MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಜುಲೈ ತಿಂಗಳಲ್ಲಿ ಈ ರಾಶಿಗಳಿಗೆ ತುಂಬಾ ಸಮಸ್ಯೆ … ಎಚ್ಚರಿಕೆಯಿಂದಿರಿ

ಜುಲೈ ತಿಂಗಳಲ್ಲಿ ಈ ರಾಶಿಗಳಿಗೆ ತುಂಬಾ ಸಮಸ್ಯೆ … ಎಚ್ಚರಿಕೆಯಿಂದಿರಿ

ಜುಲೈ ತಿಂಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಅನುಕೂಲಕರವಾಗಿಲ್ಲ. ಕೆಲವು ಜನರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಇಲ್ಲಿ ಉಲ್ಲೇಖಿಸಿದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಿದರೆ, ನೀವು ಪ್ರಯೋಜನ ಪಡೆಯುತ್ತೀರಿ.  

2 Min read
Suvarna News
Published : Jun 23 2023, 02:25 PM IST
Share this Photo Gallery
  • FB
  • TW
  • Linkdin
  • Whatsapp
19

ಜುಲೈ ತಿಂಗಳು ಜೀವನದಲ್ಲಿ ಕೆಲವು ಏರಿಳಿತಗಳ ಲಕ್ಷಣಗಳನ್ನು ತೋರಿಸುತ್ತಿದೆ. ಕೆಲವು ರಾಶಿಗಳ ಮೇಲೆ ಜುಲೈ ತಿಂಗಳು ಹೆಚ್ಚಿನ ಪರಿಣಾಮ ಬೀರಲಿದೆ. ಕೆಲವು ರಾಶಿಗಳ (zodiac sign) ಬಳಿ ಹಣ ಇದ್ರೂ ಸಮಸ್ಯೆ ಹೆಚ್ಚಾಗಿರುತ್ತೆ. ಹಾಗಿದ್ರೆ ಯಾವ ರಾಶಿಯವರಿಗೆ ಏನೆಲ್ಲಾ ಸಮಸ್ಯೆ ಕಾಡಲಿದೆ ಅನ್ನೋದನ್ನು ನೋಡೋಣ. 
 

29

ನಾವೆಲ್ಲರೂ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಬಯಸುವುದರಿಂದ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಬಹುದು. ಜ್ಯೋತಿಷ್ಯವು ಭವಿಷ್ಯದ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ ಮತ್ತು ಮುಂಬರುವ ಸಮಯಕ್ಕೆ ನಿಮ್ಮನ್ನು ಎಚ್ಚರಿಸುತ್ತದೆ. ಭವಿಷ್ಯದಲ್ಲಿ ಬರಲಿರುವ ಸಮಯದ ಬಗ್ಗೆ ಜ್ಯೋತಿಷ್ಯ ನಿಮಗೆ ಸರಿಯಾದ ಮಾಹಿತಿ ನೀಡುವಂತೆಯೇ, ಪರಿಹಾರವನ್ನು ಸಹ ನೀಡುತ್ತೆ. ಮುಂಬರುವ ತಿಂಗಳಲ್ಲಿ ನಿಮ್ಮ ರಾಶಿ ಮೇಲೆ ಯಾವ ಪರಿಣಾಮಗಳು ಉಂಟಾಗಬಹುದು ಮತ್ತು ಸಮಯವು ಅನುಕೂಲಕರವಾಗಿಲ್ಲದವರು ಯಾವ ಪರಿಹಾರಗಳನ್ನು (astro remedies) ಪ್ರಯತ್ನಿಸಬೇಕು ಎಂಬುದರ ಬಗ್ಗೆ ತಿಳಿಯೋಣ. 
 

39

ವೃಷಭ ರಾಶಿ 
ಜುಲೈ ತಿಂಗಳಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೀವು ಶ್ರಮಿಸಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲೂ (family life) ಸಮಸ್ಯೆಗಳು ಎದುರಾಗಬಹುದು. ನೀವು ಲವ್ ಮಾಡ್ತಿದ್ರೆ, ಮದುವೆಯ ಸಾಧ್ಯತೆಗಳು ಇದೀಗ ಸಾಧ್ಯವಾಗೋದಿಲ್ಲ. ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ, ಆದರೆ ಹಣದ ನಷ್ಟ ಸಾಧ್ಯತೆ ಇದೆ. ಈ ತಿಂಗಳು ಹಣವನ್ನು ಗಳಿಸುವಲ್ಲಿ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

49

ಕರ್ಕಾಟಕ ರಾಶಿ
ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳು ಇರಬಹುದು ಮತ್ತು ಯಶಸ್ಸನ್ನು ಸಾಧಿಸುವಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ಜೀವನದಲ್ಲಿ (financial status) ಸಹ ಸಮಸ್ಯೆಗಳನ್ನು ಹೊಂದಿರಬಹುದು. ತಾಯಿಯ ಆರೋಗ್ಯ ಹದಗೆಡಬಹುದು. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಅಡೆತಡೆಗಳು ಉಂಟಾಗಬಹುದು. ವ್ಯವಹಾರದ ವಿಷಯದಲ್ಲಿ, ನೀವು ಚಿಂತನಶೀಲವಾಗಿ ಕೆಲಸ ಮಾಡಬೇಕು.

59

ಕನ್ಯಾರಾಶಿ 
ಕನ್ಯಾ ರಾಶಿಯವರು ಈ ತಿಂಗಳು ವೃತ್ತಿಜೀವನದ ನಡೆಸಲು ಕಷ್ಟಪಡಬೇಕಾಗುತ್ತೆ ಮತ್ತು ಖರ್ಚುಗಳಲ್ಲಿ ಹೆಚ್ಚಳದ ಚಿಹ್ನೆಗಳಿವೆ. ಆರೋಗ್ಯ ಸಾಮಾನ್ಯವಾಗಿರುತ್ತದೆ, ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಶಾಂತಿಯನ್ನು ಕಾಪಾಡಿಕೊಳ್ಳಿ. ನೀವು ಮಾನಸಿಕ ಒತ್ತಡವನ್ನು ಹೊಂದುವ ಸಾಧ್ಯತೆ ಇದೆ. 

69

ತುಲಾ ರಾಶಿ 
ತುಲಾ ರಾಶಿಯವರು ವೃತ್ತಿಜೀವನದಲ್ಲಿ(problem in career)  ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಕೆಲಸವನ್ನು ಪೂರ್ಣಗೊಳಿಸುವಲ್ಲಿ ನಿಮಗೆ ಸಮಸ್ಯೆ ಉಂಟಾಗಬಹುದು. ಹಣಕಾಸಿನ ಪರಿಸ್ಥಿತಿಯಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಕುಟುಂಬ ಜೀವನದಲ್ಲಿ ಸಂತೋಷದ ಕೊರತೆ ಸಹ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಗಮನ ಹರಿಸುವ ಅಗತ್ಯವಿದೆ.

79

ವೃಶ್ಚಿಕ ರಾಶಿ
ಈ ತಿಂಗಳು ಕುಟುಂಬದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ಸಂಬಂಧದಲ್ಲಿ ಅಂತರ ಹೆಚ್ಚಾಗುತ್ತದೆ. ಹಾಗಾಗಿ, ನೀವು ತಾಳ್ಮೆಯಿಂದ ಕೆಲಸ ಮಾಡಬೇಕು. ಆರ್ಥಿಕವಾಗಿ, ನೀವು ಈ ಬಾರಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಲಾಭದ ಜೊತೆಗೆ, ಖರ್ಚುಗಳು ಸಹ ಹೆಚ್ಚಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಮಾಡಿದ್ರೆ ಒಳ್ಳೆಯದಾಗುತ್ತೆ. 

89

ಕುಂಭ ರಾಶಿ 
ಕುಂಭ ರಾಶಿಯವರು ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯವು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಈ ತಿಂಗಳು ನೀವು ಹಣವನ್ನು ಉಳಿಸಬೇಕು, ಅದು ನಿಮಗೆ ತುಂಬಾ ಸಹಾಯ ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸಾಮಾನ್ಯವಾಗಿರುತ್ತೆ. ಪಾರ್ಟ್ನರ್ ಶಿಪ್ ನಲ್ಲಿ ವ್ಯವಹಾರ (business) ಮಾಡಬೇಡಿ, ಇದು ನಿಮಗೆ ನಷ್ಟವನ್ನುಂಟು ಮಾಡಬಹುದು.   

99

ಮೀನ ರಾಶಿ 
ವೃತ್ತಿಜೀವನದ ಕ್ಷೇತ್ರದಲ್ಲಿ ಈ ತಿಂಗಳು ನಿಮಗೆ ತುಂಬಾನೆ ಕಷ್ಟವಾಗಿರಬಹುದು. ನೀವು ಬಡ್ತಿಗಾಗಿ ಕಾಯುತ್ತಿದ್ದರೆ, ಪ್ರಯೋಜನವನ್ನು ಪಡೆಯುವುದಿಲ್ಲ. ಮದುವೆ ಬಗ್ಗೆ ಯೋಚನೆ ಮಾಡುತ್ತಿರುವವರು, ಈ ತಿಂಗಳು ಆ ಯೋಚನೆಯಿಂದ ಮುಂದುವರೆಯಿರಿ.

ಪರಿಹಾರ - ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಮಂಗಳವಾರ, ರಾಹು ಮತ್ತು ಕೇತುವಿಗೆ ಯಜ್ಞ-ಹವನವನ್ನು ಮಾಡಿ. 
 

About the Author

SN
Suvarna News
ಕ್ಯಾನ್ಸರ್
ಕನ್ಯಾ ರಾಶಿ
ರಾಶಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved