ಮನೆಯಲ್ಲಿಯೇ ಈ ಹೇರ್ ಸೀರಮ್ ಮಾಡಿ… ವಾರದಲ್ಲೇ ಉದ್ದ ಕೂದಲು ನಿಮ್ಮದಾಗುತ್ತೆ
ಮನೆಯಲ್ಲಿಯೇ ಸಿಂಪಲ್ ಆಗಿ ಮಾಡುವಂತಹ ಹೇರ್ ಸೀರಮ್ ರೆಸಿಪಿ ಇಲ್ಲಿದೆ. ಇದನ್ನ ಕೂದಲಿಗೆ ಹಚ್ಚಿದ್ರೆ ಒಂದೇ ವಾರದಲ್ಲಿ ರಿಸಲ್ಟ್ ಗೊತ್ತಾಗುತ್ತೆ.

ಪುರುಷರು ಅಥವಾ ಮಹಿಳೆಯರು ಇರಲಿ, ಎಲ್ಲರೂ ತಮ್ಮ ಕೂದಲು ಯಾವಾಗಲೂ ದಟ್ಟವಾಗಿರಬೇಕು (healthy long hair)ಎಂದು ಬಯಸುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಬದಲಾಗಿದೆ, ಮಾಲಿನ್ಯ ಹೆಚ್ಚಾಗಿದೆ ಮತ್ತು ಆಹಾರ ಪದ್ಧತಿ ಬದಲಾಗಿದೆ. ಇವೆಲ್ಲವೂ ನಮ್ಮ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ವಿಶೇಷವಾಗಿ ಶ್ಯಾಂಪೂ, ಕಂಡೀಶನರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಮಿಕಲ್ ಬಳಕೆಯಾಗೋದರಿಂದ ನಮ್ಮ ಕೂದಲು ಡ್ರೈ ಆಗುತ್ತಿವೆ, ನಿರ್ಜೀವವಾಗುತ್ತಿವೆ, ಸುಲಭವಾಗಿ ಒಡೆದು, ತುಂಬಾನೆ ವೀಕ್ ಆಗುತ್ತಿವೆ.
ಅದಕ್ಕಾಗಿಯೇ ತಜ್ಞರೊಬ್ಬರು ನೀವು ಮನೆಯಲ್ಲಿಯೇ ಮಾಡಬಹುದಾದಂತಹ ಹೇರ್ ಸೀರಮ್ (hair serum) ಬಗ್ಗೆ ಇಲ್ಲಿ ತಿಳಿಸಿದ್ದಾರೆ. ನೀವು ಈ ಹೇರ್ ಸೀರಮ್ ಅನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಹಚ್ಚಬಹುದು. ನಿಮ್ಮ ಕೂದಲಿನ ಬೇರುಗಳಿಗೆ ಸರಿಯಾಗಿ ಹಚ್ಚಿ. ಈ ಕೂದಲಿನ ಸೀರಮ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು, ಅವುಗಳ ವಿನ್ಯಾಸವನ್ನು ಸುಧಾರಿಸಲು ಮತ್ತು ಅವುಗಳ ಹೊಳಪನ್ನು ಸುಧಾರಿಸಲು ಸಹಾಯ ಮಾಡುತ್ತೆ. ಈ ಹೇರ್ ಸೀರಮ್ ಬಳಕೆ ಮಾಡೋದ್ರಿಂದ ಮತ್ತೊಂದು ಮುಖ್ಯವಾದ ಬದಲಾವಣೆ ಏನಾಗುತ್ತೆ ಅಂದ್ರೆ, ಒಂದೇ ವಾರದೊಳಗೆ ಈ ಸೀರಮ್ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ ಮತ್ತು ಒಂದು ತಿಂಗಳ ನಿರಂತರ ಬಳಕೆಯ ನಂತರ, ನಿಮ್ಮ ಕೂದಲಿನ ಆರೋಗ್ಯದಲ್ಲಿ ಸ್ಪಷ್ಟ ವ್ಯತ್ಯಾಸವನ್ನ ನೀವು ಖಂಡಿತವಾಗಿಯೂ ನೋಡುತ್ತೀರಿ.
ಈ ಹೇರ್ ಸೀರಮ್ ಮಾಡಲು ಏನೆಲ್ಲಾ ಬೇಕು?
ಅಕ್ಕಿ - 2 ಚಮಚಗಳು
ಮೆಂತ್ಯ ಬೀಜಗಳು - 2 ಚಮಚಗಳು
ಕಲೌಂಜಿ ಬೀಜಗಳು - 1 ಚಮಚ
ನೀರು - 1 ದೊಡ್ಡ ಲೋಟ
ಒಣಗಿದ ದಾಸವಾಳ ಹೂವುಗಳು - 2 ಚಮಚ
ರೋಸ್ಮರಿ ಎಲೆಗಳು - 1 ಚಮಚ
ವಿಟಾಮಿನ್ ಇ ಕ್ಯಾಪ್ಸುಲ್
ಹೇರ್ ಸೀರಮ್ ತಯಾರಿಸುವ ವಿಧಾನ
- ಮೊದಲನೆಯದಾಗಿ, ರಾತ್ರಿ ಮಲಗುವ ಮುನ್ನ, ಒಂದು ದೊಡ್ಡ ಲೋಟ ನೀರಿನಲ್ಲಿ 2 ಚಮಚ ಅಕ್ಕಿ, 2 ಚಮಚ ಮೆಂತ್ಯ ಮತ್ತು 2 ಚಮಚ ಕಲೌಂಜಿ ಬೀಜಗಳನ್ನು ಬೆರೆಸಿ ರಾತ್ರಿಯಿಡೀ ನೆನೆಯಲು ಬಿಡಿ.
- ಮರುದಿನ, ಈ ಮೂರು ಬೀಜಗಳನ್ನು ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ ನಂತರ ಉಳಿದ ಪದಾರ್ಥಗಳು ಅಂದರೆ ಡ್ರೈಆಗಿರುವ ದಾಸವಾಳದ ಹೂವುಗಳು ಮತ್ತು ರೋಸ್ಮರಿ ಎಲೆಗಳನ್ನು (rosemary leaves) ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ.
- ಪ್ಯಾನ್‌ನಲ್ಲಿರುವ ನೀರು ಅರ್ಧದಷ್ಟು ಆಗುವವರೆಗೆ ಎಲ್ಲವನ್ನೂ ಕುದಿಸಿ.
- ನಂತರ ಅದನ್ನು ಸೋಸಿ ಒಂದು ಬಟ್ಟಲು ಅಥವಾ ಗಾಜಿನಲ್ಲಿ ತೆಗೆದುಕೊಂಡು, ನಂತರ ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಸೇರಿಸಿ.
- ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಇರಿಸಿ.
- ಈ ಹೇರ್ ಸೀರಮ್ ಅನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಕೂದಲಿನ ಬೇರುಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.
- ಇದನ್ನು ಮಾಡೋದ್ರಿಂದ ಒಂದು ವಾರದಲ್ಲಿ ಪರಿಣಾಮಕಾರಿ ರಿಸಲ್ಟ್ ಪಡೆಯಬಹುದು.
ನಿಮ್ಮ ಕೂದಲಿಗೆ ಅಕ್ಕಿ ಮತ್ತು ಮೆಂತ್ಯವನ್ನು (fenugreek seeds) ಬಳಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಹೇಳೋದಾದರೆ, ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ನೆತ್ತಿಯನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಸಲು ಮತ್ತು ಕೂದಲು ಸಿಲ್ಕಿ ಮತ್ತು ಶೈನ್ ಆಗಲು ಸಹಾಯ ಮಾಡುತ್ತದೆ.
ಮತ್ತೊಂದೆಡೆ, ಕೂದಲಿಗೆ ಮೆಂತ್ಯ ಸೀರಮ್ ಬಳಸುವುದರಿಂದ ಕೂದಲು ಉದುರುವುದು (hair loss) ಕಡಿಮೆಯಾಗುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ನೀವು ಇದನ್ನು ಪ್ರತಿದಿನ ಬಳಸುವುದರಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು.