ಈ ರಾಶಿಯವರು ಹಾಸಿಗೆಯಲ್ಲೂ ಗೂಳಿಗಳೇ.. ಆದರೆ, ಭಾವುಕ ಸಂಬಂಧ ಬೇಕಷ್ಟೇ!
ಹೇಳೀ ಕೇಳೀ ವೃಷಭ ರಾಶಿಯದು ಎತ್ತಿನ ಚಿಹ್ನೆ. ಎತ್ತಿನಂತೆ ಬಹಳ ಶಕ್ತಿವಂತರಾದ ಇವರು ಹಾಸಿಗೆಯಲ್ಲಿ ವಿಜೃಂಭಿಸುತ್ತಾರೆ. ಲೈಂಗಿಕತೆಯ ವಿಷಯಕ್ಕೆ ಬಂದಾಗ ಈ ರಾಶಿಯ 7 ಗುಟ್ಟುಗಳನ್ನು ಇಲ್ಲಿ ರಟ್ಟು ಮಾಡಲಾಗಿದೆ.
ರಾಶಿಚಕ್ರದ ಎರಡನೇ ಚಿಹ್ನೆ ವೃಷಭ ರಾಶಿಯು ಅತ್ಯಂತ ಇಂದ್ರಿಯ ಚಿಹ್ನೆಗಳಲ್ಲಿ ಒಂದಾಗಿದೆ. ಶುಕ್ರನ ಆಳ್ವಿಕೆಯಲ್ಲಿರುವ ಆ ರಾಶಿಗೆ ಪ್ರೀತಿ, ಪ್ರೇಮ,ಪ್ರಣಯ, ಐಶಾರಾಮಿತನದ ಅಭಿಲಾಶೆಗಳು ಕೊಂಚ ಹೆಚ್ಚೇ. ಶುಕ್ರನಿಂದಾಗಿ ಲೈಂಗಿಕತೆಯು ಅವರ ವ್ಯಕ್ತಿತ್ವದ ದೊಡ್ಡ ಭಾಗವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವರಿಗೆ ಸಂಬಂಧದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯ ಅಗತ್ಯವಿದೆ.
ನೀವು ಅವರ ಕಂಪನಿಯನ್ನು ಪ್ರಶಂಸಿಸಬೇಕು; ನೀವು ಅವರನ್ನು ಪ್ರೀತಿಸುವಂತೆ ಮಾಡಬೇಕು ಮತ್ತು ಪ್ರಯತ್ನದಲ್ಲಿ ತೊಡಗಬೇಕು. ಅವರೊಂದಿಗೆ ಧೀರ್ಘ ಕಾಲ ಇರುವ ಭರವಸೆ ನೀಡಬೇಕು. ನಂತರದಲ್ಲಿ ಅವರು ನಿಮ್ಮನ್ನು ಹಚ್ಚಿಕೊಂಡರೆಂದರೆ ಮುಂದೆ ಅವರ ಪ್ರೀತಿ, ಪ್ರಣಯ ಯಾವುದನ್ನೂ ತಡೆಯುವವರಿಲ್ಲ.
ವೃಷಭ ರಾಶಿಯೊಂದಿಗಿನ ಲೈಂಗಿಕತೆಯ ಬಗ್ಗೆ, ದೈಹಿಕ ಬಯಕೆಗಳ ಬಗ್ಗೆ, ಸಂಗಾತಿಯಿಂದ ಏನು ನಿರೀಕ್ಷಿಸುತ್ತಾರೆಂಬ ವಿಷಯವಾಗಿ ನೀವು ತಿಳಿದುಕೊಳ್ಳಬೇಕಾದ ಏಳು ವಿಷಯಗಳು ಇಲ್ಲಿವೆ..
ಅವರು ಮುದ್ದಿಸುವುದು ಹೇಗೆ ಎಂದು ತಿಳಿದಿದ್ದಾರೆ. ಅವರು ಭಾವನಾತ್ಮಕವಾಗಿ ಮತ್ತು ಲೈಂಗಿಕವಾಗಿ ತಮ್ಮ ಪಾಲುದಾರರನ್ನು ತೃಪ್ತಿಪಡಿಸುತ್ತಾರೆ. ಅವರೊಂದಿಗಿನ ಸಮಯ ಸಂಗಾತಿಗೆ ಉತ್ತಮವಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ.
ಮುಂಗಡ ಸೂಚನೆ
ನಿಮ್ಮ ಮನಸ್ಸಿನಲ್ಲಿ ಸೆಕ್ಸ್ ಇದ್ದರೆ ವೃಷಭ ರಾಶಿಯವರು ಮೊದಲೇ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಅವರು ತಮ್ಮನ್ನು ಇದಕ್ಕಾಗಿ ಸಜ್ಜಾಗಿಸಿಕೊಳ್ಳಲು ಮತ್ತು ವಿಶೇಷ ಸಮಯಕ್ಕೆ ಪರಿಪೂರ್ಣರಾಗಲು ಸಮಯವನ್ನು ಬಯಸುತ್ತಾರೆ.
ಫೋರ್ ಪ್ಲೇ
ವೃಷಭ ರಾಶಿಗೆ ಫೋರ್ ಪ್ಲೇ ಬಹಳ ಪ್ರಮುಖವಾಗಿದೆ. ಪ್ರೀತಿಯ ಮಾತುಗಳು, ಮಸಾಜ್, ಡಿನ್ನರ್, ಸಿಹಿ ಮುತ್ತುಗಳು- ಇಂಥವುಗಳ ನಂತರವಷ್ಟೇ ಅವರು ಮುನ್ನುಗ್ಗುತ್ತಾರೆ.
ಒನ್ ನೈಟ್ ಸ್ಟ್ಯಾಂಡ್ ಸಲ್ಲ
ನೀವು ವೃಷಭ ರಾಶಿಯವರೊಂದಿಗೆ ಒನ್ ನೈಟ್ ಸ್ಟ್ಯಾಂಡ್ ನಿರೀಕ್ಷಿಸಲು ಸಾಧ್ಯವಿಲ್ಲ. ಅವರಿಗೆ ಲೈಂಗಿಕತೆಯು ಶಾಶ್ವತತೆಯ ಸಂಬಂಧದೊಂದಿಗೆ ಬೆಸೆದುಕೊಂಡಿದೆ.
ಈ ರೀತಿಯ ಚುಂಬನವಿಷ್ಟ
ವೃಷಭ ರಾಶಿಯ ಪುರುಷ/ಮಹಿಳೆ ಉತ್ತಮ ನೆಕ್ ರಬ್ ಅನ್ನು ಇಷ್ಟಪಡುತ್ತಾರೆ. ಅವರು ತಮ್ಮ ಕುತ್ತಿಗೆಯ ಮೇಲಿನ ಚುಂಬನದ ಸುರಿಮಳೆಯನ್ನು ಮತ್ತು ಅದರ ಮೇಲಿನ ಆ ಹಲ್ಲುಗಳ ಮಾರ್ಕ್‌ಗಳನ್ನು ಇಷ್ಟಪಡುತ್ತಾರೆ.
ಪಂಚೇಂದ್ರಿಯ
ವೃಷಭ ರಾಶಿಯವರಿಗೆ, ಸಂಗಾತಿಯು ಉತ್ತಮ ಪರಿಮಳ ಹೊಂದಿರಬೇಕು. ಅವರು ಪ್ರೀತಿಯ ಮಾತುಗಳ ನಡುವೆ ಸಣ್ಣ ಪುಟ್ಟ ಸ್ಪರ್ಶವನ್ನು ಬಹಳವಾಗಿ ಆಸ್ವಾದಿಸುತ್ತಾರೆ.
ಹೊಸತನಕ್ಕೆ ಸಮಯ ಬೇಕು
ಅವರಿಗೆ ಹೊಸದನ್ನು ಪ್ರಯತ್ನಿಸಲು ಸಮಯ ತೆಗೆದುಕೊಳ್ಳುತ್ತದೆ. ಈ ರಾಶಿಚಕ್ರದ ಮಹಿಳೆಯರು ಬಹಳ ಬಾರಿ ಉತ್ಕಟತೆಯನ್ನು ಅನುಭವಿಸಿದರೆ, ಪುರುಷರು ಹೆಚ್ಚಿನ ಸಮಯ ಶಕ್ತಿ ಪ್ರದರ್ಶಿಸಬಲ್ಲರು.