ಮಹಿಳೆಯರ ಮಾಸಿಕ ಋತುಚಕ್ರದ ಬಗ್ಗೆ ಚಾಣಕ್ಯ ನೀತಿಯಲ್ಲಿ ಏನು ಹೇಳಲಾಗಿದೆ?
Chanakya Niti About Women: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಬಗ್ಗೆ ಹೇಳಿದ್ದಾರೆ. ಈ ಲೇಖನದಲ್ಲಿ, ಮಹಿಳೆಯರ ಮಾಸಿಕ ಋತುಚಕ್ರದ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ ಎಂಬುದನ್ನು ವಿವರಿಸಲಾಗಿದೆ.

ಪ್ರಪಂಚದ ಇತಿಹಾಸ ಕಂಡ ಅದ್ಭುತ ವ್ಯಕ್ತಿಯೇ ಆಚಾರ್ಯ ಚಾಣಕ್ಯ. ಉಗ್ರ ಸ್ವಾಭಿಮಾನಿ, ಕಠೋರ ರಾಜಕೀಯ ನೀತಿಗಳಿಗೆ ಆಚಾರ್ಯ ಚಾಣಕ್ಯರು. ಆರ್ಥಿಕ ತಜ್ಞರು ಆಗಿರುವ ಆಚಾರ್ಯ ಚಾಣಕ್ಯರು ರಾಜಕೀಯ ವಿಷಯಗಳ ಜೊತೆಯಲ್ಲಿ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆಯೂ ಹಲವ ವಿಚಾರಗಳನ್ನು ಕೌಟಿಲ್ಯ ಅವರು ಹೇಳಿದ್ದಾರೆ. ಸಮಾಜದಲ್ಲಿರುವ ಎಲ್ಲಾ ವರ್ಗ ಜನರು, ಪಂಗಡಗಳು, ಆರೋಗ್ಯ, ಕೌಟುಂಬಿಕ ಸಮಸ್ಯೆಗಳು ಕುರಿತು ತಮ್ಮ ನೀತಿಗಳಲ್ಲಿ ಚಾಣಕ್ಯ ಹೇಳಿದ್ದಾರೆ.
chankya niti
ಶತ್ರುಗಳನ್ನು ಚಾಣಕ್ಯರು ಹೇಗೆ ಸಂಹರಿಸಿದರು ಎಂದು ಭಾರತದ ಇತಿಹಾಸ ಹೇಳುತ್ತದೆ. ಈ ಹೋರಾಟ/ಯುದ್ಧದ ತಂತ್ರಗಳೇ ಚಾಣಕ್ಯ ನೀತಿ ಎಂದು ಕರೆಯಲ್ಪಡುತ್ತವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಲ್ಲಿ ನಂಬಿಕೆ ಇಲ್ಲದವನು ಜನನ-ಮರಣ ಚಕ್ರದ ನಡುವೆ ಸಿಲುಕುತ್ತಾನೆ. ಬದುಕಿನ ರೀತಿ ,ಪೂಜೆ ವಿಧಾನ, ಖಾಸಗಿ ಮತ್ತು ವೃತ್ತಿ ಜೀವನ, ಮಹಿಳೆಯರ ಕುರಿತು ಚಾಣಕ್ಯರು ಹಲವು ಮಾಹಿತಿಯನ್ನು ತಿಳಿಸಿದ್ದಾರೆ. ಈ ಲೇಖನದಲ್ಲಿ ಮಹಿಳೆಯ ಮಾಸಿತ ಋತುಚಕ್ರದ ಬಗ್ಗೆ ವಿವರಿಸಲಾಗಿದೆ.
ಮಹಿಳೆಯರ ಕುರಿತಾದ ಚಾಣಕ್ಯ ಶ್ಲೋಕ
ಭಸ್ಮನಾ ಶುಧ್ಯತೇ ಕಾಂಸ್ಯಂ ತಾಮ್ರ ಮಲೈನ ಶುಧ್ಯತಿ!
ರಜಸಾ ಶುಧ್ಯತೇ ನಾರೀ ನದೀ ವೇತೇನ ಶುಧ್ಯತಿ!
ಶ್ಲೋಕದ ಅರ್ಥ
ಈ ಶ್ಲೋಕದಿಂದ ಯಾರು ಹೇಗೆ ಶುದ್ಧವಾಗುತ್ತಾರೆ ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇದಕ್ಕೆ ಕೆಲವು ಪ್ರಮುಖ ಉದಾಹರಣೆಗಳನ್ನು ಈ ಶ್ಲೋಕದ ಮೂಲಕ ನೀಡಲಾಗಿದೆ. ಪಾತ್ರೆಯು ಬೂದಿಯಿಂದ, ತಾಮ್ರವು ನಿಂಬೆ ಹಣ್ಣಿನಿಂದ, ಮಹಿಳೆಯು ಮಾಸಿಕ ಋತುಚಕ್ರದಿಂದ ಮತ್ತು ನದಿಯು ತನ್ನ ವೇಗದಿಂದ ಶುದ್ಧವಾಗುತ್ತದೆ.
ಈ ಹಿಂದೆ ಅಡುಗೆ ಪಾತ್ರೆಗಳನ್ನು ಒಲೆಯಲ್ಲಿರುವ ಬೂದಿಯಿಂದ ತೊಳೆಯಲಾಗುತ್ತಿತ್ತು. ಬೂದಿಯಿಂದ ಪಾತ್ರೆಗಳು ಶುದ್ಧವಾಗುತ್ತದೆ. ಇನ್ನು ತಾಮ್ರದ ಪಾತ್ರೆಗಳ ಶುದ್ಧೀಕರಣಕ್ಕೆ ಹುಳಿ(ಹುಣಸೆ ಅಥವಾ ನಿಂಬೆ) ಬಳಸಲಾಗುತ್ತದೆ. ಒಂದು ವೇಳೆ ನದಿ ಕಲುಷಿತಗೊಂಡಿದ್ರೆ ಮಳೆಯಾಗಿ ಅದು ವೇಗವಾಗಿ ಹರಿವು ಕಂಡು ತನ್ನನ್ನು ತಾನು ಶುದ್ಧವಾಗುತ್ತದೆ. ಹಾಗೆಯೇ ಮಹಿಳೆಯರು ಮಾಸಿಕ ಋತುಚಕ್ರದಿಂದ ಶುದ್ಧವಾಗುತ್ತಾರೆ.
ಮಾಸಿಕ ಋತುಚಕ್ರದಿಂದ ಮಹಿಳೆಯರ ದೇಹದಿಂದ ಅಶುದ್ಧವಾದ ರಕ್ತ ಹೊರಗೆ ಹೋಗುತ್ತದೆ. ಹಾಗಾಗಿ ಎಲ್ಲದಕ್ಕೂ ಶುದ್ಧೀಕರಣ ಆಗುವ ಅವಕಾಶಗಳಿರುತ್ತವೆ. ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯಲ್ಲ ಎಂಬ ಮಾತಿದೆ. ಅದೇ ರೀತಿ ಸಾಯುವಮುನ್ನ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕು. ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಸಹಿ ಇಲ್ಲಿ ಹೊಂದಿಕೆಯಾಗುತ್ತದೆ.
ವೇಗವಾಗಿ ಹರಿಯುವ ನದಿಯಲ್ಲಿ ಯಾವುದೇ ಕಲ್ಮಶ ಇರಲ್ಲ. ಮೊದಲ ನೀರು ಎಲ್ಲಾ ಕಲ್ಮಶವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಹರಿಯುವ ನೀರು ಸದಾ ಶುದ್ಧವಾಗುತ್ತದೆ. ಈ ನೀರು ಕುಡಿಯಲು ಸಹ ಯೋಗ್ಯವಾಗಿರುತ್ತದೆ. ಹಿಮಾಲಯದಿಂದ ಬರೋ ಗಂಗಾ ನದಿಯ ನೀರಿನಲ್ಲಿ ಯಾವುದೇ ಬ್ಯಾಕ್ಟಿರಿಯಾಗಳು ಇರಲ್ಲ ಎಂಬ ಮಾತಿದೆ. ಮಹಾಕುಂಭದ ವೇಳೆ ಕೋಟ್ಯಂತರ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಅದು ಹರಿಯುವ ನೀರು ಆಗಿರೋದರಿಂದ ನದಿ ತನ್ನನ್ನು ಶುದ್ಧ ಮಾಡಿಕೊಳ್ಳುತ್ತದೆ.
ಹಿಂದೂ ಪುರಾಣ ಮತ್ತು ಚಾಣಕ್ಯ ನೀತಿಯಲ್ಲಿ ಹೇಗೆ ಪುಣ್ಯ ಸಂಪಾದನೆ ಮಾಡಬೇಕು ಎಂದು ಹೇಳಲಾಗಿದೆ. ಒಳ್ಳೆಯ ಮಾತುಗಳನ್ನು ಹೇಳುವುದು, ದಾನ ಮಾಡುವುದು, ಸತ್ಯವನ್ನು ನುಡಿಯುವುದು, ಸಜ್ಜನರ ಸಂಗ, ವ್ಯಾಪಾರದಲ್ಲಿ ಮೋಸ ಮಾಡದಿರೋದು, ನಂಬಿಕೆ ಮತ್ತು ವಿಶ್ವಾಸ ಗಳಿಸೋದು ಹೀಗೆ ಹಲವು ವಿಷಯಗಳನ್ನು ಹೇಳಲಾಗಿದೆ. ವಿಶೇಷ ದಿನಗಳಂದು ನದಿಯಲ್ಲಿ ಪುಣ್ಯಸ್ನಾನ ಮಾಡಲು ಸಹ ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಣದ ಬಳಿಕ ಮನೆಯನ್ನು ತೊಳೆದು ಶುದ್ಧೀಕರಣ ಮಾಡಬೇಕೆಂದು ಹಿಂದೂ ಶಾಸ್ತ್ರಗಳಲ್ಲಿ ಹೇಳಲಾಗಿದೆ.