ರಾಶಿಗನುಗುಣವಾಗಿ ಈ ಲೋಹ ಖರೀದಿಸಿ ಅದೃಷ್ಟ ಜೊತೆ ಕೈ ತುಂಬಾ ಹಣ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ರತ್ನ ಖರೀದಿಸಬೇಕು, ಯಾವ ರತ್ನ ಖರೀದಿಸಿದರೆ ಅವರಿಗೆ ಒಳ್ಳೆಯದು ಆಗುತ್ತದೆ ಎಂದು ತಿಳಿದುಕೊಳ್ಳೋಣ..
ಮೇಷ ರಾಶಿಯವರು ಈ ಧನತ್ರಯೋದಶಿ ದಿನದಂದು ಪುಷ್ಯರಾಗ ರತ್ನವನ್ನು ಖರೀದಿಸಬೇಕು. ಈ ರತ್ನ ಧರಿಸುವುದರಿಂದ ನಿಮ್ಮ ಪೂರ್ವ ಪುಣ್ಯ ಕರ್ಮಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಜೀವನವನ್ನೇ ಬದಲಾಯಿಸುತ್ತದೆ. ಇಲ್ಲದಿದ್ದರೆ ಹಳದಿ ನೀಲಮಣಿ ರತ್ನವನ್ನು ಧರಿಸಬಹುದು. ಈ ಎರಡೂ ರತ್ನಗಳು ನಿಮಗೆ ಅದೃಷ್ಟವನ್ನು ತರುತ್ತವೆ.
ವೃಷಭ ರಾಶಿಯವರು ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಜ್ರ ಅಥವಾ ಹಸಿರು ಪಚ್ಚೆ ಅಥವಾ ನೀಲಿ ನೀಲಮಣಿ ರತ್ನವನ್ನು ಖರೀದಿಸಬೇಕು. ಈ ರತ್ನಗಳು ಧರಿಸುವುದು ನಿಮಗೆ ಅದ್ಭುತವಾಗಿರುತ್ತದೆ.
ಮಿಥುನ ರಾಶಿಯವರು ಪಚ್ಚೆ, ವಜ್ರ, ನೀಲಮಣಿ ರತ್ನಗಳನ್ನು ಖರೀದಿಸಿ ಧರಿಸಬೇಕು. ಹೀಗೆ ಮಾಡುವುದರಿಂದ ಅವರಿಗೆ ಒಳ್ಳೆಯದು ಆಗುತ್ತದೆ. ಅದೃಷ್ಟ ಕೂಡ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿಯವರು ತಮ್ಮ ಜೀವನ ಬದಲಾಗಬೇಕೆಂದರೆ ಪುಷ್ಯರಾಗ ಅಥವಾ ಹಳದಿ ನೀಲಮಣಿ ಅಥವಾ ಮುತ್ತುಗಳನ್ನು ಆರಿಸಿಕೊಳ್ಳಬೇಕು. ಈ ಮೂರರಲ್ಲಿ ಯಾವುದನ್ನು ಧರಿಸಿದರೂ ನಿಮಗೆ ಅದೃಷ್ಟ ಲಭಿಸುತ್ತದೆ..
ಸಿಂಹ ರಾಶಿಯವರು ತಮ್ಮ ಜೀವನ ಬದಲಾಗಬೇಕೆಂದರೆ ಈ ಧನತ್ರಯೋದಶಿ ದಿನದಂದು ಮಾಣಿಕ್ಯ, ಹಳದಿ ನೀಲಮಣಿ ಅಥವಾ ಪುಷ್ಯರಾಗ ರತ್ನವನ್ನು ಖರೀದಿಸಬೇಕು.
ಕನ್ಯಾ ರಾಶಿಯವರು ಧನತ್ರಯೋದಶಿ ದಿನದಂದು ಪಚ್ಚೆ, ನೀಲಮಣಿ ಅಥವಾ ವಜ್ರವನ್ನು ಖರೀದಿಸಬಹುದು. ಹೀಗೆ ಮಾಡಿದರೆ ಅವರಿಗೆ ಒಳ್ಳೆಯದು ಆಗುತ್ತದೆ.
ತುಲಾ ರಾಶಿಯವರ ಜೀವನವನ್ನು ಬದಲಾಯಿಸುವ ರತ್ನ ಯಾವುದಾದರೂ ಇದ್ದರೆ ಅದು ವಜ್ರ. ನೀವು ಅಂದುಕೊಂಡಿದ್ದೆಲ್ಲಾ ನಿಜವಾಗಬೇಕೆಂದರೆ ನೀಲಮಣಿ ರತ್ನವನ್ನು ಆರಿಸಿಕೊಳ್ಳಬೇಕು. ಈ ರತ್ನ ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.
ವೃಶ್ಚಿಕ ರಾಶಿಯವರು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಧನತ್ರಯೋದಶಿ ಸಮಯದಲ್ಲಿ ಪುಷ್ಯರಾಗ, ಹಳದಿ ನೀಲಮಣಿ ಅಥವಾ ಮುತ್ತು ಧರಿಸಬೇಕು. ಇವುಗಳನ್ನು ಖರೀದಿಸಿದರೆ ನಿಮಗೆ ಒಳ್ಳೆಯದು ಆಗುತ್ತದೆ.
ಧನಸ್ಸು ರಾಶಿಯವರು ಈ ದೀಪಾವಳಿ ಸಮಯದಲ್ಲಿ ಹಳದಿ ನೀಲಮಣಿ, ಪುಷ್ಯರಾಗ ಅಥವಾ ಮಾಣಿಕ್ಯ ರತ್ನವನ್ನು ಖರೀದಿಸಿ ಧರಿಸಬೇಕು. ಹೀಗೆ ಮಾಡುವುದರಿಂದ ಈ ರಾಶಿಯವರಿಗೆ ಈ ರತ್ನಗಳು ಅದೃಷ್ಟವನ್ನು ತರುತ್ತವೆ.
ಮಕರ ರಾಶಿಯವರು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಧನತ್ರಯೋದಶಿ ಸಮಯದಲ್ಲಿ ನೀಲಮಣಿ, ವಜ್ರ ಅಥವಾ ಪಚ್ಚೆ ರತ್ನವನ್ನು ಖರೀದಿಸಬೇಕು. ಇವು ನಿಮಗೆ ಒಳ್ಳೆಯದು ಮಾಡುತ್ತವೆ.
ಕುಂಭ ರಾಶಿಯವರು ಈ ಧನತ್ರಯೋದಶಿ ದಿನದಂದು ನೀಲಮಣಿ, ಪಚ್ಚೆ ಅಥವಾ ವಜ್ರವನ್ನು ಖರೀದಿಸಬಹುದು. ಹೀಗೆ ಮಾಡಿದರೆ ಅವರಿಗೆ ಒಳ್ಳೆಯದು ಆಗುತ್ತದೆ.
ಮೀನ ರಾಶಿಯವರು ಈ ವರ್ಷ ಧನತ್ರಯೋದಶಿ ದಿನದಂದು ಹಳದಿ ನೀಲಮಣಿ, ಮುತ್ತು, ಪುಷ್ಯರಾಗಗಳನ್ನು ಖರೀದಿಸಬೇಕು. ಇವು ಈ ರಾಶಿಯವರಿಗೆ ಒಳ್ಳೆಯದು ಮಾಡುತ್ತವೆ.