ಅಬ್ಬಬ್ಬಾ..ಮಕ್ಕಳನ್ನು ಸ್ಕೂಲಿಗೆ ಬಿಡೋಕೆ ಇಶಾ ಅಂಬಾನಿ ಹಾಕ್ಕೊಂಡು ಬಂದ ಕುರ್ತಾ ಬೆಲೆ ಇಷ್ಟೊಂದಾ?
ಬಿಲಿಯನೇರ್ ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ. ಅಂಬಾನಿ ಗ್ರೂಪ್ನ ಹಲವು ಬಿಸಿನೆಸ್ನ್ನು ನಿರ್ವಹಿಸ್ತಾರೆ. ಸಿಕ್ಕಾಪಟ್ಟೆ ಲಕ್ಸುರಿಯಸ್ ಲೈಫ್ಸ್ಟೈಲ್ ಫಾಲೋ ಮಾಡೋ ಇಶಾ, ತಾವು ಧರಿಸೋ ಬಟ್ಟೆಗಳಿಗೇ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ.
ಮುಕೇಶ್ ಅಂಬಾನಿ ಇಡೀ ಏಷ್ಯಾದ ಶ್ರೀಮಂತ ವ್ಯಕ್ತಿ. ತಮ್ಮ ವಿವಿಧ ಉದ್ಯಮಗಳ ಮೂಲಕ ಮುಕೇಶ್ ಅಂಬಾನಿ 963 ಕೋಟಿ ರೂ.ಗಳ ಆಸ್ತಿಯನ್ನು ಗಳಿಸಿದ್ದಾರೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿಯ ಮೂವರು ಮಕ್ಕಳಲ್ಲಿ ಇಶಾ ಅಂಬಾನಿ ಸಹ ಒಬ್ಬರು.
ಬಿಲಿಯನೇರ್ ಮುಕೇಶ್ ಅಂಬಾನಿ-ನೀತಾ ಅಂಬಾನಿಯ ಏಕೈಕ ಪುತ್ರಿ. ರಿಲಯನ್ಸ್ ಇಂಡಸ್ಟ್ರೀಸ್ ಬೆಳವಣಿಗೆಯ ಪ್ರಮುಖ ಭಾಗವಾಗಿದ್ದಾರೆ. ಅಂಬಾನಿ ಗ್ರೂಪ್ನ ಹಲವು ಬಿಸಿನೆಸ್ನ್ನು ನಿರ್ವಹಿಸ್ತಾರೆ. ಸಿಕ್ಕಾಪಟ್ಟೆ ಲಕ್ಸುರಿಯಸ್ ಲೈಫ್ಸ್ಟೈಲ್ ಫಾಲೋ ಮಾಡೋ ಇಶಾ, ತಾವು ಧರಿಸೋ ಬಟ್ಟೆಗಳಿಗೇ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ.
ಹಾಗೆಯೇ ಇತ್ತೀಚಿಗೆ ಇಶಾ ಅಂಬಾನಿ, ಶಾಲೆ ಆರಂಭದ ಮೊದಲ ದಿನ ತಮ್ಮ ಮಕ್ಕಳನ್ನು ಸ್ಕೂಲ್ಗೆ ಬಿಡಲು ಬಂದಿದ್ದರು. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಸಿಂಪಲ್ ಕುರ್ತಾ ಸೆಟ್ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇಶಾ ಅಂಬಾನಿ ಆನಂದ್ ಪಿರಮಾಲ್ ಮತ್ತು ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡರು. ಅವರು ಸರಳವಾದ ಕುರ್ತಾ ಸೆಟ್ನ್ನು ಧರಿಸಿದ್ದರು. ನೋ ಮೇಕಪ್ ಲುಕ್ನಲ್ಲಿ ಕಾಣಿಸಿಕೊಂಡರು.
ಇಶಾ ಧರಿಸಿರುವ ಕುರ್ತಾ ಮತ್ತು ಪಲಾಝೋ ಸೆಟ್ ರಿಧಿಯೀ ಸೂರಿ ಅವರ ಬ್ರ್ಯಾಂಡ್ 'ಡ್ರಝಿಯ ಶೆಲ್ಫ್'ನಿಂದ ಆಯ್ಕೆ ಮಾಡಲಾಗಿದೆ. ಈ ಸೆಟ್ನ್ನು ಹೂರ್ ಹ್ಯಾಂಡ್ ಬ್ಲಾಕ್ ಪ್ರಿಂಟೆಡ್ (ಬ್ಲೂ ಬೂಟಾ) ಕುರ್ತಾ ಎಂದು ಕರೆಯಲಾಗುತ್ತದೆ. ತೀರಾ ಸಿಂಪಲ್ ಆಗಿ ಕಾಣೋ ಈ ಕುರ್ತಾ ಸೆಟ್ ಬೆಲೆ ಬರೋಬ್ಬರಿ 9,600 ರೂ. ಆಗಿದೆ.
ಕುರ್ತಾ ಸೆಟ್ ಬಿಳಿ ಮೇಲ್ಮೈನಲ್ಲಿ ಸಿಂಪಲ್ ಡಿಸೈನ್ನ್ನು ಹೊಂದಿದ್ದು, ನೀಲಿ ಮತ್ತು ಹಸಿರು ವರ್ಣಗಳಲ್ಲಿ ಹ್ಯಾಂಡ್ ಬ್ಲಾಕ್ ಪ್ರಿಂಟ್ ಎಲೆ ಮತ್ತು ಹೂವಿನ ಮಾದರಿಗಳಲ್ಲಿ ಬರುತ್ತದೆ . ಜೊತೆಗೆ ವೈಟ್ ಪಲಾಝೋವನ್ನು ಒಳಗೊಂಡಿದೆ. ಬೇಸಿಗೆಗೆ ಹೇಳಿ ಮಾಡಿಸಿದ ಬಟ್ಟೆಯಂತಿದೆ.
ಇಶಾ ಕುರ್ತಾ ಮತ್ತು ಪಲಾಝೊ ಸೆಟ್ ಜೊತೆಗೆ ನಯವಾದ ಚಿನ್ನದ ಸರ, ಹೊಂದಿಕೆಯಾಗುವ ಬಳೆಗಳು, ತನ್ನ ಮಗಳು ಆದಿಯಾ ಹೆಸರಿನ ಮೊನೊಗ್ರಾಮ್ ಹೊಂದಿರುವ ಗೋಯಾರ್ಡ್ ಟೋಟ್ ಬ್ಯಾಗ್ ಮತ್ತು ಹಸಿರು ಬಣ್ಣದ ಶೂ ಧರಿಸಿದ್ದರು.
ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಾಮಲ್ ದಂಪತಿ 12 ಡಿಸೆಂಬರ್ 2018ರಂದು ಅದ್ಧೂರಿಯಾಗಿ ಮದುವೆಯಾದರು. ನವೆಂಬರ್ 19, 2022ರಂದು ಇಶಾ ಅಂಬಾನಿ, ಕೃಷ್ಣ ಮತ್ತು ಆದಿಯಾಗೆ ಜನ್ಮ ನೀಡಿದರು.