MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Life
  • Fashion
  • ಕೊನಾರ್ಕ್‌ ಶಿಲಾ ಬಾಲಿಕೆಯರಾಗಲೇ ಸ್ಕರ್ಟ್ ಧರಿಸಿ ಪರ್ಸ್ ಹಿಡಿದಿದ್ದರು ಎಂದ ಮೋದಿ; ಭಾರತ ಫ್ಯಾಶನ್ ಗುರು ಅನ್ನೋಕೆ ಶಿಲೆಗಳೇ ಸಾಕ್ಷಿ

ಕೊನಾರ್ಕ್‌ ಶಿಲಾ ಬಾಲಿಕೆಯರಾಗಲೇ ಸ್ಕರ್ಟ್ ಧರಿಸಿ ಪರ್ಸ್ ಹಿಡಿದಿದ್ದರು ಎಂದ ಮೋದಿ; ಭಾರತ ಫ್ಯಾಶನ್ ಗುರು ಅನ್ನೋಕೆ ಶಿಲೆಗಳೇ ಸಾಕ್ಷಿ

ಭಾರತವು ಫ್ಯಾಷನ್ ಜಗತ್ತಿನಲ್ಲಿ ಮುಂಚಿನಿಂದಲೂ ಅಗ್ರಸ್ಥಾನದಲ್ಲಿದೆ ಎಂದ ಪ್ರಧಾನಿ ಮೋದಿ, ಇಂದು ಜನರು ಮಿನಿ ಸ್ಕರ್ಟ್ ಆಧುನಿಕತೆಯ ಸಂಕೇತವೆಂದು ಭಾವಿಸುವವರು ಕೊನಾರ್ಕ್‌ಗೆ ಹೋಗಿ ನೋಡಿ, ಅಲ್ಲಿ ನೂರಾರು ವರ್ಷಗಳ ಹಿಂದಿನ ದೇವಾಲಯಗಳಲ್ಲಿ ಅನೇಕ ಪ್ರತಿಮೆಗಳು ಸ್ಕರ್ಟ್ ಧರಿಸಿ ಬ್ಯಾಗ್ ಹಿಡಿದಿವೆ ಎಂದಿದ್ದಾರೆ. ಶಿಲಾಬಾಲಿಕೆಗಳ ಫ್ಯಾಶನ್ ಝಲಕ್ ನೋಡಿ ಬರೋಣ.

2 Min read
Author : Suvarna News
| Updated : Mar 11 2024, 11:34 AM IST
Share this Photo Gallery
  • FB
  • TW
  • Linkdin
  • Whatsapp
19

ಶುಕ್ರವಾರ ನವದೆಹಲಿಯ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ರಾಷ್ಟ್ರೀಯ ಕ್ರಿಯೇಟರ್ ಅವಾರ್ಡ್‌ಗಳನ್ನು ನೀಡಿದರು. ಜಾಹ್ನ್ವಿ ಸಿಂಗ್ ಅವರಿಗೆ 'ಹೆರಿಟೇಜ್ ಫ್ಯಾಶನ್ ಐಕಾನ್ ಅವಾರ್ಡ್' ಪ್ರದಾನ ಮಾಡುವಾಗ, ಮೋದಿ ಅವರು ಫ್ಯಾಷನ್ ಜಗತ್ತಿನಲ್ಲಿ ಭಾರತವು ಹಿಂದಿನಿಂದಲೂ ಮುಂಚೂಣಿಯಲ್ಲಿದೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಇಂದು ಜನರು ಮಿನಿ ಸ್ಕರ್ಟ್ ಆಧುನಿಕತೆಯ ಸಂಕೇತವೆಂದು ಭಾವಿಸುತ್ತಾರೆ, ಅಥವಾ ಪರ್ಸ್ ಹಿಡಿದಿರುವ ಮಹಿಳೆಯರು ಮಾಡರ್ನ್ ಎಂದುಕೊಳ್ಳುತ್ತಾರೆ. ನೀವು ಕೋನಾರ್ಕ್‌ಗೆ ಹೋದರೆ ನೂರಾರು ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಅನೇಕ ಪ್ರತಿಮೆಗಳಿವೆ. ಒಂದು ಪ್ರತಿಮೆಯು ಮಿನಿ ಸ್ಕರ್ಟ್ ಧರಿಸಿ ಮತ್ತು ಕೈಲಿ ಪರ್ಸ್ ಹಿಡಿದ ಹುಡುಗಿಯ ಪ್ರತಿಮೆಯಾಗಿದೆ. ಇದರರ್ಥ ನೂರಾರು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ ಒಬ್ಬ ಶಿಲ್ಪಿ ಕೂಡ ಫ್ಯಾಷನ್ ಜ್ಞಾನವನ್ನು ಹೊಂದಿದ್ದರು ಎಂದಿದ್ದಾರೆ.

39

ಫ್ಯಾಷನ್ ಎಂಬುದು ಭಾರತದಲ್ಲಿ ಪಾಶ್ಚಿಮಾತ್ಯರು ಪರಿಚಯಿಸಿದ ವಿಷಯ ಎಂದು ನಾವು ನಂಬುವಂತೆ ಹೇಳಲಾಗುತ್ತದೆ. ಆದರೆ, ಭಾರತದ ಪ್ರತಿ ಕಲ್ಲುಗಳೂ ಇಲ್ಲಿನ ಫ್ಯಾಶನ್ ಸೆನ್ಸ್ ಬಗ್ಗೆ ಒತ್ತಿ ಹೇಳುತ್ತವೆ.
 

49

ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿದ್ದ ಫ್ಯಾಶನ್‌ನ್ನು ಒಮ್ಮೆ ಶಿಲಾಬಾಲಿಕೆಯರ ಮುಖೇನ ನೋಡಿ ಬರೋಣ. ಇದೋ ನೋಡಿ, ಕೊನಾರ್ಕ್‌ನಲ್ಲಿರುವ ಶಿಲೆ- ಇಲ್ಲಿ ಮಹಿಳೆ ಆದಲೇ ಸೀ ತ್ರೂ ಟೈಟ್ ಸ್ಕರ್ಟ್(ಪಾರದರ್ಶಕ ಬಿಗಿಯಾದ ಸ್ಕರ್ಟ್) ಧರಿಸಿದ್ದಾಳೆ. 

59

ಶತಮಾನಗಳಷ್ಟು ಹಳೆಯದಾದ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗ್ರಂಥಗಳು ಭಾರತದಲ್ಲಿ ಪಾದರಕ್ಷೆಗಳ ಬಳಕೆಯನ್ನು 200 BC ಯಷ್ಟು ಹಿಂದೆಯೇ ಗುರುತಿಸುತ್ತವೆ. ತೆಲಂಗಾಣದ ವಾರಂಗಲ್‌ನಲ್ಲಿರುವ ರಾಮಪ್ಪ ದೇವಾಲಯದಲ್ಲಿ ಹೈ ಹೀಲ್ಸ್ ಧರಿಸಿದ ಮಹಿಳೆಯನ್ನು ಕಾಣಬಹುದು.

69

ಈಕೆ ನೋಡಿ ದರ್ಪಣ ಸುಂದರಿ. ಭಾರತೀಯ ಮಹಿಳೆಯರ ಸೌಂದರ್ಯ ಪ್ರಜ್ಞೆ ಅನಾದಿ ಕಾಲದಿಂದಲೂ ಅದ್ಬುತವಾಗಿದೆ. ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡಿಕೊಂಡು, ಕೂದಲು ಸರಿ ಮಾಡಿಕೊಳ್ಳುತ್ತಿರುವ ಮಹಿಳೆ. 

79

ಇಲ್ಲಿ ನಿಂತಾಕೆಯ ಹೇರ್‌ಸ್ಟೈಲ್ ನೋಡಿದ್ರಾ ? ಅದಾಗಲೇ ಬಾಬ್ ಕಟ್ ಮಾಡಿಕೊಂಡು, ಅಗಲವಾಗಿ ಹರಡಿ, ಲೇಯರ್‌ಗಳಲ್ಲಿ ಕರ್ಲ್ಸ್ ಸೆಟ್ ಮಾಡಿಕೊಂಡಿದ್ದಾಳೆ. 

89

ಇದೋ ಈ ಪ್ರತಿಮೆ, ಹೆಂಗಸು ಮಗುವನ್ನು ಅತ್ಯಂತ ಕಾಳಜಿಯಿಂದ ಹಿಡಿದುಕೊಂಡು, ಎಡಗೈಯಲ್ಲಿ ನೇಯ್ದ ಚೀಲವನ್ನು ಹಿಡಿದಿದ್ದಾಳೆ. ಬಹುಷಃ ಮಗುವಿನೊಂದಿಗೆ ಶಾಪಿಂಗ್‌ಗೆ ಹೊರಟಿರಬಹುದೇ?

99

ಮಧ್ಯಪ್ರದೇಶದ ಖಜುರಾಹೊ ದೇವಸ್ಥಾನದಲ್ಲಿರುವ ಈ ಶಿಲಾಬಾಲಿಕೆಯರ ಸೌಂದರ್ಯ ಪ್ರಜ್ಞೆ ಗಮನಿಸಿ, ಒಬ್ಬ ಮಹಿಳೆ ತನ್ನ ಕಣ್ಣುಗಳಿಗೆ ಮಸ್ಕರಾವನ್ನು ಹಚ್ಚುತ್ತಿದ್ದಾಳೆ. ಹತ್ತಿರದ ಸಣ್ಣ ಪ್ರತಿಮೆಯಲ್ಲಿ, ಮಹಿಳೆ ಸ್ಲಿಂಗ್ ಬ್ಯಾಗ್ ಹಿಡಿದಿದ್ದಾಳೆ. ಅಂದರೆ ಈ ಫ್ಯಾಶನ್ ಸಾವಿರಾರು ವರ್ಷಗಳ ಹಿಂದಿನಿಂದಲೇ ಭಾರತದಲ್ಲಿದೆ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಫ್ಯಾಷನ್
ಭಾರತ

Latest Videos
Recommended Stories
Recommended image1
Gold Earrings: ಹಾರ್ಟ್ ಶೇಪ್ ಹ್ಯಾಂಗಿಂಗ್ ಡಿಸೈನ್, ಈ ಓಲೆ ನೋಡಿದ್ರೆ ಸಾಕು ಎಲ್ಲರ ಕಣ್ಣು ನಿಮ್ಮ ಮೇಲೇ!
Recommended image2
Gold Chain: ಜಸ್ಟ್ 3 ಗ್ರಾಂ ಚಿನ್ನದಲ್ಲಿ ಸಿಗುತ್ತೆ ಈ ಚೈನ್: ಇಲ್ಲಿವೆ ನೋಡಿ ಕ್ಯೂಟ್ ಡಿಸೈನ್‌ಗಳು
Recommended image3
Baby Anklets: ಪುಟಾಣಿ ಪಾದಗಳಿಗೆ ಮುದ್ದಾದ ಬೆಳ್ಳಿ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved