಬಿಸ್ನೆಸ್, ಕ್ರೀಡೆ ಹಾಗೂ ಶೈಕ್ಷಣಿಕ ವಲಯದಲ್ಲಿ ಉತ್ತಮ ಯಶಸ್ಸು ಪಡೆಯಬಲ್ಲರು.

ಪ್ರಬುದ್ಧತೆ ಹಾಗೂ ಅತ್ಯಾಧುನಿಕತೆ ಇವರ ಗುಣ. ಯಾವುದೇ ವಿಷಯದ ಬಗ್ಗೆ ಮಾತನಾಡುವ ಮುಂಚೆ ಉತ್ತಮ ಸಂಶೋಧನೆ ಮಾಡುತ್ತಾರೆ. ತೀರ್ಪನ್ನು ನೀಡುವ ಮುಂಚೆ ಎರಡೂ ವಾದಗಳನ್ನು ಕೇಳುತ್ತಾರೆ. ತಮ್ಮ ತಪ್ಪಿನ ಹೊಣೆಯನ್ನು ತಾವೇ ತೆಗೆದುಕೊಳ್ಳುವ ಗುಣ ಇವರದು.

ಮಕರ ರಾಶಿಯ ಮಹಿಳೆಯರು ಮಾನಸಿಕವಾಗಿ ಬಹಳ ಸಬಲರಾಗಿದ್ದು, ಸ್ವತಂತ್ರ ಪ್ರವೃತ್ತಿ ಹೊಂದಿರುತ್ತಾರೆ. ಇನ್ನೊಬ್ಬರ ಶ್ಲಾಘನೆಗೆ ಎದುರು ನೋಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಾರೆ.

ಕಲೆ ಹಾಗೂ ಸೃಜನಶೀಲತೆಯನ್ನು ಅಷ್ಟಾಗಿ ಇಷ್ಟ ಪಡುವವವರು ಇವರಲ್ಲ. ಬದಲಿಗೆ ವಿಜ್ಞಾನ ಹಾಗೂ ಗಣಿತಕ್ಕೆ ಹೊಂದುವವರು ಇವರು.

ತಾಳ್ಮೆ ಹಾಗೂ ಶಾಂತ ಸ್ವಭಾವದಿಂದ ಬದುಕಲ್ಲಿ ಬ್ಯಾಲೆನ್ಸ್ ಸಾಧಿಸಬಲ್ಲರು.

ಇಷ್ಟೆಲ್ಲದರ ನಡುವೆಯೂ ಸದಾ ಕೆಟ್ಟದ್ದೇನೋ ಆದರೆ ಎಂದು ಯೋಚಿಸುವವರು. ಆದರೆ, ಈ ಸ್ವಭಾವದಿಂದ ಅವರು ಎಲ್ಲಕ್ಕೂ ಮುಂಚಿತವಾಗಿ ತಯಾರಿ ಮಾಡಿಕೊಳ್ಳಬಲ್ಲವರಾಗಿದ್ದಾರೆ.

ಸಂಬಂಧದ ಆರಂಭದಲ್ಲಿ ಸ್ವಲ್ಪ ಬಿಗುವಾಗಿ ಕಂಡರೂ, ನಿಮ್ಮದು ಪ್ರಾಮಾಣಿಕ ಪ್ರೀತಿಯಾಗಿದ್ದರೆ, ಜೀವನಪೂರ್ತಿ ಬದ್ಧತೆ ತೋರುವ ಇಚ್ಛೆ ವ್ಯಕ್ತಪಡಿಸಿದರೆ ನಿಧಾನವಾಗಿ ಚಿಪ್ಪಿನಿಂದ ಹೊರಬಂದು ಮನಸೋಇಚ್ಛೆ ಪ್ರೀತಿಸುತ್ತಾರೆ.