- Home
- Astrology
- Festivals
- 4 ರಾಶಿಯವರ ಜೊತೆಯಲ್ಲಿದ್ರೆ ಉದ್ದಾರ ಆಗೋದು ಗ್ಯಾರಂಟಿ; ಸೋತರೂ ಇವ್ರು ನಿಮ್ಮನ್ನು ಬಿಟ್ಟುಕೊಡಲ್ಲ
4 ರಾಶಿಯವರ ಜೊತೆಯಲ್ಲಿದ್ರೆ ಉದ್ದಾರ ಆಗೋದು ಗ್ಯಾರಂಟಿ; ಸೋತರೂ ಇವ್ರು ನಿಮ್ಮನ್ನು ಬಿಟ್ಟುಕೊಡಲ್ಲ
ಜೀವನದಲ್ಲಿ ಯಶಸ್ಸಿಗೆ ಒಳ್ಳೆ ಮಾರ್ಗದರ್ಶನ ಮುಖ್ಯ, 4 ರಾಶಿಯವರು ಚೆನ್ನಾಗಿ ಮಾರ್ಗದರ್ಶನ ಮಾಡ್ತಾರಂತೆ. ಇವರ ಗುಣಗಳು ಬೇರೆಯವರ ಪ್ರಗತಿಗೆ ಸಹಾಯ ಮಾಡುತ್ತವೆ.

4 ರಾಶಿ
ಜೀವನದಲ್ಲಿ ಗೆಲ್ಲೋಕೆ ಒಳ್ಳೆ ಮಾರ್ಗದರ್ಶಕ ಬೇಕು. ಕೆಲವರು ಹುಟ್ಟಿನಿಂದಲೇ ಒಳ್ಳೆ ಮಾರ್ಗದರ್ಶಕರಾಗಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಮಾತ್ರ ಬೇರೆಯವರನ್ನ ಮುಂದೆ ತರೋ ಶಕ್ತಿ ಹೊಂದಿರುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಯಾವಾಗ್ಲೂ ಯೋಚಿಸಿ, ಪ್ಲಾನ್ ಮಾಡಿ ಕೆಲಸ ಮಾಡ್ತಾರೆ. ಹೇಗೆ ಮಾಡಬೇಕು, ಎಲ್ಲಿ ತಪ್ಪಾಯ್ತು, ಅದನ್ನ ಹೇಗೆ ಸರಿ ಮಾಡೋದು ಅನ್ನೋದಕ್ಕೆ ಸರಿಯಾದ ಉತ್ತರ ಕೊಡ್ತಾರೆ. ಒಳ್ಳೆ ಟೀಚರ್ ತರ ಎಲ್ಲಾ ವಿಷಯನೂ ಚೆನ್ನಾಗಿ ಹೇಳಿಕೊಡ್ತಾರೆ. ಹಾಗಾಗಿ ಈ ರಾಶಿಯವರೊಂದಿಗೆ ಇರೋರು ಒಳ್ಳೆ ಮಾರ್ಗದಲ್ಲಿಯೇ ಇರುತ್ತಾರೆ.
ಧನು ರಾಶಿ
ಧನು ರಾಶಿಯವರಿಗೆ ಬದುಕು ಅಂದ್ರೆ ಒಂದು ಸಾಹಸ. ಹೊಸ ವಿಷಯಗಳನ್ನ ಕಲಿಯೋ ಉತ್ಸಾಹ ಇವರಿಗೆ ಜಾಸ್ತಿ. ಹೊಸ ಜಾಗ, ಹೊಸ ಅನುಭವ ಹುಡುಕೋ ಇವರು ಬೇರೆಯವರಿಗೂ ಉತ್ಸಾಹ ತುಂಬುತ್ತಾರೆ. ತಮ್ಮೊಂದಿಗಿರುವ ಜನರು ಹಿಂದುಳಿಯುತ್ತಿದ್ರೂ ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ದೃಢ ಮನಸ್ಸಿನವರು, ಜವಾಬ್ದಾರಿಯುತರು. ಕಷ್ಟಪಟ್ಟರೆ ಜೀವನದಲ್ಲಿ ಮೇಲೆ ಬರಬಹುದು ಅನ್ನೋದನ್ನ ತಮ್ಮ ಬದುಕಿನಲ್ಲೇ ತೋರಿಸ್ತಾರೆ. ಇವರಿಂದ ಕಲಿತವರು ತಾಳ್ಮೆ, ಶ್ರಮ, ನೆಮ್ಮದಿ ಇಟ್ಟುಕೊಳ್ಳೋದನ್ನ ಕಲಿಯುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಹುಟ್ಟಿನಿಂದಲೇ ಲೀಡರ್‌ಗಳು. ಮಾತಿನಲ್ಲೂ, ನಡತೆಯಲ್ಲೂ ಉತ್ಸಾಹ ಇರುತ್ತೆ. ನೀವೂ ಗೆಲ್ಲಬಹುದು ಅನ್ನೋ ಧೈರ್ಯ ತುಂಬ್ತಾರೆ. ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಉದ್ಯಮಿಗಳಿಗೆ ಇವರ ಉತ್ಸಾಹ ದೊಡ್ಡ ಶಕ್ತಿ.