ಈ 5 ರಾಶಿಗಳು ಸಂಬಂಧ ಹಾಳು ಮಾಡಿಕೊಳ್ಳೋದು ಹೆಚ್ಚು!
ಕೆಲವರು ಹಾಗೆಯೇ, ಅವರಿಗೆ ಸಂಬಂಧ ನಿಭಾಯಿಸುವ ಛಾತಿ ಇರುವುದಿಲ್ಲ. ಅದಕ್ಕಾಗಿ ಎಲ್ಲಿಯೂ ತರಬೇತಿ ಇರುವುದಿಲ್ಲವಲ್ಲ! ತಮ್ಮ ಸ್ವಭಾವ, ತಪ್ಪು ನಿರ್ಧಾರಗಳಿಂದಾಗಿ ಉತ್ತಮ ಸಂಬಂಧವನ್ನು ಕೈಯಾರೆ ಹಾಳು ಮಾಡುತ್ತಾರೆ. ಇಂಥವರು ಈ 5 ರಾಶಿಗೆ ಸೇರಿರುತ್ತಾರೆ.
ಮೇಷ ರಾಶಿ(Aries)
ಈ ರಾಶಿಚಕ್ರದ ಜನರು ಸಂಬಂಧಗಳು ಸೇರಿದಂತೆ ಜೀವನದ ಎಲ್ಲ ವಿಷಯಗಳಲ್ಲಿ ಅಜಾಗರೂಕ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸ್ಥಿರವಾದ ಸಂಬಂಧಗಳನ್ನು ಹಿಡಿದಿಡಲು ವಿಫಲರಾಗುತ್ತಾರೆ. ಏಕೆಂದರೆ ಅವರು ಯಾವಾಗಲೂ ಜೀವನದಲ್ಲಿ ಉತ್ಸಾಹ ಮತ್ತು ಹೊಸ ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತಾರೆ. ಸಂಬಂಧಗಳಿಗೆ ಪ್ರೀತಿಸುವ ವ್ಯಕ್ತಿಯೊಂದಿಗೆ ಒಂದೆಡೆ ನೆಲೆಗೊಳ್ಳುವ ಅಗತ್ಯವಿರುತ್ತದೆ, ಆದರೆ ಮೇಷ ರಾಶಿಯವರು ಅದನ್ನು ಮಾಡಲು ಹೆಣಗಬೇಕಾಗುತ್ತದೆ. ಅದಕ್ಕೆ ಅವರು ಬಹುಪಾಲು ಸಿದ್ಧರಿರುವುದಿಲ್ಲ.
ಮಿಥುನ ರಾಶಿ(Gemini)
ಅವರದು ದ್ವಂದ್ವ ವ್ಯಕ್ತಿತ್ವ. ಅತ್ಯಂತ ವಿಶ್ವಾಸಾರ್ಹವಲ್ಲದ ಎರಡು ಮುಖದ ಜನರಿವರು. ಮಿಥುನ ರಾಶಿಯವರು ಸಾಹಸ ಮತ್ತು ಸ್ವಾಭಾವಿಕತೆಯನ್ನು ಇಷ್ಟಪಡುವ ಒಂಟಿ ತೋಳಗಳು. ಅವರು ಸಂಬಂಧಗಳೊಂದಿಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಕೆಟ್ಟ ಸಂದರ್ಭಗಳೆದುರಾದಾಗ ಅವರು ನಿಮ್ಮ ನಂಬಿಕೆ ಮತ್ತು ಪ್ರೀತಿಗೆ ಅನರ್ಹರು ಎಂದು ತಿಳಿದು ದುಃಖ ಪಡುವಂತಾಗುತ್ತದೆ.
ಧನು ರಾಶಿ(Sagittarius)
ಅವರು ಮೊಂಡಾದ, ಹಠಾತ್ ಪ್ರವೃತ್ತಿಯವರು. ಧನು ರಾಶಿಯವರು ಅಲ್ಪಾವಧಿಯ ಅಥವಾ ಸಾಂದರ್ಭಿಕ ಸಂಬಂಧಗಳೊಂದಿಗೆ ತುಂಬಾ ಆರಾಮದಾಯಕವಾಗಿರುತ್ತಾರೆ. ಆದರೆ, ಧೀರ್ಘ ಕಾಲದವರೆಗೆ ಒಬ್ಬರೊಂದಿಗಿರುವುದು ಇವರಿಗೆ ಕಷ್ಟವೆನಿಸುತ್ತದೆ. ಹೀಗಾಗಿ ಇವರ ಬಳಿ ಬ್ರೇಕಪ್ ಕತೆಗಳು ಜಾಸ್ತಿ. ಇವರು ತಮ್ಮನ್ನು ತಾವು ನಂಬುವುದೇ ಕಷ್ಟ. ಇವರ ಸಂಗಾತಿಗೆ ಇವರು ಯಾವಾಗ ಏನು ಮಾಡುತ್ತಾರೆಂದು ಅರಿಯಲಾಗುವುದಿಲ್ಲ. ಇದ್ದಕ್ಕಿದ್ದಂತೆ ಭಾವನಾತ್ಮಕವಾಗಿ ಬರಿದಾಗಿ ಬಿಡುತ್ತಾರೆ.
ಮೀನ ರಾಶಿ(Pisces)
ಮೀನ ರಾಶಿಯವರು ಬೇರೆಯವರಿಗಿಂತ ಹೆಚ್ಚಾಗಿ ತಮ್ಮ ಸ್ವಂತ ಅಗತ್ಯಗಳು ಮತ್ತು ಭಾವನಾತ್ಮಕ ಅವಶ್ಯಕತೆಗಳಿಗೆ ಒಲವು ತೋರುತ್ತಾರೆ. ಅವರು ಕಲ್ಪನಾಲೋಕದಲ್ಲಿರುತ್ತಾರೆ. ಅಲ್ಲಿ ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳುವಾಗ ಸಂಬಂಧ ಹೂವಿನ ಹಾಸಿಗೆಯಾಗಿರುತ್ತದೆ. ಆದರೆ ವಾಸ್ತವಕ್ಕೆ ಬಂದಾಗ ಸಂಬಂಧದಲ್ಲಿ ಸಾಕಷ್ಟು ಎಡರು ತೊಡರುಗಳು ಎದುರಾದಾಗ ಅವನ್ನು ಎದುರಿಸುವುದು ಇವರಿಗೆ ಕಷ್ಟವೆನಿಸುತ್ತದೆ. ಹೀಗಾಗಿ, ಅವರು ಸಂಬಂಧವನ್ನೇ ಮುರಿದು ಹೊರ ನಡೆಯುತ್ತಾರೆ. ಮತ್ತು ಅದೊಂದು ದುಸ್ವಪ್ನವೆಂದು ದುಃಖ ಪಡುತ್ತಾರೆ.
ವೃಶ್ಚಿಕ ರಾಶಿ(Scorpio)
ಇವರಲ್ಲಿ ಅನುಮಾನ ಹೆಚ್ಚು. ಯಾರಾದರೂ ತಮ್ಮ ಸಂಗಾತಿಯೊಂದಿಗೆ ಕೊಂಚ ಕ್ಲೋಸ್ ಆಗಿದ್ದರೆ ಇವರಲ್ಲಿ ಅಸೂಯೆ, ಕೋಪ ಟಿಸಿಲೊಡೆಯುತ್ತದೆ. ಅವರ ಈ ನಕಾರಾತ್ಮಕ ಗುಣವು ಅವರ ಪಾಲುದಾರರಿಗೆ ಉಸಿರುಗಟ್ಟಿಸಬಹುದು. ಇದಲ್ಲದೆ, ವೃಶ್ಚಿಕ ರಾಶಿಯವರು ಸಂಬಂಧದಿಂದ ಬಯಸಿದ್ದನ್ನು ಪಡೆಯದಿದ್ದರೆ ತಮ್ಮ ಸಂಗಾತಿಯನ್ನು ಬಿಡಲು ಹಿಂಜರಿಯುವುದಿಲ್ಲ.