ತಲೆಗೆ ಮೆಹಂದಿ ಹಚ್ಚಿದ ಮೇಲೆ ಈ ಕೆಲ್ಸ ಮಾಡಿಲ್ಲ ಅಂದ್ರೆ ಕೂದಲುದುರೋದು ಗ್ಯಾರಂಟಿ
Hair care : ಬಹಳ ಹಿಂದಿನಿಂದ್ಲೂ ಕೂದಲಿನ ಸೌಂದರ್ಯ ಕಾಪಾಡಲು ಮೆಹಂದಿ ಬಳಸ್ತಿದ್ದಾರೆ. ಕೂದಲು ನೈಸರ್ಗಿಕವಾಗಿ ಕಪ್ಪಾಗಿ, ದಟ್ಟವಾಗಿ ಮತ್ತು ಹೊಳೆಯುವಂತೆ ಮಾಡಲು ಹಲವರು ಮೆಹಂದಿ ಬಳಸುತ್ತಾರೆ. ಕೂದಲಿಗೆ ಮೆಹಂದಿ ಬಳಸುವ ಮುನ್ನ ಕೆಲ ರೂಲ್ಸ್ ಫಾಲೋ ಮಾಡ್ಬೇಕು.

ಕೂದಲಿಗೆ ಮೆಹಂದಿ
ಕೂದಲು ಬೆಳ್ಳಗಾಗ್ತಿದ್ದಂತೆ ಅನೇಕರು ಕೂದಲಿಗೆ ಮೆಹಂದಿ ಬಳಸಲು ಶುರು ಮಾಡ್ತಾರೆ. ಮೆಹಂದಿ ಬರೀ ನಿಮ್ಮ ಬಿಳಿ ಕೂದಲನ್ನು ಮರೆಮಾಚೋದಿಲ್ಲ. ಅದು ನಿಮ್ಮ ಕೂದಲಿನ ಸೌಂದರ್ಯ ಹೆಚ್ಚಿಸಿ, ದಟ್ಟ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತೆ. ಆದ್ರೆ ಮೆಹಂದಿ ಹಚ್ಚುವ ಮೊದಲು ಸರಿಯಾದ ವಿಧಾನ ತಿಳಿದಿರಬೇಕು. ಕೆಲವು ಸಣ್ಣ ತಪ್ಪುಗಳಿಂದ ಕೂದಲು ಒಣಗಬಹುದು.
ಮೆಹಂದಿ ಹಚ್ಚಿದ ನಂತರ ಕೂದಲು ಬಿಡ್ಬೇಡಿ
ಸಾಮಾನ್ಯವಾಗಿ ಮನೆಯಲ್ಲಿ ಮೆಹಂದಿ ಹಚ್ಚಿಕೊಂಡ ನಂತರ ಕೂದಲನ್ನು ಹಾಗೆಯೇ ತೆರೆದಿಟ್ಟುಕೊಳ್ಳುವ ಅಭ್ಯಾಸ ಹಲವರಿಗಿದೆ. ಆದರೆ ಇದು ಸರಿಯಾದ ವಿಧಾನವಲ್ಲ ಎನ್ನುತ್ತಾರೆ ತಜ್ಞರು. ಮೆಹಂದಿಯನ್ನು ಕೂದಲಿಗೆ ಹಚ್ಚಿದ ತಕ್ಷಣ ಪ್ಲಾಸ್ಟಿಕ್ ಕವರ್ನಿಂದ ಕೂದಲನ್ನು ಚೆನ್ನಾಗಿ ಮುಚ್ಚಬೇಕು. ಹೀಗೆ ಮಾಡುವುದರಿಂದ ಮೆಹಂದಿ ಕೂದಲಿನ ಮೇಲೆ ಸರಿಯಾಗಿ ಉಳಿಯಲು ಸಹಾಯವಾಗುತ್ತೆ. ಕೂದಲನ್ನು ಹಾಗೆ ಬಿಟ್ರೆ ಮೆಹಂದಿ ಬೇಗ ಒಣಗುತ್ತೆ, ಬಣ್ಣ ನಿರೀಕ್ಷಿಸಿದಷ್ಟು ಚೆನ್ನಾಗಿ ಬರೋದಿಲ್ಲ.
ಸಮಯದ ಮಿತಿ
ಕೂದಲಿಗೆ ಹೆಚ್ಚು ಬಣ್ಣ ಬರ್ಲಿ ಎನ್ನುವ ಕಾರಣಕ್ಕೆ ಕೆಲವರು ಮೆಹಂದಿಯನ್ನು ಹೆಚ್ಚು ಸಮಯ ಇಟ್ಕೊಳ್ತಾರೆ. ಆದ್ರೆ ಅದು ತಪ್ಪು ಕಲ್ಪನೆ. 4-5 ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಮೆಹಂದಿ ಇಟ್ಟುಕೊಂಡ್ರೆ ಪ್ರಯೋಜನವಿಲ್ಲ. ನೀವು ಮೆಹಂದಿಯನ್ನು ಹಚ್ಚಿ ಸುಮಾರು 2 ರಿಂದ 3 ಗಂಟೆಗಳವರೆಗೆ ಮಾತ್ರ ಬಿಡಬೇಕು. ನಂತ್ರ ಕೂದಲನ್ನು ಚೆನ್ನಾಗಿ ತೊಳೆಯಬೇಕು. ಹೆಚ್ಚು ಸಮಯ ಮೆಹಂದಿ ಕೂದಲಿನಲ್ಲಿ ಉಳಿದರೆ ಕೂದಲು ಒಣಗಬಹುದು ಮತ್ತು ಡ್ರೈನೆಸ್ ಸಮಸ್ಯೆ ಕಾಣಿಸಿಕೊಳ್ಳಬಹುದು.
ಈ ಎರಡು ವಿಷಯ ನೆನಪಿರಲಿ
ಮೆಹಂದಿ ಹಚ್ಚಿದ ನಂತರ ಕೂದಲನ್ನು ಕವರ್ ಮಾಡುವುದು ಮತ್ತು ಸರಿಯಾದ ಸಮಯಕ್ಕೆ ತೊಳೆಯುವುದು ಬಹಳ ಮುಖ್ಯ. ಮೆಹಂದಿ ನೈಸರ್ಗಿಕವಾಗಿದ್ದರೂ ಪ್ರತಿಯೊಬ್ಬರ ಕೂದಲು ಮತ್ತು ನೆತ್ತಿಯ ಸ್ವಭಾವ ಒಂದೇ ಆಗಿರುವುದಿಲ್ಲ. ಮೊದಲ ಬಾರಿ ಬಳಸುತ್ತಿದ್ದರೆ ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

