ಪ್ಯಾಂಟ್ನ್ನು ಶರ್ಟ್ನಂತೆ ಧರಿಸಿದ ಉರ್ಫಿ, ಇದೇನಮ್ಮಾ ಅವತಾರ ಅಂತಿದ್ದಾರೆ ನೆಟ್ಟಿಗರು
ನಟಿ ಉರ್ಫಿ ಜಾವೇದ್ ಚಿತ್ರ ವಿಚಿತ್ರ ಡ್ರೆಸ್ನಲ್ಲಿ ಕಾಣಿಸಿಕೊಂಡು ಸುದ್ದಿಯಾಗ್ತಾರೆ. ಇತ್ತೀಚೆಗೆ ರೆಸ್ಟೋರೆಂಟ್ ವೊಂದಕ್ಕೆ ಬಂದಿದ್ದ ಉರ್ಫಿ ವಿಭಿನ್ನ ಡ್ರೆಸ್ ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು. ಜೀನ್ಸ್ ಪ್ಯಾಂಟ್ ನಂತೆ ಕಾಣುವ ಶರ್ಟ್ ಅನ್ನ ಉರ್ಫಿ ಧರಿಸಿದ್ದರು. ಆ ಫೋಟೋಸ್ ಇಲ್ಲಿವೆ.
ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿ ದಿನ ಒಂದಲ್ಲ ಒಂದು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿಯ ಮೈಮಾಟಕ್ಕೆ ಅಪಾರ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ಇತ್ತ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಹಲವರು ಉರ್ಫಿ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆದರೆ ಇದ್ಯಾವುದರ ಕುರಿತು ತಲೆಕೆಡಿಸಿಕೊಳ್ಳದ ಉರ್ಫಿ ಜಾವೇದ್, ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಉರ್ಫಿ ಜಾವೇದ್ ತಮ್ಮ ಡಿಫರೆಂಟ್ ಡ್ರೆಸ್ಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇವರ ಚಿತ್ರ-ವಿಚಿತ್ರ ಡ್ರೆಸ್ಗಳು ಸಾಕಷ್ಟು ನೆಗೆಟಿವ್ ಕಾಮೆಂಟ್ಗಳನ್ನು ಗಳಿಸುತ್ತವೆ. ಹೀಗಿದ್ದೂ ಅವ್ರು ಹೀಗೆ ವಿಚಿತ್ರವಾಗಿ ಡ್ರೆಸ್ ಮಾಡೋದನ್ನು ಮಾತ್ರ ಬಿಡೋದಿಲ್ಲ. ಇತ್ತೀಚಿಗೆ ಉರ್ಫಿ ಜಾವೇದ್ ಡೆನಿಮ್ ಜೀನ್ಸ್ ಅನ್ನು ಟಾಪ್ ಆಗಿ ಧರಿಸಿದ್ದು, ಎಲ್ಲರ ಗಮನ ಸೆಳೀತು.
ಬಳೆಗಳಿಂದ ಮಾಡಿದ ಉಡುಪು, ಪಿನ್ನಿಂದ ಮಾಡಿದ ಡ್ರೆಸ್ನ್ನು ಧರಿಸುವುದರಿಂದ ಹಿಡಿದು ಸೆಲ್ ಫೋನ್ ಮತ್ತು ಕೈಗಡಿಯಾರದಿಂದ ಮಾಡಿದ ಉಡುಪನ್ನೂ ಬಿಗ್ ಬಾಸ್ OTT ಖ್ಯಾತಿಯ ಉರ್ಫಿ ಧರಿಸುತ್ತಾರೆ. ಇತ್ತೀಚಿಗೆ ಉರ್ಫಿ ಡೆನಿಮ್ ಜೀನ್ಸ್ ಅನ್ನು ಟಾಪ್ ಆಗಿ ಧರಿಸಿ ಎಲ್ಲರನ್ನು ಸಂಪೂರ್ಣವಾಗಿ ದಂಗುಬಡಿಸಿದರು.
ಉರ್ಫಿ ತನ್ನ ಜೀನ್ಸ್ಗೆ ಕ್ರಿಯೇಟಿವ್ ಟ್ವಿಸ್ಟ್ ನೀಡಿ ಅದನ್ನು ಟಾಪ್ ಆಗಿ ಧರಿಸಿದ್ದರು. ಇದಕ್ಕೆ ಕೆಂಪು ಕಿವಿಯೋಲೆಗಳನ್ನು ಹಾಕಿಕೊಂಡಿದ್ದರು. ಕೂದಲನ್ನು ಬನ್ನಂತೆ ಕಟ್ಟಿದ್ದರು ತನ್ನ ಉಡುಪಿನ ಬಗ್ಗೆ ಮಾತನಾಡುತ್ತಾ, ಉರ್ಫಿ ತನ್ನ ಜೀನ್ಸ್ ಅನ್ನು ಈ ರೀತಿ ಧರಿಸಬೇಕಾಗಿತ್ತು ಎಂದು ತಿಳಿಸಿದರು. ತಾನು ಧರಿಸಬೇಕಾಗಿದ್ದ ಉಡುಪು ಕ್ಷಣದಲ್ಲಿ ಹಾಳಾಯಿತು ಎಂದರು
ಜುಹುವಿನಲ್ಲಿರುವ ವಿಶೇಷ ರೆಸ್ಟೊರೆಂಟ್ನಲ್ಲಿ ಉರ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ವಿಶೇಷ ಸಾಮರ್ಥ್ಯವುಳ್ಳ ಜನರು ನಿರ್ವಹಿಸುತ್ತಾರೆ. ನಟಿ ಈ ಕೆಫೆಯಲ್ಲಿ ಪಾಪರಾಜಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಕೆಲವೇ ದಿನಗಳ ಹಿಂದೆ, ಉರ್ಫಿ ಜಾವೇದ್ ಅವರು ಕಪ್ಪು ಕೋನ್-ಆಕಾರದ ಸ್ತನಬಂಧವನ್ನು ಸುತ್ತುವ ಮೂಲಕ ಚಿನ್ನದ ಆಭರಣಗಳನ್ನು ಧರಿಸಿದ ಫೋಟೋ ವೈರಲ್ ಆಗಿತ್ತು.
ಉರ್ಫಿ ಜಾವೇದ್ ಅವರು ಬಿಗ್ ಬಾಸ್ OTT ನಲ್ಲಿ ಭಾಗವಹಿಸಿದ ನಂತರ ಖ್ಯಾತಿಗೆ ಏರಿದರು. ಅವರು ಇತ್ತೀಚೆಗೆ ಹೇ ಹೇ ಯೆ ಮಜ್ಬೂರಿ ಎಂಬ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ಸ್ಪ್ಲಿಟ್ಸ್ವಿಲ್ಲಾ 14 ನಲ್ಲಿ ಕಾಣಿಸಿಕೊಂಡಿದ್ದಾರೆ.