ಬುಧ ಗೋಚರ,ಈ ರಾಶಿಯವರ ಬಾಳಲ್ಲಿ ಹಣವೋ ಹಣ, ವೃತ್ತಿಯಲ್ಲಿ ಅಗಾಧ ಯಶಸ್ಸು
ಗ್ರಹಗಳ ರಾಜಕುಮಾರ ಬುಧ ತನ್ನ ಸ್ವಂತ ರಾಶಿಯಾದ ಕನ್ಯಾದಿಂದ ಹೊರಬಂದು ಅಕ್ಟೋಬರ್ 19 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಚಲನೆಯಿಂದ ಅನೇಕ ರಾಶಿಗಳ ಅದೃಷ್ಟ ಬೆಳಗಲಿದೆ.
ಮಿಥುನ ರಾಶಿಯವರನ್ನು ಆಳುವ ಗ್ರಹ ಬುಧ ಗ್ರಹವಾಗಿದೆ. ಈ ಬದಲಾವಣೆಯಿಂದ ಮಿಥುನದವರಿಗೆ ಆರ್ಥಿಕ ಲಾಭ ಸಿಗಲಿದೆ ಮತ್ತು ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತೀರಿ.
ಕನ್ಯಾ ರಾಶಿಯಲ್ಲಿ ಬುಧನು ಉತ್ಕೃಷ್ಟನಾಗಿರುತ್ತಾನೆ . ಆದ್ದರಿಂದ ಬುಧನು ಶುಭ ಫಲಿತಾಂಶವನ್ನು ನೀಡುತ್ತಾನೆ . ಆರ್ಥಿಕ ಲಾಭವಿರುತ್ತದೆ.ಅನಿರೀಕ್ಷಿತ ಹಣದ ಲಾಭವನ್ನು ಪಡೆಯಬಹುದು.
ಧನು ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.ವ್ಯಾಪಾರಸ್ಥರ ವ್ಯವಹಾರದಲ್ಲಿ ವಿಸ್ತರಣೆಯಾಗಲಿದೆ. ಹೂಡಿಕೆಯ ಸಂಪೂರ್ಣ ಲಾಭವನ್ನು ಪಡೆಯುತ್ತೀರಿ.
ಬುಧದ ಬದಲಾವಣೆಯು ಮಕರ ರಾಶಿಯವರಿಗೆ ತುಂಬಾ ಶುಭವಾಗಲಿದೆ.ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಪೂರ್ವಿಕರ ಆಸ್ತಿಯಿಂದಲೂ ಲಾಭ ಪಡೆಯಬಹುದು.
ತುಲಾ ರಾಶಿಗೆ ಬುಧನ ಆಗಮನದಿಂದ ಕುಂಭ ರಾಶಿಯವರಿಗೆ ಪೂರಣ ಲಾಭ ದೊರೆಯಲಿದೆ. ನಿಮ್ಮ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಬಹುದು.ವ್ಯವಹಾರವು ವೇಗವನ್ನು ಪಡೆಯಬಹುದು.