ರಂಗು ರಂಗಿನ ವೇದಿಕೆಯಲ್ಲಿ ವಿದ್ಯಾರ್ಥಿಗಳ ಫ್ಯಾಷನ್ ಝಲಕ್
ರಂಗು ರಂಗಿನ ದುನಿಯಾದಲ್ಲಿ ಫ್ಯಾಷನೆಬಲ್ (Fashionable) ಆಗಿರೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸ್ಟೈಲಿಶ್ ದಿರಿಸು, ಸ್ಟೈಲಿಶ್ ಲುಕ್ ಎಲ್ಲರಿಗೂ ಬೇಕು. ಕೆಎಲ್ಇ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳು (Students) ತಾವೇ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿ, ರಂಗು ರಂಗಿನ ವೇದಿಕೆಯಲ್ಲಿ ಫ್ಯಾಷನ್ ಶೋ (Fashion show) ನಡೆಸಿದ್ರು. ಹೇಗಿತ್ತು ಆ ಝಲಕ್.
ರಂಗು ರಂಗಿನ ವೇದಿಕೆ, ಅಲ್ಲಿ ಬಣ್ಣ ಬಣ್ಣದ ಹೊಸ ವಿನ್ಯಾಸದ ತೊಡುಗೆ, ಇವು ಪ್ರತಿಬಿಂಬ ಕಾರ್ಯಕ್ರಮದಲ್ಲಿ ಕಂಡ ನೋಟ. ಭಿನ್ನ-ವಿಭಿನ್ನ ದಿರಿಸುಗಗಳು ಎಲ್ಲರ ಗಮನ ಸೆಳೆದವು.
ಕೆಎಲ್ಇ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿಗಳು ಡಿಸೈನ್ ಮಾಡಿದ್ದ ಉಡುಗೆಗಳನ್ನು ಅದೇ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೊಟ್ಟು ಸಂಭ್ರಮಿಸಿದರು.
ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ವಿದ್ಯಾರ್ಥಿಗಳು ತಾವೇ ಡಿಸೈನ್ ಮಾಡಿದ್ದ ಉಡುಗೆಗಳನ್ನು ಅನಾವರಣ ಮಾಡಿದರು.
ಪ್ರಖ್ಯಾತ ಫ್ಯಾಷನ್ ಡಿಸೈನರ್ ಗಳು ಆಗುವ ಕನಸು ಕಂಡಿರುವ ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಹೊಸ ಉಡುಗೆಗಳನ್ನು ತಯಾರು ವಿನ್ಯಾಸ ಮಾಡಿದ್ದರು. ಆಧುನಿಕ, ಸಾಂಪ್ರದಾಯಿಕ ಶೈಲಿ ಸೇರಿದಂತೆ ಎಲ್ಲ ರೀತಿಯ ಉಡುಗೆಗಳು ಇಲ್ಲಿ ನೋಡಲು ಸಿಕ್ಕವು.
ಕೆಎಲ್ ಇ ಸಂಸ್ಥೆಯ ಅಂತಿಮ ವಿಭಾಗದ 28 ವಿದ್ಯಾರ್ಥಿಗಳು ಡಿಸೈನ್ ಮಾಡಿದ್ದ ಉಡುಗೆಗಳನ್ನು ಅದೇ ಕಾಲೇಜಿನ 130 ಮಾಡೆಲ್ ಗಳು ರಾಂಪ್ ವಾಕ್ ಮಾಡುವ ಮೂಲಕ ಅನಾವರಣ ಮಾಡಿದರು.