Kannada

ನೈಸರ್ಗಿಕ ಸೌಂದರ್ಯವರ್ಧಕ ಆಲೂಗಡ್ಡೆ

ಹಸಿ ಆಲೂಗಡ್ಡೆಯಲ್ಲಿರುವ ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ ಮತ್ತು ಕ್ಯಾಟೆಕೋಲೇಸ್ ಎಂಬ ಎಂಜೈಮ್ ಮುಖದ ಮೇಲಿನ ಕಪ್ಪು ಕಲೆಗಳನ್ನು ಮತ್ತು ಪಿಗ್ಮೆಂಟೇಶನ್ ಹೋಗಲಾಡಿಸಲು ಸಹಕಾರಿ.     

Kannada

ನೇರ ಬಳಕೆ ಮಾಡಿ

ಆಲೂಗಡ್ಡೆಯನ್ನ ತೆಳುವಾಗಿ ಸ್ಲೈಸ್ ಮಾಡಿ. ಅದರ ಮೇಲೆ ಸ್ವಲ್ಪ ನೀರು ಅಥವಾ ಗುಲಾಬಿ ನೀರನ್ನು ಸಿಂಪಡಿಸಿ. ಕಲೆಗಳಿರುವ ಜಾಗದಲ್ಲಿ 5-7 ನಿಮಿಷ ಮೆಲ್ಲಗೆ ಮಸಾಜ್ ಮಾಡಿ, ನಂತರ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. 

Image credits: instagram
Kannada

ಆಲೂಗಡ್ಡೆ ಮತ್ತು ನಿಂಬೆ ರಸ

ಪಿಗ್ಮೆಂಟೇಶನ್ ವೇಗವಾಗಿ ಕಡಿಮೆ ಮಾಡಲು ಇದು ಬೆಸ್ಟ್! 2 ಚಮಚ ಆಲೂಗಡ್ಡೆ ರಸಕ್ಕೆ 1 ಚಮಚ ನಿಂಬೆ ರಸ ಬೆರೆಸಿ ಹತ್ತಿಯಿಂದ ಕಲೆಗಳ ಮೇಲೆ ಹಚ್ಚಿ. ನಿಂಬೆಯ ನೈಸರ್ಗಿಕ ಬ್ಲೀಚಿಂಗ್ ಗುಣವು ಮುಖಕ್ಕೆ ಹೊಳಪು ನೀಡುತ್ತದೆ.

Image credits: Pixabay
Kannada

ಆಲೂಗಡ್ಡೆ-ಜೇನುತುಪ್ಪ

ತ್ವಚೆ ಒಣಗಿದಂತಿದ್ದರೆ  2 ಚಮಚ ಆಲೂಗಡ್ಡೆ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ. ಇದು ಮುಖವನ್ನು ತೇವವಾಗಿರಿಸುತ್ತದೆ.

Image credits: Getty
Kannada

ಆಲೂಗಡ್ಡೆ-ಮೊಸರು

1 ಚಮಚ ಆಲೂಗಡ್ಡೆ ಪೇಸ್ಟ್ ಮತ್ತು 1 ಚಮಚ ತಾಜಾ ಮೊಸರು ಬೆರೆಸಿ ಮಾಸ್ಕ್ ತಯಾರಿಸಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಆಲೂಗಡ್ಡೆ ಮುಖದ ಕಲೆಗಳನ್ನು ಮರೆಮಾಡುತ್ತದೆ.  

Image credits: Pixabay
Kannada

ಇದನ್ನು ಗಮನಿಸಿ

ನಿಮ್ಮ ತ್ವಚೆ ಅತೀ ಸೂಕ್ಷ್ಮವಾಗಿದ್ದರೆ (Sensitive Skin), ನಿಂಬೆ ರಸ ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ಮನೆಮದ್ದುಗಳನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ಪ್ರಯತ್ನಿಸಿ ನೋಡಿ.

Image credits: Getty

Jewellery Watch: ಮದುವೆ, ಪಾರ್ಟಿಗೆ ಬಂದಿದೆ ನೋಡಿ ಟ್ರೆಂಡಿ ಜ್ಯುವೆಲ್ಲರಿ ವಾಚ್‌

Gold Jhumka: ಸದಾ ಟ್ರೆಂಡಿಂಗ್‌ನಲ್ಲಿರುವ ಸಾಂಪ್ರದಾಯಿಕ ಜುಮುಕಿ ಡಿಸೈನ್‌ಗಳು: ಮಹಾಲಕ್ಷ್ಮಿಯಿಂದ ನಾಗಾಸ್‌ವರೆಗೆ

Taapsee Pannu Saree: ತಾಪ್ಸಿ ಪನ್ನು ರೀತಿ ಸೀರೆ ಉಡಿ: ಪತಿ ಮತ್ತೆ ನಿಮ್ಮ ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ!

Gold Tops: 5 ಗ್ರಾಂ ಒಳಗೆ ಸಿಗುವ ಗೋಲ್ಡ್ ಟಾಪ್ಸ್; ನೋಡಿದ್ರೆ ಫಿದಾ ಆಗ್ತೀರಾ!